IPL 2020: ಇಂದು ಆರ್ಸಿಬಿ ವಸರ್ಸ್ ಎಸ್ಆರ್ಹೆಚ್ ತಂಡಗಳ ನಡುವೆ ಹಣಾಹಣೆ
ಕಳೆದ ಮೂರು ವರ್ಷಗಳಿಂದ ಕಳಪೆ ಪ್ರದರ್ಶನ ನೀಡುತ್ತಿರುವ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡವು ಈ ಬಾರಿ ಕಪ್ ಗೆಲ್ಲಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ.

ದುಬೈ: ಈ ಸಲ ಕಪ್ ನಮ್ದೇ , ಈ ಸಲ ಕಲ್ ನಮ್ದೇ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ಫ್ಯಾನ್ಸ್ಗಳು ಆರ್ಭಟ ಒಂದು ಕಡೆ ಮತ್ತೊಂದು ಕಡೆ ಸದ್ದಿಯಿಲ್ಲದೇ ಆರ್ಸಿಬಿ ತಂಡಕ್ಕೆ ಟಕ್ಕರ್ ನೀಡಲು ಸನ್ ರೈಸರ್ಸ್ ಹೈದರಾಬಾದ್ ತಂಡ ರೆಡಿಯಾಗುತ್ತಿದೆ.
ಸದ್ಯ ಈವರೆಗೆ ಕಪ್ ಗೆಲ್ಲೋಕೆ ಆರ್ಸಿಬಿಗೆ ಸಾಧ್ಯವಾಗಿಲ್ಲ. ಕಳೆದ ಮೂರು ವರ್ಷಗಳಿಂದ ಕಳಪೆ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡವು ಈ ಬಾರಿ ಕಪ್ ಗೆಲ್ಲಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಈ ಮೂಲಕ ಅಭಿಮಾನಿಗಳ ಆಸೆ ಈಡೇರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಇನ್ನು ಈ ಬಾರಿಯ ಆವೃತ್ತಿಯಲ್ಲಿ ಸಾಕಷ್ಟು ಹೊಸತನದೊಂದಿಗೆ ಇಂದಿನ ಚೊಚ್ಚಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲು ಆರ್ಸಿಬಿ ಸಜ್ಜಾಗಿದ್ದು, ಈ ಮೂಲಕ ಶುಭಾರಂಭ ಮಾಡುವ ತವಕದ ಕೊಹ್ಲಿ ಬಾಯ್ಸ್ ತಯಾರಿ ನಡೆಸುತ್ತಿದ್ದಾರೆ.
ಈ ಬಾರಿ ವಿರಾಟ್ ಕೊಹ್ಲಿ ಪಡೆಯಲ್ಲಿ ಯುವ ಹಾಗೂ ಅನುಭವಿ ಆಟಾಗರರು ಕಣಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಈ ಬಾರಿ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶ ನೀಡಲಿದೆ ಎಂಬ ವಿಶ್ವಾಸ ಕೊಹ್ಲಿಯದ್ದು. ವಿರಾಟ್ ಕೊಹ್ಲಿ ಹಾಗೂ ಎಬಿಡಿ ಜೋಡಿಗೆ ಆರನ್ ಫಿಂಚ್ ಈ ಬಾರಿ ಕೈ ಜೋಡಿಸಿದ್ದು, ತಂಡದ ಬ್ಯಾಂಟಿಗ್ ಬಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
The first South Indian derby of the #Dream11IPL is on the cards as @SunRisers face @RCBTweets at the Dubai International Cricket Stadium today.
— IndianPremierLeague (@IPL) September 21, 2020
Preview by @ameyatilak
Read - https://t.co/YzJOltmRcH #SRHvRCB pic.twitter.com/CDE5lzQiHT
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂದ ಸಂಭಾವ್ಯ ಪಟ್ಟಿ ಇಂತಿವೆ.
ಆರೋನ್ ಪಿಂಚ್, ಪಡಿಕಲ್/ಪಾರ್ಥಿವ್, ವಿರಾಟ್ ಕೊಹ್ಲಿ, ಎಬಿಡಿ, ಮೋಯಿನ್ ಅಲಿ, ಶಿವಂ ದುಬೆ, ಮಾರಿಸ್, ವಾಷಿಂಗ್ಟನ್, ಉಮೇಶ್ ಯಾದವ್, ನವದೀಪ್ ಸೈನಿ, ಚಹಾಲ್
ಸನ್ರೈಸರ್ಸ್ ತಂಡದ ಸಂಭಾವ್ಯ ಪಟ್ಟಿ ಇಂತಿವೆ.
ವಾರ್ನರ್, ಬೇರ್ ಸ್ಟೋ, ಮನೀಷ್ ಪಾಂಡೆ, ಪ್ರಿಯಾಂಕಾ ಗಾರ್ಗ್/ವಿರಾಟ್ ಸಿಂಗ್, ವಿಜಯ್ ಶಂಕರ್, ಅಬ್ದುಲ್ ಸಮದ್/ಅಭಿಷೇಕ್ ಶರ್ಮ, ನಬಿ, ರಶೀದ್ ಖಾನ್, ಭುವನೇಶ್ವರ್, ಖಲೀಲ್/ಸಿದ್ಧಾರ್ಥ್ ಕೌಲ್, ನದೀಂ.
ಪಂದ್ಯದ ಸಮಯ
ಸ್ಟಾರ್ ಸ್ಫೋರ್ಟ್ಸ್ , ರಾತ್ರಿ: 7:30