Top

IPL 2020: ಸನ್​ರೈಸರ್ಸ್​​ ಹೈದರಾಬಾದ್​ಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು​ ಸವಾಲ್​

ಇಂದು ಈ ಎರಡೂ ತಂಡಗಳು ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ

IPL 2020: ಸನ್​ರೈಸರ್ಸ್​​ ಹೈದರಾಬಾದ್​ಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು​ ಸವಾಲ್​
X

ಅಬುಧಾಬಿ: ಐಪಿಎಲ್​ನಲ್ಲಿ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಶಸ್ತಿ ಜಯದ ಕನಸಿಗೆ ಡೇವಿಡ್‌ ವಾರ್ನರ್ ನಾಯಕತ್ವದ ಸನ್‌ರೈಸರ್ಸ್‌ ಹೈದರಾಬಾದ್ ಭಂಗ ಉಂಟು ಮಾಡಿತ್ತು. ಇಂದು ಈ ಎರಡೂ ತಂಡಗಳು ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ.

ಈ ಸಲ ಎಲಿಮಿನೇಟರ್‌ ಪಂದ್ಯದಲ್ಲಿ ವಿರಾಟ್ ಮತ್ತು ವಾರ್ನರ್ ನಡುವೆ ಕಾಳಗ ನಡೆಯಲಿದ್ದು, ಯಾವ ತಂಡ ಸೋತಲುವುದೋ ಆ ತಂಡವು ಫೈನಲ್‌ಗೆ ಹೋಗುವ ಅವಕಾಶ ಕಳೆದುಕೊಳ್ಳುತ್ತದೆ. ಗೆದ್ದವರು ಎರಡನೇ ಕ್ವಾಲಿಫೈಯರ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಟೀಂ ಸನ್‌ರೈಸರ್ಸ್ ವಿರುದ್ಧ ಗೆದ್ದರೇ ಚೊಚ್ಚಲ ಪ್ರಶಸ್ತಿಯ ಅವಕಾಶವನ್ನು ಜೀವಂತವಾಗಿರಿಕೊಳ್ಳಲಿವುದಲ್ಲದೇ, 2016ರಲ್ಲಿ ತವರಿನಲ್ಲಿ ಸೋತಿದ್ದ ಸೇಡನ್ನು ಸನ್‌ರೈಸರ್ಸ್‌ ವಿರುದ್ಧ ಆರ್​ಸಿಬಿ ತಂಡ ತೀರಿಸಿಕೊಳ್ಳಬಹುದು.

2016ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್​ನಿಂದ ರನ್​ಗಳ ಹೊಳೆಯನ್ನೇ ಹರಿಸಿದ್ದರು. ಪರಿಣಾಮ ಆರ್‌ಸಿಬಿ ತಂಡ ಅಮೋಘವಾಗಿ ಆಡಿ ಫೈನಲ್ ಪ್ರವೇಶ ಪಡೆದಿತ್ತು. ಆ ಪಂದ್ಯದಲ್ಲಿ ಕ್ರಿಸ್​ಗೇಲ್ ಮತ್ತು ವಿರಾಟ್ ಅರ್ಧಶತಕಗಳನ್ನೂ ಸಿಡಿಸಿದ್ದರು. ಆದರೆ, ವಾರ್ನರ್​ ಅಬ್ಬರದ ಬ್ಯಾಟಿಂಗ್​ನಿಂದ ಆರ್​ಸಿಬಿ ತಂಡ ಮಂಕಾಯಿತು.

ಆರ್​ಸಿಬಿ ತಂಡದಲ್ಲಿರುವ ದೇವದತ್ತ ಪಡಿಕ್ಕಲ್, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಅವರೇ ಆರ್‌ಸಿಬಿಯ ಬ್ಯಾಟಿಂಗ್ ಬೆನ್ನೆಲುಬು. ಶಿವಂ ದುಬೆ ಇದುವರೆಗೂ ನಿರೀಕ್ಷೆಗೆ ತಕ್ಕಂತೆ ಆಟ ಪ್ರದರ್ಶನ ನೀಡಿಲ್ಲ. ಅದುವಲ್ಲದೇ ಆರ್​ಸಿಬಿ ತಂಡದ ಮಧ್ಯಮಕ್ರಮಾಂಕದ ಬ್ಯಾಟಿಂಗ್ ಲೈನ್​ಅಪ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಜೋಶ್ ಫಿಲಿಪ್ ಬದಲು ಆ್ಯರನ್ ಫಿಂಚ್ ಅವರನ್ನು ಈ ಪಂದ್ಯದಲ್ಲಿ ಮತ್ತೆ ಮೈದಾನಕ್ಕೆ ಇಳಿಸುವತ್ತ ವಿರಾಟ್​ ಕೊಹ್ಲಿ ಚಿಂತನೆ ಮಾಡಿರಬಹುದು. ಕೊನೆಯ ಹಂತದ ಓವರ್‌ಗಳಲ್ಲಿ ಅಲ್​ರೌಂಡರ್​ ವಾಷಿಂಗ್ಟನ್ ಸುಂದರ್, ಕ್ರಿಸ್ ಮೊರಿಸ್ ಅವರ ಬ್ಯಾಟಿಂಗ್​ನಿಂದ ಒಂದಿಷ್ಟು ರನ್‌ಗಳನ್ನು ಬಂದರೆ ತಂಡಕ್ಕೆ ಅದು ಹೆಚ್ಚು ಅನುಕೂಲವಾಗುತ್ತದೆ.

ಆರ್​ಸಿಬಿ ತಂಡ ಬೌಲಿಂಗ್‌ ವಿಭಾಗದಲ್ಲಿ ಹೆಚ್ಚಿನ ಚಿಂತೆಯಿಲ್ಲ. ನವದೀಪ್ ಸೈನಿ, ಮೊರಿಸ್, ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಮೇಲೆ ವಿಶ್ವಾಸವಿಡಬಹುದು. ಮೊಹಮ್ಮದ್ ಸಿರಾಜ್ ಕೂಡ ತಮ್ಮ ನೈಜ ಸಾಮರ್ಥ್ಯ ಪ್ರದರ್ಶನ ಮಾಡುವ ಮತ್ತೊಂದು ಅವಕಾಶ ಸಿಗಲಿದೆ.

ಸದ್ಯ ಸನ್‌ರೈಸರ್ಸ್​ ಟೀಂನಲ್ಲಿ ಇಂತಹ ಚಿಂತೆಗಳು ಇಲ್ಲ. ಟೂರ್ನಿಯ ಮಧ್ಯದಲ್ಲಿಯೇ ಭುವನೇಶ್ವರ್ ಕುಮಾರ್ ಗಾಯಗೊಂಡು ತವರಿಗೆ ಮರಳಿದ್ದರು. ಆದರೆ, ಸಂದೀಪ್ ಶರ್ಮಾ ಅವರ ಸ್ಥಾನವನ್ನು ತುಂಬುತ್ತಿದ್ದಾರೆ. ಟಿ ನಟರಾಜನ್, ಸ್ಪಿನ್ನರ್ ರಶೀದ್ ಖಾನ್ ಅವರು ಪಂದ್ಯ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯ ಬೌಲರ್‌ಗಳಾಗಿದ್ದಾರೆ.

ಬ್ಯಾಟಿಂಗ್‌ ವಿಭಾಗದಲ್ಲಿ ವಾರ್ನರ್, ವೃದ್ಧಿಮಾನ್ ಸಹಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮನೀಷ್ ಪಾಂಡೆ, ವಿಜಯಶಂಕರ್, ಜಾನಿ ಬೆಸ್ಟೊ, ಪ್ರಿಯಂ ಗರ್ಗ್ ತಂಡದ ಮೊತ್ತ ಹೆಚ್ಚಿಸುವ ಭರವಸೆ ಬ್ಯಾಟ್ಸ್‌ಮನ್‌ಗಳು. ಇವರನ್ನು ಕಟ್ಟಿಹಾಕುವ ಸವಾಲು ಆರ್‌ಸಿಬಿ ಬೌಲರ್‌ಗಳ ಮುಂದಿದೆ.

Next Story

RELATED STORIES