Top

IPL 2020: ಕೊಲ್ಕತ್ತ ನೈಟ್​​ ರೈಡರ್ಸ್​​ ತಂಡಕ್ಕೆ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಸವಾಲ್​

ಇಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಕೊಹ್ಲಿ ಮತ್ತು ಕಾರ್ತಿಕ್​ ತಂಡಗಳು ಮುಖಾಮುಖಿ

IPL 2020: ಕೊಲ್ಕತ್ತ ನೈಟ್​​ ರೈಡರ್ಸ್​​ ತಂಡಕ್ಕೆ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಸವಾಲ್​
X

ಶಾರ್ಜಾ: ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಕೊಲ್ಕತ್ತ ನೈಟ್​ ರೈಡರ್ಸ್​​ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರಿಬ್ಬರೂ ಶನಿವಾರದಂದು ತಂತಮ್ಮ ತಂಡಗಳ ಗೆಲುವಿನ ಪ್ರಮುಖ ರೂವಾರಿಗಳಾಗಿದ್ದರು ಜೊತೆಗೆ ಪಂದ್ಯಶ್ರೇಷ್ಠ ಗೌರವ ಗಳಿಸಿದ್ದರು.

ಇಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಕೊಹ್ಲಿ ಮತ್ತು ಕಾರ್ತಿಕ್ ತಂಡಗಳು ಮುಖಾಮುಖಿ ಆಗಲಿದ್ದಾರೆ. ವಿರಾಟ್ ಕೊಹ್ಲಿ (90) ಮೊನ್ನೆ ಚೆನ್ನೈ ಸೂಪರ್ ಕಿಂಗ್ಸ್ ಎದುರು ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದರು. ಅಂದೇ ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು ಕೋಲ್ಕತ್ತದ ಗೆಲುವಿಗೆ ದಿನೇಶ್ ಅರ್ಧಶತಕದ ಆಟವಾಡಿದ್ದರು.

ಇದುವರೆಗೆ ನಡೆದಿರುವ ಟೂರ್ನಿಯಲ್ಲಿ ಎರಡು ತಂಡಗಳು 6 ಪಂದ್ಯಗಳನ್ನು ಆಡಿವೆ. ಎರಡೂ ತಂಡಗಳು ತಲಾ ನಾಲ್ಕರಲ್ಲಿ ಜಯಿಸಿವೆ. ಮತ್ತೆರೆಡರಲ್ಲಿ ಎರಡರಲ್ಲಿ ನಿರಾಸೆ ಅನುಭವಿಸಿವೆ. ಆದರೆ, ರನ್‌ರೇಟ್‌ನಲ್ಲಿ ಕೋಲ್ಕತ್ತ ತಂಡ ಕೊಂಚ ಮುಂದಿದೆ.

ಕೆಕೆಆರ್​ ತಂಡದ ಆ್ಯಂಡ್ರೆ ರಸೆಲ್ ಗಾಯ ಮತ್ತು ಸ್ಪಿನ್ನರ್ ಸುನೀಲ್ ನಾರಾಯಣ್ ಅವರು ನಿಯಮಬಾಹಿರ ಬೌಲಿಂಗ್ ಶೈಲಿಯ ಆರೋಪಕ್ಕೊಳಗಾಗಿರುವುದು ತಂಡಕ್ಕೆ ಹಿನ್ನೆಡೆಯಾಗಿ ಉಂಟು ಮಾಡಬಹುದು. ಪಂಜಾಬ್​ ಎದುರಿನ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ನಿರೀಕ್ಷೆಗೆ ತಕ್ಕಂತೆ ಆಟವಾಡಿದ್ದು ತಂಡಕ್ಕೆ ಪ್ಲಸ್ ಪಾಯಿಂಟ್.

ಆರ್‌ಸಿಬಿಯಲ್ಲಿರುವ ದೇವದತ್ತ ಪಡಿಕ್ಕಲ್, ಆ್ಯರನ್ ಫಿಂಚ್, ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ವಿರುದ್ಧ ಬೌಲಿಂಗ್ ಮಾಡುವ ಸವಾಲು ಪ್ರಸಿದ್ಧ ಅವರ ಮುಂದಿದೆ. ಪಡಿಕ್ಕಲ್​ ಅವರು ಈಗಾಗಲೇ ಮೂರು ಅರ್ಧಶತಕ ಬಾರಿಸಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಕೋಲ್ಕತ್ತದ ಬೌಲರ್‌ಗಳಾದ ಪ್ಯಾಟ್​ಕಮಿನ್ಸ್, ಕಮಲೇಶ್ ನಾಗರಕೋಟಿ ಅವರಿಗೂ ಆರ್‌ಸಿಬಿ ಬ್ಯಾಟಿಂಗ್ ಲೈನ್​ಅಪ್​ ಬ್ರೇಕ್​ ಮಾಡಬೇಕಾದ ಅನಿವಾರ್ಯತೆಯಿದೆ.

ಕೆಕೆಆರ್‌ ಬ್ಯಾಟಿಂಗ್‌ ವಿಭಾಗ ಉತ್ತಮವಾಗಿದ್ದು, ಶುಭಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ ಮತ್ತು ದಿನೇಶ್ ಕಾರ್ತಿಕ್​ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ, ಆರ್‌ಸಿಬಿಯಲ್ಲಿ ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಯಜುವೇಂದ್ರ ಚಾಹಲ್ ಮತ್ತು ಉಡಾನ ಅವರನ್ನು ಎದುರಿಸಲು ಕೊಲ್ಕತ್ತ ತಂಡದ ಬ್ಯಾಟ್ಸ್‌ಮನ್‌ಗಳು ಪೂರ್ವ ತಯಾರಿ ಮಾಡಿಕೊಂಡು ಕಣಕ್ಕಿಳಿಯುವುದು ಅನಿವಾರ್ಯ.

Next Story

RELATED STORIES