Top

IPL 2020: ಇಂದು ಕೆಕೆಆರ್​ ವಿರುದ್ಧ ಸನ್​ರೈಸರ್ಸ್​​ ಹೈದರಾಬಾದ್​ ಸವಾಲ್​​

ದಿನೇಶ್​ ಕಾರ್ತಿಕ್​ ನಾಯತ್ವದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವು ಸನ್​ರೈಸರ್ಸ್​​ ಹೈದರಾಬಾದ್ ತಂಡದ ಜೊತೆ ಇಂದು ಕಾದಾಟ ನಡೆಸಲಿವೆ.

IPL 2020: ಇಂದು ಕೆಕೆಆರ್​ ವಿರುದ್ಧ ಸನ್​ರೈಸರ್ಸ್​​ ಹೈದರಾಬಾದ್​ ಸವಾಲ್​​
X

ದುಬೈ: ದಿನೇಶ್​ ಕಾರ್ತಿಕ್​ ನಾಯತ್ವದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವು ಸನ್​ರೈಸರ್ಸ್​​ ಹೈದರಾಬಾದ್ ತಂಡದ ಜೊತೆ ಇಂದು ಕಾದಾಟ ನಡೆಸಲಿವೆ.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್​) ಟೂರ್ನಿಯಲ್ಲಿ ಉಭಯ ತಂಡಗಳೂ ತಲಾ ಒಂದು ಪಂದ್ಯ ಆಡಿವೆ. ಆದರೆ ಗೆದ್ದಿಲ್ಲ. ಹೀಗಾಗಿ ಎರಡು ತಂಡಗಳು ಜಯದ ಆರಂಭ ಮಾಡಲು ತುದಿಗಾಲಿನಲ್ಲಿ ನಿಂತಿವೆ. ಕೆಕೆಆರ್​ ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ ಮತ್ತು ಎಸ್​ಆರ್​ಹೆಚ್​ ತಂಡವು ಆರ್‌ಸಿಬಿ ಎದುರು ಸೋತಿದ್ದವು.

ಕೆಕೆಆರ್​ ತಂಡದಲ್ಲಿರುವ ಸ್ಫೋಟಕ ಬ್ಯಾಟ್ಸ್‌ಮನ್​ಗಳಾದ ಆ್ಯಂಡ್ರೆ ರಸೆಲ್, ಶುಭಮನ್ ಗಿಲ್, ನಿತೀಶ್ ರಾಣಾ, ಇಯಾನ್ ಮಾರ್ಗನ್ ಮತ್ತು ದಿನೇಶ್ ಕಾರ್ತಿಕ್​ ಅವರು ಉತ್ತಮ ಫಾರ್ಮ್​ಗೆ ಮರಳಿದರೆ ಬೃಹತ್​ ಮೊತ್ತ ದಾಖಲಿಸಬಹುದು. ಬೌಲಿಂಗ್‌ ವಿಭಾಗದಲ್ಲಿಯೂ ಪ್ಯಾಟ್‌ ಕಮಿನ್ಸ್‌ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿದರೆ, ಶಿವಂ ಮಾವಿ, ಸ್ಪಿನ್ನರ್ ಕುಲದೀಪ್ ಯಾದವ್ ಅವರೊಂದಿಗೆ ಸಾಥ್​ ನೀಡಿದಂತಾಗುತ್ತದೆ.

ಸನ್‌ರೈಸರ್ಸ್‌ ತಂಡದ ಬ್ಯಾಟಿಂಗ್‌ ಲೈನ್​​​ಅಪ್ ಬಲಿಷ್ಠವಾಗಿದ್ದು, ನಾಯಕ ಡೇವಿಡ್​ ವಾರ್ನರ್ ಕಳೆದ ಪಂದ್ಯದಲ್ಲಿ ಅಕಸ್ಮಾತ್ ರನ್​ಔಟ್​​ ಆಗಿ ಪೆವಿಲಿಯನ್​ ಕಡೆ ಮುಖಮಾಡಿದರು ಇದು ತಂಡಕ್ಕೆ ದೊಡ್ಡ ನಷ್ಟ ಉಂಟು ಮಾಡಿತ್ತು. ಆದರೆ, ವಿಕೆಟ್​​ ಕೀಪರ್​ ಜಾನಿ ಬೆಸ್ಟೋ ಮತ್ತು ಮನೀಷ್ ಪಾಂಡೆ ಉತ್ತಮ ಇನ್ನಿಂಗ್ಸ್​​ ಕಟ್ಟಿದರು. ತದನಂತರ ಬಂದ ಎಲ್ಲಾ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು.

ಇನ್ನು ಇಂದಿನ ಪಂದ್ಯದಲ್ಲಿ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್​ ಸ್ಥಾನ ಸಿಗುವ ಸಾಧ್ಯತೆಯಿದೆ. ಯುವ ಆಟಗಾರ ಪ್ರೀಯಂ ಗರ್ಗ್‌ಗೆ ಮತ್ತೆ ಅವಕಾಶ ಕೊಟ್ಟರೇ ಅಚ್ಚರಿ ಪಡುವಂತಿಲ್ಲ. ಅದರಲ್ಲೂ ಸ್ಪಿನ್ ಬೌಲರ್‌ಗಳ ವಿರುದ್ಧ ಆಡುವಲ್ಲಿ ಎಡವಿದ್ದರು. ಬೌಲಿಂಗ್ ವಿಭಾಗದಲ್ಲಿರುವ ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್, ಸ್ಪಿನ್ನರ್ ರಶೀದ್ ಖಾನ್, ಸಿದ್ಧಾರ್ಥ್ ಕೌಲ್ ಪಂದ್ಯದ ಫಲಿತಾಂಶವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.

Next Story

RELATED STORIES