Top

ಐಪಿಎಲ್​ 2020: ಆರ್​ಸಿಬಿ ತಂಡದ ಕಿಟ್​​ನ ಫಸ್ಟ್​ಲುಕ್​ ಬಿಡುಗಡೆ

ಆರ್​ಸಿಐ ತಂಡ ಆಟಗಾರರು ಮೈದಾನದಲ್ಲಿ ಕಾಣಿಸಿಕೊಳ್ಳುವ ಜರ್ಸಿ ಬಗ್ಗೆ ಅಭಿಮಾನಿಗಳಿಗಿಳಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ.

ಐಪಿಎಲ್​ 2020: ಆರ್​ಸಿಬಿ ತಂಡದ ಕಿಟ್​​ನ ಫಸ್ಟ್​ಲುಕ್​ ಬಿಡುಗಡೆ
X

ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್​ 2020 ಪ್ರಸ್ತಕ ಸಾಲಿನಲ್ಲಿ ನಡೆಯಲಿರುವ 13ನೇ ಆವೃತ್ತಿಗೆ ಎಲ್ಲಾ ತಂಡಗಳು ಕೂಡ ಈಗ ಯುಎಇಗೆ ತಲುಪಿದೆ. ತಂಡದ ಆಟಗಾರರೆಲ್ಲರೂ ದುಬೈನಲ್ಲಿ 7 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ. ಸದ್ಯ ಹೀಗಾಗಿ ಆಟಗಾರರು ಉಳಿದುಕೊಳ್ಳಲು ನಿಗದಿ ಮಾಡಿರುವ ಹೋಟೆಲ್‌ಗಳಲ್ಲಿ ಇದ್ದಾರೆ. ಇದರ ನಡುವೆ ಆರ್​ಸಿಐ ತಂಡ ಆಟಗಾರರು ಮೈದಾನದಲ್ಲಿ ಕಾಣಿಸಿಕೊಳ್ಳುವ ಜರ್ಸಿ ಬಗ್ಗೆ ಅಭಿಮಾನಿಗಳಿಗಳಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಿಟ್‌ನ ಮೊದಲ ದೃಶ್ಯವನ್ನು ಆರ್‌ಸಿಬಿ ತನ್ನ ಟ್ವಿಟ್ಟರ್‌ನಲ್ಲಿ ಬಿಡುಗಡೆಗೊಳಿಸಿದ್ದು, ಜೆವೆನ್ ಆರ್‌ಸಿಬಿ ತಂಡದ ಕಿಟ್ ಡಿಸೈನ್ ಮಾಡಿದೆ. ಜೇವೆನ್​ ಅವರು 2016ರಿಂದ ಆರ್‌ಸಿಬಿ ಕಿಟ್​ನ ಅಧಿಕೃತ ತಯಾರಕರಾಗಿದ್ದಾರೆ. ಅದಕ್ಕೂ ಮುನ್ನ ಅಡಿಡಾಸ್ ಈ ಜವಾಬ್ದಾರಿ ತಯಾರಕನಾಗಿತ್ತು.

ಕಳೆದ ವರ್ಷದಂತೆಯೇ ಈ ಬಾರಿಯೂ ಆರ್‌ಸಿಬಿ ಜರ್ಸಿ ಕೆಂಪು ಹಾಗೂ ಕಪ್ಪು ಬಣ್ಣದೊಂದಿಗೆ ಹೊಂದಿದ್ದು, ತಂಡದ ಲೋಗೋ ಸ್ವರ್ಣ ವರ್ಣದಿಂದ ಇರುತ್ತದೆ. ಉಳಿದ ಪ್ರಾಯೋಜಕತ್ವಗಳನ್ನು ಬಿಳಿ ಬಣ್ಣದಲ್ಲಿ ಡಿಸೈನ್ ಮಾಡಲಾಗಿದೆ.

ಇನ್ನು ಜರ್ಸಿಯಲ್ಲಿ ಈ ಬಾರಿ ಪ್ರಮುಖ ಬದಲಾವಣೆ ಬಗ್ಗೆ ಹೇಳುವುದಾದ್ರೆ, ಆರ್‌ಸಿಬಿಯ ಟೈಟರ್ ಸ್ಪಾನ್ಸರ್ ಆಗಿ ಮುತ್ತೂಟ್ ಫಿನ್‌ಕಾರ್ಪ್​ ಕಾಣಿಸಿಕೊಂಡಿದೆ. ಮೊದಲಿದ್ದ ವ್ರಾಗ್ನ್ (Wrong) ಸ್ಥಾನಕ್ಕೆ ಮುತ್ತೂಟ್ ಫಿನ್‌ಕಾರ್ಪ್ ಬಂದಿದೆ.

ಈ ಬಾರಿ ತವರು ಅಂಗಳದಲ್ಲೊಂದು ಹಾಗೂ ಎದುರಾಳಿ ಅಂಗಳದಲ್ಲೊಂದು ಎಂಬ ಪ್ರತ್ಯೇಕ ಜರ್ಸಿ ಇರುವುದಿಲ್ಲ. ಈ ಬಾರಿಯ ಎಲ್ಲಾ ಪಂದ್ಯಗಳು ಯುಎಇನ ಮೈದಾನದಲ್ಲಿ ನಡೆಯುತ್ತಿದೆ. ಹೀಗಾಗಿ ಒಂದೇ ಮಾದರಿಯ ಜರ್ಸಿಯಲ್ಲಿ ಈ ಬಾರಿಯ ಆವೃತ್ತಿಯನ್ನು ಆರ್‌ಸಿಬಿ ತಂಡ ಪೂರ್ಣಗೊಳಿಸಲಿದೆ.

Next Story

RELATED STORIES