Top

IPL 2020: ಇಂದು ಮುಂಬೈ ಇಂಡಿಯನ್ಸ್​ ಹಾಗೂ ಕೊಲ್ಕತ್ತ ನೈಟ್​ ರೈಡರ್ಸ್​​ ತಂಡಗಳ ನಡುವೆ ಕದನ

ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್‌ನ 32ನೇ ಪಂದ್ಯದಲ್ಲಿ ಇಂದು ಮುಖಾಮುಖಿ

IPL 2020: ಇಂದು ಮುಂಬೈ ಇಂಡಿಯನ್ಸ್​ ಹಾಗೂ ಕೊಲ್ಕತ್ತ ನೈಟ್​ ರೈಡರ್ಸ್​​ ತಂಡಗಳ ನಡುವೆ ಕದನ
X

ದುಬೈ: ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್‌ನ 32ನೇ ಪಂದ್ಯದಲ್ಲಿ ಇಂದು ಮುಖಾಮುಖಿ ಆಗುತ್ತಿದ್ದು, ಅಬುಧಾಬಿಯ ಶೇಕ್ ಝಾಯೇದ್ ಕ್ರೀಡಾಂಗಣದಲ್ಲಿ ಎರಡು ತಂಡಗಳ ಗೆಲುವಿಗಾಗಿ ಕದನ ನಡೆಸಲಿವೆ. ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ವೇಳೆ ಮುಂಬೈ ಇಂಡಿಯನ್ಸ್​ ತಂಡ ಕೊಲ್ಕತ್ತ ನೈಟದದ ರೈಡರ್ಸ್​​ (ಕೆಕೆಆರ್) ತಂಡವನ್ನು ಸೋಲಿಸಿತ್ತು.

ಐಪಿಎಲ್​ ಶುರುವಿನಿಂದ ಈವೆರೆಗೆ ಈ ಎರಡು ತಂಡಗಳು 26 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 20 ಬಾರಿ ಗೆಲ್ಲುವ ಮೂಲಕ ಮುಂಬೈ ತಂಡ ದೊಡ್ಡಮಟ್ಟದ ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಕೆಕೆಆರ್ ಗೆದ್ದಿರುವುದು ಕೇವಲ ಆರು ಪಂದ್ಯಗಳು.

ಈ ಆವೃತ್ತಿಯ ಶುರುವಿನಲ್ಲಿ ಮುಂಬೈ ಹಾಗೂ ಕೆಕೆಆರ್ ಎದುರಾಳಿಗಳಾಗಿ ಕಣಕ್ಕಿಳಿದು ಮುಂಬೈ ಇಂಡಿಯನ್ಸ್​ ತಂಡ ಕೊಲ್ಕತ ತಂಡವನ್ನು 49 ರನ್‌ಗಳ ಅಂತರದಿಂದ ಸೋಲಿಸಿತ್ತು. ಮುಂಬೈ ತಂಡ ನಾಯಕ ರೊಹಿತ್ ಶರ್ಮಾ (80) ಸೂರ್ಯಕುಮಾರ್ ಯಾದವ್(47) ಕೊಡುಗೆಯಿಂದ ಮುಂಬೈ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 195 ರನ್​ ಗುರಿ ನೀಡಿತ್ತು ಆದರೆ ಈ ಸ್ಕೋರ್​ ಬೆನ್ನಟ್ಟಿದ ಕೊಲ್ಕತ್ತ 146 ರನ್‌ಗಳನ್ನು ಗಳಿಸಿ ಪಂದ್ಯವನ್ನು ಸೋತಿತ್ತು.

ಮುಂಬೈ ಇಂಡಿಯನ್ಸ್ ತಂಡ ಐದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್‌ನಲ್ಲಿದೆ. ಕೊಲ್ಕತಾ ತಂಡ ಕಳೆದ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದಿದ್ದು ಎರಡರಲ್ಲಿ ಸೋಲು ಕಂಡಿದೆ. ಸದ್ಯ ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಎರಡನೇ ಸ್ಥಾನವನ್ನು ಹೊಂದಿದೆ. ಕೊಲ್ಕತಾ ನೈಟ್ ರೈಡರ್ಸ್ ನಾಲ್ಕನೇ ಸ್ಥಾನದಲ್ಲಿದೆ.

Next Story

RELATED STORIES