IPL 2020: ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಪಂದ್ಯ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ಸೇಡು ತೀರಿಸಿಕೊಳ್ಳವ ಆತುರದಲ್ಲಿದೆ.

ದುಬೈ: 13 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿ-20 ಕ್ರಿಕೆಟ್ನ ಪ್ರಥಮ ಸುತ್ತಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅತಿ ಹೆಚ್ಚು ಕಹಿ ಅನುಭವಿಸಿದ್ದು, ಇಂದಿನ ಪಂದ್ಯದಲ್ಲಿ ರಾಯಲ್ಸ್ ತಂಡ ಮತ್ತೆ ಜಯ ಹಾದಿಗೆ ಮರಳು ಸಿದ್ಧತೆ ಮಾಡಿಕೊಂಡಿದೆ.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ಸೇಡು ತೀರಿಸಿಕೊಳ್ಳವ ಆತುರದಲ್ಲಿದೆ.
ಸದ್ಯ ಆರ್ಆರ್ ತಂಡ ಆಡಿರುವ ಏಳು ಪಂದ್ಯಗಳಲ್ಲಿ ಮೊದಲೆರಡರಲ್ಲಿ ಜಯ ಗಳಿಸಿತ್ತು. ಆದರೆ, ನಂತರದ ನಾಲ್ಕು ಪಂದ್ಯಗಳಲ್ಲಿ ಸತತ ಸೋಲು ಕಂಡು ಕಂಗೆಟ್ಟಿತ್ತು. ಹೋದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ಜಯಿಸಿತು.
ಲೋ ಆರ್ಡರ್ ಬ್ಯಾಟ್ಸ್ಮನ್ಗಳಾದ ಬಿಹು ಡ್ಯಾನ್ಸರ್, ರಿಯಾನ್ ಪರಾಗ್ ಮತ್ತು ಆಲ್ರೌಂಡರ್ ರಾಹುಲ್ ತೆವಾಟಿಯಾ ಅವರ ಅಬ್ಬರದ ಜೊತೆಯಾಟದಿಂದ ಗೆಲುವು ಒಲಿದಿತ್ತು. ಆ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸೇರಿದಂತೆ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಬಿಗ್ ಇನಿಂಗ್ಸ್ ಆಡಿರಲಿಲ್ಲ. ಇದರ ನಡುವೆ ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಜಯದೇವ್ ಉನದ್ಕತ್ ಮತ್ತು ತೆವಾಟಿಯಾ ಉತ್ತಮವಾಗಿ ಬೌಲಿಂಗ್ ಮಾಡುತ್ತಿರುವುದು ತಂಡಕ್ಕೆ ಕೊಂಚ ಸಮಾಧಾನದ ಸಂಗತಿ.
ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಪರಾಭವಗೊಂಡು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕಿಳಿದಿತ್ತು. ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗಗಳಲ್ಲಿ ಉತ್ತಮವಾಗಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡದವರಿಗೆ ಕಠಿಣ ಸವಾಲು ಎದುರಾಗುವುದು ಖಚಿತ.
ಮೊದಲ ಸುತ್ತಿನ ಪಂದ್ಯದಲ್ಲಿ ಡೆಲ್ಲಿಯ ಕಗಿಸೊ ರಬಾಡ ಮೂರು ವಿಕೆಟ್ ಗಳಿಸಿ ರಾಯಲ್ಸ್ ಬ್ಯಾಟಿಂಗ್ ಪಡೆಗೆ ಶಾಕ್ ನೀಡಿದ್ದರು. ರಾಯಲ್ಸ್ನ ಸಂಜು ಸ್ಯಾಮ್ಸನ್, ಸ್ಮಿತ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಮತ್ತು ರಾಬಿನ್ ಉತ್ತಪ್ಪ ಅವರು ಡೆಲ್ಲಿ ಬೌಲಿಂಗ್ ಎದುರಿಸಿ ತಕ್ಕ ಆಟ ಪ್ರದರ್ಶನ ನೀಡಿದರೆ ಮಾತ್ರ ಜಯದ ಆಸೆ ಈಡೇರಬಹುದು.