IPL 2020: ಇಂದು ಸನ್ರೈಸರ್ಸ್ ಹೈದರಾಬಾದ್ ವಸರ್ಸ್ ಕಿಂಗ್ ಇಲೆವೆನ್ ಪಂಜಾಬ್ ನಡುವೆ ಕದನ
ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಸರ್ಸ್ ಸನ್ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಪಂದ್ಯ

ದುಬೈ: ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಸರ್ಸ್ ಸನ್ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಅದ್ಭುತವಾಗಿ ಬ್ಯಾಟಿಂಗ್ ಮಾಡಬಲ್ಲ ಪಡೆಯನ್ನು ಹೊಂದಿರುವ ಪಂಜಾಬ್ ತಂಡವು ಬೌಲಿಂಗ್ ವಿಭಾಗದಲ್ಲಿ ಕಳಪೆ ಪ್ರದರ್ಶನ ತೋರುತ್ತಿದೆ. ಸದ್ಯ ಪಂಜಾಬ್ ಟೀಂ ಅಂಕಪಟ್ಟಿಯ ತಳದಿಂದ ಮೇಲೆದ್ದು ಬರಲು ಹರಸಾಹಸ ಪಡುತ್ತಿದೆ.
ಕೆ.ಎಲ್. ರಾಹುಲ್ ನಾಯಕತ್ವದ ಕಿಂಗ್ಸ್ ತಂಡವು ಈವರೆಗೆ 5 ಪಂದ್ಯಗಳನ್ನಾಡಿ 4ರಲ್ಲಿ ಸೋತಿದೆ. ಡೇವಿಡ್ ವಾರ್ನರ್ ನಾಯಕತ್ವದ ಸನ್ರೈಸರ್ಸ್ 5 ಪಂದ್ಯಗಳಲ್ಲಿ ಆಡಿ 2ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಸದ್ಯ ಇದೀಗ ಬೌಲರ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ತಂಡದಿಂದ ಹೊರಗೆ ಉಳಿದಿದ್ದಾರೆ. ಭುವಿ ಸ್ನಾಯುಸೆಳೆತದ ಕಾರಣ ಈ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೆ.ಎಲ್ ರಾಹುಲ್, ಮಯಂಕ್ ಅಗರವಾಲ್ ಜೋಡಿಯು ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ಗಳಿಸಿರುವವರ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಈ ಇಬ್ಬರೂ ಬ್ಯಾಟ್ಸ್ಮನ್ಗಳು ಈ ಟೂರ್ನಿಯಲ್ಲಿ ತಲಾ ಒಂದು ಶತಕ ಬಾರಿಸಿದ್ದಾರೆ.
ನಿಕೊಲಸ್ ಪೂರನ್ ಕೂಡ ಉತ್ತಮ ಲಯದಲ್ಲಿದ್ದಾರೆ. ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ತಮ್ಮ ಸಹಜ ಆಟಕ್ಕೆ ಮರಳುವ ಅಗತ್ಯವಿದೆ. ಇನ್ನು ಫಾರ್ಮ್ ಕಂಡುಕೊಳ್ಳದ ಕನ್ನಡಿಗ ಕರುಣ್ ನಾಯರ್ ಕಳೆದ ಮ್ಯಾಚ್ನಲ್ಲಿ ಕೈಬಿಡಲಾಗಿತ್ತು. ಜೊತೆಗೆ ಈತನಕ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ಗೇಲ್ಗೆ ಅವಕಾಶ ನೀಡದಿರುವುದು ಕುತೂಹಲ ಮೂಡಿಸಿದೆ.
ಕಿಂಗ್ ಇಲೆವೆನ್ ಪಂಜಾಬ್ ತಂಡದ ಚಿಂತೆ ಇರುವುದು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ, ಸ್ಪಿನ್ನರ್ ರವಿ ಬಿಷ್ಣೋಯಿ ಹೊರತುಪಡಿಸಿ ಉಳಿದ ಬೌಲರ್ಗಳು ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ, ಅದುವಲ್ಲದೇ ರನ್ ಕಂಟ್ರೋಲ್ ಮಾಡುವಲ್ಲಿಯೂ ಸಹ ಎಡುವುತ್ತಿದ್ದಾರೆ. ಆದ್ದರಿಂದ ಇವತ್ತಿನ ಪಂದ್ಯದಲ್ಲಿ ಒಂಚೂರು ಬದಲಾವಣೆ ಆಗುವ ಸಾಧ್ಯತೆಹಗಳಿವೆ.
ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಜಾನಿ ಬೇಸ್ಟೊ ಮತ್ತು ಮನೀಷ್ ಪಾಂಡೆಯರೇ ಬ್ಯಾಟಿಂಗ್ನ ಮುಖ್ಯ ಬ್ಯಾಕ್ಬೋನ್. ಬೌಲಿಂಗ್ ವಿಭಾಗದಲ್ಲಿ ಬಿಗಿಯಾದ ಹಿಡಿತ ಕಳೆದುಕೊಂಡಿರುವುದು ತಂಡಕ್ಕೆ ಕೊಂಚ ಚಿಂತೆಗೆ ದೂಡಿರುವುದು ಸುಳ್ಳಲ್ಲ. ಮುಂಬೈ ಎದುರಿನ ಪಂದ್ಯದಲ್ಲಿ ಟಿ. ನಟರಾಜನ್, ಸಂದೀಪ್ ಶರ್ಮಾ ಮತ್ತು ಸಿದ್ಧಾರ್ಥ್ ಕೌಲ್ ಹೆಚ್ಚು ರನ್ಗಳನ್ನು ಬಿಟ್ಟುಕೊಟ್ಟಿದ್ದರು.