T20 Series: ಆತಿಥೇಯ ಆಸೀಸ್ ತಂಡವನ್ನು ವೈಟ್-ವಾಶ್ ಮಾಡುವತ್ತಾ ಭಾರತದ ಚಿತ್ತ
ಹಾರ್ದಿಕ್ ಪಾಂಡ್ಯ ಈ ಪ್ರವಾಸದಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿದ್ದು, ಉತ್ತಮ ಲಯದಲ್ಲಿದ್ದಾರೆ. ಸದ್ಯ ಅವರು ಈಗ ಉತ್ತಮ ಮ್ಯಾಚ್ ಫಿನಿಶರ್ ಕೂಡ ಆಗುವಂತ ಸಾಧ್ಯತೆಗಳಿವೆ

Image Source: Twitter
ಸಿಡ್ನಿ: ನಾಳೆ(ಮಂಗಳವಾರ) ಆಡಲಿರುವ 2020ರ ಅಂತಿಮ ವೈಟ್-ಬಾಲ್ ಪಂದ್ಯದಲ್ಲಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಡೆ ಚುಟುಕು ಕ್ರಿಕೆಟ್ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ವೈಟ್-ವಾಶ್ ಮಾಡಲು ಎಲ್ಲಾ ಸಾಧ್ಯತೆಗಳಿವೆ.
ಅಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಎರಡು ಪಂದ್ಯಗಳನ್ನು ಭಾರತ ಗೆಲ್ಲುವ ಮೂಲಕ ಸರಣಿಯನ್ನು ವಶ ಮಾಡಿಕೊಂಡಿದೆ. ಹೀಗಾಗಿ ನಾಳೆಯೂ ಕೂಡ ಭಾರತ ಉತ್ತಮ ಪ್ರದರ್ಶನ ನೀಡಿ ಆಸೀಸ್ ತಂಡವನ್ನು ವೈಟ್-ವಾಶ್ ಮಾಡುವ ನಿರೀಕ್ಷೆಇದೆ.
ಮುಂದಿನ ವರ್ಷ ಐಸಿಸಿ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಲಿರುವುದರಿಂದ ಆತಿಥೇಯ ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಪ್ರಯತ್ನ ಮಾಡುತ್ತಿದ್ದು, ಆಸೀಸ್ ತಂಡದ ಆಯ್ಕೆ ಸಮಿತಿ ಕೂಡ ಬಲಿಷ್ಠ ತಂಡ ರಚನೆ ಮಾಡುವ ದೃಷ್ಠಿಯಿಂದ ತಮ್ಮ ಆಟಗಾರರ ಕೌಶಲ್ಯವನ್ನು ನೋಡುತ್ತಿದ್ದಾರೆ.

ವಿರಾಟ್ ಕೊಹ್ಲಿ ಸೈನ್ಯವು ನಡೆಯುತ್ತಿರುವ ಸರಣಿಯ ಎಲ್ಲಾ ಆಯಾಮಗಳನ್ನು ಅಚ್ಟುಕಟ್ಟಾಗಿ ಗಮನದಲ್ಲಿಟ್ಟುಕೊಂಡು ಮೈದಾನಕ್ಕೆ ಇಳಿಯುತ್ತಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿ ಎದುರಾಳಿ ತಂಡವನ್ನು ಸೋಲಿಸಿದರು. ಇನ್ನೂ ಎರಡನೇ ಪಂದ್ಯದಲ್ಲಿ ಟಾರ್ಗೆಟ್ ರನ್ ಬೆನ್ನಟ್ಟಿ ಗೆಲುವು ದಾಖಲಿಸಿದರು.
ಮೊದಲ ಪಂದ್ಯದಲ್ಲಿ ಭಾರತವು 161ಕ್ಕಿಂತೂ ಕಡಿಮೆ ಸ್ಕೋರ್ಅನ್ನು ಸಮರ್ಥಿಸಿಕೊಂಡರೆ, ಎರಡನೆಯದರಲ್ಲಿ ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ತಂಡವು 195 ರನ್ಗಳ ಬೃಹತ್ ಸ್ಕೋರ್ ಅನ್ನು ಬೆನ್ನಟ್ಟಿತು.
ಸದ್ಯ ಹಾರ್ದಿಕ್ ಪಾಂಡ್ಯ ಈ ಪ್ರವಾಸದಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿದ್ದು, ಉತ್ತಮ ಲಯದಲ್ಲಿದ್ದಾರೆ. ಸದ್ಯ ಅವರು ಈಗ ಉತ್ತಮ ಮ್ಯಾಚ್ ಫಿನಿಶರ್ ಕೂಡ ಆಗುವಂತ ಸಾಧ್ಯತೆಗಳಿವೆ.
