Top

IPL 2020: ಆರ್​ಸಿಬಿ ವಿರುದ್ಧ ಕಿಂಗ್ಸ್​​ ಇಲೆವೆನ್​ ಪಂಜಾಬ್​ ಅಮೋಘ ಜಯ, ಕೆ.ಎಲ್​ ರಾಹುಲ್​ ಹೊಸ ದಾಖಲೆ

ಸಚಿನ್‌ ಐಪಿಎಲ್‌ನಲ್ಲಿ ಅತಿವೇಗವಾಗಿ 2,000 ರನ್‌ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದರು. ಈ ಸಾಧನೆ ಮಾಡಲು ಸಚಿನ್‌ ಅವರು ತೆಗೆದುಕೊಂಡಿದ್ದ ಇನ್ನಿಂಗ್ಸ್​ 63.

IPL 2020: ಆರ್​ಸಿಬಿ ವಿರುದ್ಧ ಕಿಂಗ್ಸ್​​ ಇಲೆವೆನ್​ ಪಂಜಾಬ್​ ಅಮೋಘ ಜಯ, ಕೆ.ಎಲ್​ ರಾಹುಲ್​ ಹೊಸ ದಾಖಲೆ
X

ಸಚಿನ್‌ ಐಪಿಎಲ್‌ನಲ್ಲಿ ಅತಿವೇಗವಾಗಿ 2,000 ರನ್‌ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದರು. ಈ ಸಾಧನೆ ಮಾಡಲು ಸಚಿನ್‌ ಅವರು ತೆಗೆದು ಕೊಂಡಿದ್ದ ಇನ್ನಿಂಗ್ಸ್​ 63.ಐಪಿಎಲ್​ 2020, 13 ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಅಮೋಘ ಗೆಲುವು ದಾಖಲಿಸಿದೆ. ಅದುವಲ್ಲದೇ ಈ ಪಂದ್ಯದಲ್ಲಿ ಪಂಜಾಬ್​ ತಂಡ ನಾಯಕ, ಕನ್ನಡಿಗ ಕೆ.ಎಲ್​ ರಾಹುಲ್ ಅವರು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದಾರೆ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಾಹುಲ್​ 132 (69) ಗಳಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬ್ಯಾಟ್ಸ್‌ಮನ್​ ಒಬ್ಬರು ಗಳಿಸಿದ ಗರಿಷ್ಠ ರನ್​ ಆಗಿದೆ ಜೊತೆಗೆ 2020ರ ಋತುಮಾನದ ಪ್ರಥಮ ಶತಕ ಕೂಡ ದಾಖಲಾಗಿದೆ. ಈ ಟೂರ್ನಿಯಲ್ಲಿ ಭಾರತೀಯ ಆಟಗಾರನೊಬ್ಬನ ಸಿಡಿಸಿದ ಮೊದಲ ಶತಕಕ್ಕೆ ಈ ಪಂದ್ಯ ಸಾಕ್ಷಿಯಾಗಿದೆ.

2020ರ ಐಪಿಎಲ್‌ ಟೂರ್ನಿಯದಲ್ಲಿ ಮೂಡಿಬಂದ ಈ ದಾಖಲೆಗೂ ಮೊದಲು ಕೆ.ಎಲ್​ ರಾಹುಲ್ ಎರಡು ಬಾರಿ ಜೀವದಾನ ಪಡೆದರು. ರಾಹುಲ್‌ 83 ರನ್‌ ಗಳಿಸಿ ಆಡುವಾಗ ಮತ್ತು 89 ರನ್‌ನಲ್ಲಿ ಇದ್ದಾಗ ಕೊಹ್ಲಿ ಎರಡು ಬಾರಿ ಕ್ಯಾಚ್‌ ಕೈಚೆಲ್ಲಿದರು. ಇದು ಆರ್‌ಸಿಬಿಗೆ ದೊಡ್ಡ ಹೊಡೆತ ಬಿದ್ದಿತ್ತು. ಇದರಿಂದ ಕೆ.ಎಲ್‌. ರಾಹುಲ್‌ ದಾಖಲೆಗಳನ್ನು ಬರೆಯಲು ಸಾಧ್ಯವಾಯಿತು.

ಕೆ.ಎಲ್​. ರಾಹುಲ್‌ ಅವರ 132 ರನ್‌ ಐಪಿಎಲ್‌ನಲ್ಲಿ ತಂಡವೊಂದರ ಕ್ಯಾಪ್ಟನ್‌ವೊಬ್ಬ ಗಳಿಸಿದ ಗರಿಷ್ಠ ರನ್​ ಕೂಡ ಆಗಿದೆ. ಈ ಪಂದ್ಯದಲ್ಲಿ ರಾಹುಲ್​ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಸಂಭ್ರಮಿಸಿದ್ದಾರೆ. ಸಚಿನ್‌ ಐಪಿಎಲ್‌ನಲ್ಲಿ ಅತಿವೇಗವಾಗಿ 2,000 ರನ್‌ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದರು. ಈ ಸಾಧನೆ ಮಾಡಲು ಸಚಿನ್‌ ಅವರು ತೆಗೆದು ಕೊಂಡಿದ್ದ ಇನ್ನಿಂಗ್ಸ್​ 63. ಆದರೆ, ಕೆ.ಎಲ್​ ರಾಹುಲ್‌ 60 ಇನ್ನಿಂಗ್ಸ್‌ಗಳಲ್ಲೇ 2000 ರನ್‌ ಗಳಿಸಿ ದಾಖಲೆ ಬರೆದಿದ್ದಾರೆ.

ಈ ಆವೃತ್ತಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವು ಆರ್‌ಸಿಬಿ ವಿರುದ್ದ 97ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದು ಆರ್‌ಸಿಬಿ ವಿರುದ್ಧ ಪಂಜಾಬ್‌ ತಂಡ ದಾಖಲಿಸಿದ 2ನೇ ಅತಿದೊಡ್ಡ ಗೆಲುವು ಆಗಿದ್ದು, 2011ರಲ್ಲಿ ಕಿಂಗ್ಸ್​​ ಇಲೆವೆನ್​ ಪಂಜಾಬ್‌ ತಂಡ ಆರ್‌ಸಿಬಿ ವಿರುದ್ಧ 111 ರನ್‌ಗಳ ಅಂತರದಿಂದ ಗೆದ್ದಿತ್ತು.

Next Story

RELATED STORIES