Top

IPL 2020: ರಾಜಸ್ಥಾನ್​ ರಾಯಲ್ಸ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸವಾಲ್​

ಆರ್‌ಸಿಬಿ ಹಾಗೂ ಆರ್‌ಆರ್‌ ನಡುವಿನ ಪಂದ್ಯ ಮಧ್ಯಾಹ್ನ 3:30 ರಿಂದ ಶುರು. ಸಂಜೆ 7:30ಕ್ಕೆ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಕೊಲ್ಕತ್ತ ನೈಟ್​ ರೈಡರ್ಸ್​​ ತಂಡ ನಡುವೆ ಪಂದ್ಯ ಆರಂಭ.

IPL 2020: ರಾಜಸ್ಥಾನ್​ ರಾಯಲ್ಸ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸವಾಲ್​
X

ದುಬೈ: ಐಪಿಎಲ್‌ 2020, ಇಂದು ಎರಡು ಪಂದ್ಯಗಳು ನಡೆಯಲಿದೆ. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡ ರಾಜಸ್ಥಾನ್ ರಾಯಲ್ಸ್ (ಆರ್​ಆರ್) ತಂಡಗಳು ಮುಖಾಮುಖಿ ಆಗಲಿವೆ. ಈ ಆವೃತ್ತಿಯಲ್ಲಿ ಎರಡು ಪಂದ್ಯಗಳು ನಡೆಯಲಿದ್ದು, ಈ ಪೈಕಿ ಆರ್‌ಸಿಬಿ ಹಾಗೂ ಆರ್‌ಆರ್‌ ನಡುವಿನ ಪಂದ್ಯ ಮಧ್ಯಾಹ್ನ 3:30 ರಿಂದ ಶುರುವಾಗಲಿದೆ. ಸಂಜೆ 7:30ಕ್ಕೆ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಕೊಲ್ಕತ್ತ ನೈಟ್​ ರೈಡರ್ಸ್​​ ತಂಡ ನಡುವೆ ಪಂದ್ಯ ಆರಂಭವಾಗಲಿದೆ.

ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಕಳೆದ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಿತ್ತು. ಈ ಪಂದ್ಯ ರೋಚಕ 'ಟೈ' ನಲ್ಲಿ ಅಂತ್ಯವಾದ ಬಳಿಕ ಸೂಪರ್ ಓವರ್‌ನಲ್ಲಿ ಆರ್‌ಸಿಬಿ ಗೆದ್ದಿತ್ತು. ಆರ್‌ಸಿಬಿ ತಂಡದಲ್ಲಿ ಆರೋನ್​ ಫಿಂಚ್, ದೇವದತ್​ ಪಡಿಕ್ಕಲ್, ಎಬಿ ಡಿಲಿಯರ್ಸ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಆದರೆ, ಕೊಹ್ಲಿ ಟೂರ್ನಿಯಲ್ಲಿ ಈವರೆಗೆ ಫಾರ್ಮ್​ನಲ್ಲಿ ಇಲ್ಲದೇ ಇರುವುದು ತಂಡದ ಪಾಲಿಗೆ ಹಿನ್ನೆಡೆಯಾಗಿದೆ.

ರಾಜಸ್ಥಾನ್ ರಾಯಲ್ಸ್ ಮೊದಲ ಎರಡು ಪಂದ್ಯಗಳನ್ನು ಶಾರ್ಜಾ ಕ್ರಿಡಾಂಗಣದಲ್ಲಿ ಆಡಿ ಭರ್ಜರಿ ಬ್ಯಾಟಿಂಗ್ ಮೂಲಕ ಟೂರ್ನಿಯಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ದುಬೈ ಕ್ರೀಡಾಂಗಣದಲ್ಲಿ ಆಡಿದ ತನ್ನ ಮೂರನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಬ್ಯಾಟಿಂಗ್​ ಮಾಡಲು ಕಷ್ಟಪಟ್ಟಿತ್ತು. ಪಂದ್ಯವನ್ನು ನೀರಸವಾಗಿ ಸೋಲು ಕಂಡಿತು. ಇವತ್ತಿನ ಪಂದ್ಯ ಅಬುಧಾಬಿಯಲ್ಲಿ ನಡೆಯಲಿದ್ದು, ಆರ್​ಆರ್​ ತಂಡ ಬ್ಯಾಟಿಂಗ್​ ಕ್ರಮಾಂಕ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲವಿದೆ.

ಆರ್‌ಸಿಬಿ ಸಂಭಾವ್ಯ ತಂಡ:

ಆರೋನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ಗುರ್ಕೀರತ್ ಸಿಂಗ್ ಮನ್, ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಇಸುರು ಉದಾನಾ, ನವದೀಪ್ ಸೈನಿ, ಆಡಮ್ ಜಂಪಾ, ಯುಜ್ವೇಂದ್ರ ಚಾಹಲ್.

ಆರ್‌ಆರ್‌ ಸಂಭಾವ್ಯ ತಂಡ:

ಜೋಸ್ ಬಟ್ಲರ್, ಸ್ಟೀವ್ ಸ್ಮಿತ್, ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ಮನನ್ ವೊಹ್ರಾ, ರಾಹುಲ್ ತಿವಾಟಿಯಾ, ಟಾಮ್ ಕರ್ರನ್, ಮಾಯಾಂಕ್ ಮಾರ್ಕಂಡೆ, ಕಾರ್ತಿಕ್ ತ್ಯಾಗಿ / ಆಕಾಶ್ ಸಿಂಗ್, ಜೋಫ್ರಾ ಆರ್ಚರ್, ಅಂಕಿತ್ ರಾಜ್‌ಪೂತ್

Next Story

RELATED STORIES