IPL 2020: ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆಲ್ಲುವ ಕನವರಿಕೆ
ಇಂದು ಶಾರ್ಜಾ ಮೈದಾನದಲ್ಲಿ ಸ್ಟೀವನ್ ಸ್ಮಿತ್ ಬಳಗವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲ್ಅನ್ನು ಎದುರಿಸಲಿದ್ದು, ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳುವ ಕನವರಿಸುತ್ತಿದೆ.

ಈ ಬಾರಿಯ ಐಪಿಎಲ್ ಆವೃತ್ತಿ ಪ್ರಾರಂಭದಲ್ಲಿ ಅಬ್ಬರಿಸಿದ್ದ ರಾಜಸ್ಥಾನ ರಾಯಲ್ಸ್ ತಂಡ ದಿಢೀರನೇ ಮಂಕಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲುಂಡಿದೆ. ಇಂದು ಶಾರ್ಜಾ ಮೈದಾನದಲ್ಲಿ ಸ್ಟೀವನ್ ಸ್ಮಿತ್ ಬಳಗವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲ್ಅನ್ನು ಎದುರಿಸಲಿದ್ದು, ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳುವ ಕನವರಿಸುತ್ತಿದೆ.
ಶಾರ್ಜಾ ಕ್ರೀಡಾಂಗಣದಲ್ಲಿ ಈ ಮೊದಲು ಆಡಿದ್ದ ಎರಡೂ ಪಂದ್ಯಗಳಲ್ಲಿಯೂ ರಾಜಸ್ಥಾನ್ ರಾಯಲ್ಸ್ ಗೆದ್ದಿತ್ತು. ಆದರೆ, ದುಬೈ ಮತ್ತು ಅಬುಧಾಬಿಯಲ್ಲಿ ಸ್ಮಿತ್ ನೇತೃತ್ವದ ತಂಡವು ತನ್ನ ಎದುರಾಳಿಗಳನ್ನು ತಂಡವನ್ನು ಮಣಿಸಲು ಪರದಾಡಿತ್ತು.
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವುದು ಸದ್ಯಕ್ಕೆ ಸುಲಭವಲ್ಲ. ಇವರೆಗೆ ಆಡಿರುವ ಒಟ್ಟು ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಒಂದರಲ್ಲಿ ಮಾತ್ರ ಡಿಸಿ ತಂಡ ಸೋತಿದೆ. ಡೆಲ್ಲಿ ಬಳಗವು ಎಲ್ಲ ವಿಭಾದಲ್ಲಿಯೂ ಶಿಸ್ತಿನ ಆಟವಾಡುತ್ತಿದೆ. ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ರಿಷಭ್ ಪಂತ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಅವರನ್ನು ಕಟ್ಟಿಹಾಕುವುದೇ ರಾಜಸ್ಥಾನ್ ಬೌಲರ್ಗಳ ಮುಂದಿರುವ ದೊಡ್ಡ ಸವಾಲ್. ಬೌಲಿಂಗ್ ವಿಭಾಗದಲ್ಲಿ ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.
ರಾಜಸ್ಥಾನ ತಂಡದ ನಾಯಕ ಸ್ಮಿತ್ ಮತ್ತು ಸ್ಫೋಟಕ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಅವರು ಲಯಕ್ಕೆ ಮರಳಿದರೆ ತಂಡಕ್ಕೆ ಸ್ವಲ್ಪ ಚೇತರಿಕೆ ಕಾಣಬಹುದು. ಜೋಸ್ ಬಟ್ಲರ್, ರಾಹುಲ್ ತೆವಾಟಿಯಾ, ಮಹಿಪಾಲ್ ಲೊಮ್ರೊರ್ ಈ ಹಿಂದಿನ ಪಂದ್ಯಗಳಲ್ಲಿ ಉತ್ತಮ ಕಾಣಿಕೆ ನೀಡುವ ಪ್ರಯತ್ನ ಮಾಡಿದ್ದರು.
ಆರ್ಚರ್, ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲಿ ಒಂದಿಷ್ಟು ಸಿಕ್ಸರ್ಗಳನ್ನು ಸಿಡಿಸುತ್ತ ಪಂದ್ಯದ ಡೆತ್ ಓವರ್ ಬೌಲರ್ಗಳಿಗೆ ಕಂಟಕವಾಗುತ್ತಿದ್ದಾರೆ. ಆದರೆ, ಯಶಸ್ವಿ ಜೈಸ್ವಾಲ್ ಮತ್ತು ಕಾರ್ತಿಕ್ ತ್ಯಾಗಿ ತಮಗೆ ಸಿಕ್ಕ ಅವಕಾಶವನ್ನು ಬಳಿಸಿಕೊಳ್ಳವಲ್ಲಿ ಎಡವುತ್ತಿದ್ದಾರೆ. ಇನ್ನು ಆಲ್ರೌಂಡರ್ ಬೆನ್ ಸ್ಟೋಕ್ಸ್ ಅಕ್ಟೋಬರ್ 11ರ ತನಕ ಹೋಮ್ ಕ್ವಾರಂಟೈನ್ನಲ್ಲಿರುವುದರಿಂದ ಅವರು ಲಭ್ಯವಿರುವುದಿಲ್ಲ. ಬೌಲಿಂಗ್ ವಿಭಾದಲ್ಲಿ ರಬಾಡ, ನೊರ್ಟಿಯೆ ಮತ್ತು ಹರ್ಷಲ್ ಪಟೇಲ್ ತಂಡವನ್ನು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ್ರೆ ಖಂಡಿತ ತಂಡವು ಸೋಲಿನಿಂದ ಹೊರಬರಲು ಸಾಧ್ಯವಾಗಬಹುದು.