Top

IPL 2020: ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕಾಗಿ ಎರಡು ತಂಡಗಳ ನಡುವೆ ಇಂದು ಹೈವೋಲ್ಟೆಜ್​ ಪಂದ್ಯ

ಲೀಗ್ ಹಂತದಲ್ಲಿ ಉಭಯ ತಂಡಗಳಿಗೂ ಇದು ಕೊನೆಯ ಪಂದ್ಯವಾಗಿದೆ

IPL 2020: ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕಾಗಿ ಎರಡು ತಂಡಗಳ ನಡುವೆ ಇಂದು ಹೈವೋಲ್ಟೆಜ್​ ಪಂದ್ಯ
X

ಅಬುಧಾಬಿ: ಇಂಡಿಯನ್​ ಪ್ರಿಮೀಯರ್​ ಲೀಗ್​ 2020ರ ಆವೃತ್ತಿಯ ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್​ ತಂಡದ ನಂತರ ಸ್ಥಾನವನ್ನು ಗಿಟ್ಟಿಸಲಿಕೊಳ್ಳಲು ಎರಡು ಬಲಿಷ್ಠ ತಂಡಗಳು ಇಂದು ಕಾದಾಟ ನಡೆಸಲಿವೆ.

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಅಬುಧಾಬಿ ಮೈದಾನದಲ್ಲಿ ಮುಖಾಮುಖಿಯಾಲಿವೆ. ಲೀಗ್ ಹಂತದಲ್ಲಿ ಉಭಯ ತಂಡಗಳಿಗೂ ಇದು ಕೊನೆಯ ಪಂದ್ಯವಾಗಿದ್ದು, ತಲಾ 14 ಪಾಯಿಂಟ್ಸ್ ಗಳಿಸಿರುವ ಈ ತಂಡಗಳು ಇನ್ನೂ 2 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡರೆ ದ್ವಿತೀಯ ಸ್ಥಾನ ಖಚಿತ.

ಪ್ಲೇ ಆಫ್​ ಹಂತದ ಪ್ರವೇಶಕ್ಕಾಗಿ ಅತಿ ಹೆಚ್ಚು ಪೈಪೋಟಿ ನಡೆಯುತ್ತಿರುವ ಆವೃತ್ತಿ ಈ ಬಾರಿ ಐಪಿಎಲ್​ನದ್ದು. ಆದ್ದರಿಂದಲೇ ಈಗ ಬೆಂಗಳೂರು ಹಾಗೂ ಡೆಲ್ಲಿ ತಂಡಗಳ ನಡುವಿನ ಪಂದ್ಯವನ್ನು ಕ್ವಾರ್ಟರ್‌ ಫೈನಲ್‌ ಎಂದೇ ಕ್ರಿಕೆಟ್​ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ಕೊಹ್ಲಿ ತಂಡವು ನಾನು ಆಡಿದ ಕೊನೆ ಮೂರು ಪಂದ್ಯಗಳಲ್ಲಿ ಸತತ ಸೋಲನುಭವಿಸಿದ ಪರಿಣಾಮ ಈಗ ಆರ್​ಸಿಬಿ ತಂಡ ಒತ್ತಡದಲ್ಲಿದರೆ ಇನ್ನೊಂದು ಡೆಲ್ಲಿ ಬಾಯ್ಸ್​ನದ್ದು ಇದೇ ಕತೆ ಕ್ಯಾಪಿಟಲ್ಸ್​​ ಆಡಿರುವ ಕಳೆದ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ.

ಡೆಲಿ ಕ್ಯಾಪಿಟಲ್ಸ್​ನ ಆರಂಭಿಕ ಬ್ಯಾಟ್ಸ್‌ಮನ್​ ಪೃಥ್ವಿ ಶಾ ವೈಫಲ್ಯವು ತಂಡಕ್ಕೆ ಹೊರೆಯಾಗುತ್ತಿದೆ. ಎಡಗೈ ಬ್ಯಾಟ್ಸ್​​ಮನ್​ ಶಿಖರ್​ ಧವನ್​ ಈ ಆವೃತ್ತಿಯಲ್ಲಿ ಸತತ ಎರಡು ಶತಕ ಬಾರಿಸಿದ ದಾಖಲೆ ಬರೆದಿದ್ದರು. ಇವರು ಸಹ ಕಳೆದೆರಡು ಪಂದ್ಯಗಳಲ್ಲಿ ಮಂಕ್​ ಆಗಿದ್ದಾರೆ. ಇನ್ನು ತಂಡದ ನಾಯಕ ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಶಿಮ್ರೊನ್ ಹೆಟ್ಮೆಯರ್ ಅವರು ಮಾಧ್ಯಮ ಕ್ರಮಾಂಕದಲ್ಲಿ ಬ್ಯಾಟ್​​ ಬೀಸಲು ವಿಫಲರಾಗುತ್ತಿದ್ದಾರೆ.

ಕಳೆದ ಕೆಲವು ಪಂದ್ಯಗಳಲ್ಲಿ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತಿರುವ ಈ ಮೈದಾನದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ದೇವದತ್ತ ಪಡಿಕ್ಕಲ್, ಜೋಶ್ ಫಿಲಿಪ್ ಇನಿಂಗ್ಸ್‌ ಆರಂಭಿಸುವ ಜವಾಬ್ದಾರಿ ಹೊತ್ತಿದ್ದಾರೆ. ಡೆಲ್ಲಿಯ ಕಗಿಸೊ ರಬಾಡ, ಎನ್ರಿಕ್ ನಾಕಿಯಾ ಮತ್ತು ಆರ್. ಅಶ್ವಿನ್ ಅವರ ದಾಳಿಯನ್ನು ಎದುರಿಸಬೇಕಿದೆ.

ವಿರಾಟ್, ಎಬಿಡಿ ಕೂಡ ಫಾರ್ಮ್​ಗೆ ಕಮ್​​ಬ್ಯಾಕ್ ಮಾಡಿದರೆ ಆರ್​ಸಿಬಿ ತಂಡದ ಬಲ ಹೆಚ್ಚುತ್ತದೆ. ಕಳೆದ ಪಂದ್ಯದಲ್ಲಿ ಗುರುಕೀರತ್ ಸಿಂಗ್ ಅವರ ಬ್ಯಾಟಿಂಗ್​ ವೈಖರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಒಳಗಾಗಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಕ್ರಿಸ್ ಮೊರಿಸ್, ಯಜುವೇಂದ್ರ ಚಾಹಲ್, ನವದೀಪ್ ಸೈನಿ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಹೆಚ್ಚು ನೆಚ್ಚಿಕೊಳ್ಳಬಹುದು. ಸಿರಾಜ್ ಮತ್ತು ಉಡಾನ ಅವರೇನಾದರೂ ಚೆನ್ನಾಗಿ ಆಡಿದರೆ ಅದು ಬೋನಸ್ ಆಗಲಿದೆ.

Next Story

RELATED STORIES