IPL 2020: ವಿಕೆಟ್ ಪಡೆಯುವುದಕ್ಕಿಂತ ಐಪಿಎಲ್ ಟ್ರೋಫಿ ಗೆಲ್ಲುವುದು ಮುಖ್ಯ - ಕಗಿಸೊ ರಬಡಾ
ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಕಗಿಸೋ ರಬಡಾ 4 ಓವರ್ಗಳಲ್ಲಿ 29 ರನ್ ನೀಡಿ 4 ವಿಕೆಟ್ ಉರುಳಿಸಿದ್ದಾರೆ

Kagiso Rabada (Photo Source: Twitter)
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ವೇಗಿ ಗಿಸೋ ರಬಡಾ ಅವರು ಉತ್ತಮ ಬೌಲಿಂಗ್ ಮಾಡುವ ಮೂಲಕ ಮಿಂಚುತ್ತಿದ್ದಾರೆ. ಕ್ವಾಲಿಫೈಯರ್ 2ನಲ್ಲಿ ಹೈದರಾಬಾದ್ ವಿರುದ್ದದ 4 ವಿಕೆಟ್ ಪಡೆಯುವ ಮೂಲಕ ರಬಡಾ(29) ಅವರು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ನಂತರ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡ ವೇಗಿ ಬೂಮ್ರಾ (27) ರೇಸ್ನಲ್ಲಿದ್ದಾರೆ.
ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಕಗಿಸೋ ರಬಡಾ 4 ಓವರ್ಗಳಲ್ಲಿ 29 ರನ್ ನೀಡಿ 4 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಹೈದರಾಬಾದ್ ತಂಡವನ್ನು 172 ರನ್ಗಳಿಗೆ ನಿಯಂತ್ರಿಲಸು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಾಧ್ಯವಾಗಿತ್ತು. ಈ ಮೂಲಕ ಡಿಸಿ ತಂಡ 17 ರನ್ಗಳ ಗೆಲುವನ್ನು ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟಿದೆ.
ಪಂದ್ಯ ಮುಗಿದ ಬಳಿಕ ಮಾತನಾಡಿರುವ ರಬಡಾ ಅವರು, ಇವತ್ತು ನನ್ನ ದಿವಸವಾಗಿತ್ತು. ನಾನು 19 ಓವರ್ನಲ್ಲಿ ವಿಶೇಷವಾಗಿ ಬೌಲಿಂಗ್ ಮಾಡಿದ್ದೇಬೆ ಎಂದು ಭಾವಿಸಬೇಡಿ. ಉತ್ತಮವಾಗಿ ಬೌಲಿಂಗ್ ಮಾಡುವ ಸಾಕಷ್ಟು ಕಾಲಾವಕಾಶಗಳಿವೆ ಆದರೆ ಅದನ್ನು ಮಾಡಲು ವ್ಯಕ್ತಪಡಿಸಲು ಪ್ರತಿಫಲಗಳಿಲ್ಲ ಹೀಗಾಗಿಯೇ ನಾನು ಅದನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಸದ್ಯ ಅದೇನೆ ಇರಲಿ. ನಮ್ಮ ಮುಂದಿರುವ ಪ್ರಮುಖ ಗುರಿ ಎಂದರೆ ಟೂರ್ನಮೆಂಟ್ಅನ್ನು ಗೆಲ್ಲುವುದು. ಈ ಟೂರ್ನಮೆಂಟ್ಅನ್ನು ಗೆದ್ದು ನಾನು ಯಾವುದೇ ವಿಕೆಟ್ ಪಡೆಯದಿದ್ದರೆ ನಾನು ಆ ಬಗ್ಗೆ ಚಿಂತೆಯನ್ನೇ ಮಾಡುವುದಿಲ್ಲ ಎಂದು ಅವರು ಐಪಿಎಲ್ ಟ್ರೋಫಿ ಗೆಲ್ಲುವ ತವಕವನ್ನು ವ್ಯಕ್ತಪಡಿಸಿದ್ದಾರೆ.