Top

IPL 2020: ಇಂದು ಕೋಲ್ಕತ್ತ ನೈಟ್ ರೈಡರ್ಸ್​ಗೆ ಚೆನ್ನೈ ಸೂಪರ್​ ಕಿಂಗ್ಸ್​​ ಸವಾಲ್​

ಕೋಲ್ಕತ್ತ ನೈಟ್ ರೈಡರ್ಸ್‌ ತಂಡ ಬುಧವಾರ ಇಂದು ಚೆನ್ನೈ ಸೂಪರ್ ಕಿಂಗ್ಸ್‌ ಸವಾಲನ್ನು ಎದುರಿಸಲಿದ್ದಾರೆ.

IPL 2020: ಇಂದು ಕೋಲ್ಕತ್ತ ನೈಟ್ ರೈಡರ್ಸ್​ಗೆ ಚೆನ್ನೈ ಸೂಪರ್​ ಕಿಂಗ್ಸ್​​ ಸವಾಲ್​
X

ಅಬುಧಾಬಿ: ದಿನೇಶ್ ಕಾರ್ತಿಕ್​​ ನೇತೃತ್ವದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡ ಬುಧವಾರ ಇಂದು ಚೆನ್ನೈ ಸೂಪರ್ ಕಿಂಗ್ಸ್‌ ಸವಾಲನ್ನು ಎದುರಿಸಲಿದ್ದಾರೆ.

ಹ್ಯಾಟ್ರಿಕ್​​ ಸೋಲುಗಳ ಬಳಿಕ ಮತ್ತೆ ಜಯದ ಟ್ರ್ಯಾಕ್​​ಗೆ ಮರಳಿರುವ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಟೀಮ್​ ಆತ್ಮವಿಶ್ವಾಸದಲ್ಲಿದೆ. ಸಿಎಸ್​ಕೆ ತಂಡ ನಾಲ್ಕನೇ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ 10 ವಿಕೆಟ್​ಗಳ ಅಂತರದಿಂದ ಜಯಿಸಿತ್ತು. ಈ ಆವೃತ್ತಿಯಲ್ಲಿ ಸಿಎಸ್​ಕೆ ಒಟ್ಟು ಐದು ಪಂದ್ಯಗಳನ್ನು ಆಡಿದೆ. ದಿನೇಶ್ ಕಾರ್ತಿಕ್ ಟೀಂ ಇಲ್ಲಿಯವರೆಗೆ ನಾಲ್ಕು ಪಂದ್ಯಗಳನ್ನು ಆಡಿ ಎರಡರಲ್ಲಿ ಗೆದ್ದು, ಮತ್ತೆರಡರಲ್ಲಿ ಸೋತಿದೆ.

ಸಿಎಸ್​ಕೆ ತಂಡದ ಆರಂಭಿಕ ಜೋಡಿ ಶೇನ್​ ವಾಟ್ಸನ್ ಮತ್ತು ಫಾಫ್ ಡುಪ್ಲೆಸಿ ಜೋಡಿಯ ಮೋಡಿ ತಂಡವನ್ನು ಜಯದ ದಡ ಸೇರಿಸಿತ್ತು. ಅವರಿಬ್ಬರೊಂದಿಗೆ ಅಂಬಟಿ ರಾಯುಡು, ರವೀಂದ್ರ ಜಡೇಜ, ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್‌ ಲೈನ್​ಅಪ್​ ಉತ್ತಮವಾಗಿದೆ. ಅಲ್​ರೌಂಡರ್​ ಸ್ಯಾಮ್ ಕರನ್ ಕೂಡ ಕೆಳಕ್ರಮಾಂಕದಲ್ಲಿ ಆಡಬಲ್ಲರು.

ಚೆನ್ನೈ ಬೌಲಿಂಗ್​ ವಿಭಾಗದಲ್ಲಿ ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಸ್ಪಿನ್ನರ್ ಪೀಯೂಷ್ ಚಾವ್ಲಾ, ಜಡೇಜ ಮತ್ತು ಡ್ವೇನ್ ಬ್ರಾವೊಗೆ ಕೆಕೆಆರ್ ಬ್ಯಾಟಿಂಗ್ ಪಡೆ ಕಠಿಣ ಸವಾಲೊಡ್ಡಬಹುದು. ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್, ನಿತೀಶ್ ರಾಣಾ, ಆ್ಯಂಡ್ರೆ ರಸೆಲ್, ದಿನೇಶ್, ಸುನಿಲ್ ನಾರಾಯಣ ಮತ್ತು ಏಯಾನ್ ಮಾರ್ಗನ್​ಗೆ ಬ್ರೇಕ್​ ಹಾಕುವುದು ಮುಖ್ಯ ಸವಾಲ್​.

Next Story

RELATED STORIES