ಈ ಬಾರಿಯ ಐಪಿಎಲ್ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರ ಸುರೇಶ್ ರೈನಾ ಔಟ್
ಸೆಪ್ಟೆಂಬರ್ 19ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರ ಸುರೇಶ್ ರೈನಾ ಅವರು ವೈಯಕ್ತಿಕ ಕಾರಣಗಳಿಂದಾಗಿ ತವರಿಗೆ ಮರಳಿದ್ದು, ಈ ಬಾರಿಯ ಐಪಿಎಲ್ 2020ರ ಸಂಪೂರ್ಣ 13ನೇ ಆವೃತ್ತಿಯಲ್ಲಿ ಅವರು ಆಡುವುದಿಲ್ಲ ಎಂದು ಫ್ರಾಂಚೈಸ್ ಶನಿವಾರ ಟ್ವೀಟ್ ಮಾಡಿದೆ.
ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಗಾಗಿ ಭಾರತಕ್ಕೆ ಮರಳಿದ್ದಾರೆ ಜೊತೆಗೆ ಈ ಆವೃತ್ತಿಯಲ್ಲಿ ಅವರು ಲಭ್ಯವಿರುವುದಿಲ್ಲ. ಈ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ಮತ್ತು ಅವರ ಕುಟುಂಬಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಸಿಎಸ್ಕೆ ತಂಡ ಸಿಇಒ ಕೆ.ಎಸ್. ವಿಶ್ವನಾಥನ್ ತಂಡದ ಅಧಿಕೃತ ಟ್ವಿಟರ್ ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ತನ್ನ ಸಿಎಸ್ಕೆ ಮತ್ತು ಭಾರತ ತಂಡದ ಸಹ ಆಟಗಾರ ಎಂ.ಎಸ್.ಧೋನಿ ಅವರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ರೈನಾ ಅವರು, ಐಪಿಎಲ್ನಲ್ಲಿ ಸಿಎಸ್ಕೆ ಪರ 5,368ರನ್ ಗಳಿಸಿ ಅತಿ ಹೆಚ್ಚು ಸ್ಕೋರರ್ ಆಗಿ ಪ್ರಥಮ ಸ್ಥಾನದಲ್ಲಿದ್ದಾರೆ, ವಿರಾಟ್ ಕೊಹ್ಲಿ ಅವರು 5,412 ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ 13ನೇ ಆವೃತ್ತಿಯು ಸೆಪ್ಟೆಂಬರ್ 19ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.