Top

ಮೊದಲ ಟಿ20 ಪಂದ್ಯದಲ್ಲಿ ಆಸೀಸ್​​ ವಿರುದ್ಧ ಭಾರತಕ್ಕೆ ರೊಚಕ ಗೆಲುವು

ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಎಲ್ಲ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿರುವ ಟೀಮ್ ಇಂಡಿಯಾ 11 ರನ್ ಅಂತರದ ಭರ್ಜರಿ ಗೆಲುವು

ಮೊದಲ ಟಿ20 ಪಂದ್ಯದಲ್ಲಿ ಆಸೀಸ್​​ ವಿರುದ್ಧ ಭಾರತಕ್ಕೆ ರೊಚಕ ಗೆಲುವು
X

ಕ್ಯಾನ್‌ಬೆರಾ: ಇಂದು ಮನುಕಾ ಓವಲ್‌ ಮೈದಾನದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಎಲ್ಲ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿರುವ ಟೀಮ್ ಇಂಡಿಯಾ 11 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಪಂದ್ಯ ಗೆಲ್ಲುವ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. ಮೊದಲು ಬ್ಯಾಟಿಂಗ್‌ನಲ್ಲಿ ಕೆ.ಎಲ್ ರಾಹುಲ್ ಹಾಗೂ ರವೀಂದ್ರ ಜಡೇಜ ಜೋಡಿ ಅದ್ಭುತ ಆಟ ಪ್ರದರ್ಶಿಸಿದರೆ ಬಳಿಕ ಬೌಲಿಂಗ್‌ನಲ್ಲಿ ಬದಲಿ ಆಟಗಾರ ಯಜುವೇಂದ್ರ ಚಹಲ್ ಮತ್ತು ಡೆಬ್ಯು ವೇಗಿ ಟಿ ನಟರಾಜನ್ ಅವರ ಆಕ್ರಮಣಕಾರಿ ಬೌಲಿಂಗ್​ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ವಿರಾಟ್​ ಕೊಹ್ಲಿ ಪಡೆ ಕೆ.ಎಲ್ ರಾಹುಲ್ ಆಕರ್ಷಕ ಅರ್ಧಶತಕ (51) ಹಾಗೂ ರವೀಂದ್ರ ಜಡೇಜ 23 ಎಸೆತಗಳಲ್ಲಿ ಬಿರುಸಿನ ಔಟಾಗದೇ 44 ರನ್ ಗಳಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತಕ್ಕೆ ಅಡಿಪಾಯ ಹಾಕಿಕೊಟ್ಟರು.

ಬಳಿಕ 162 ರನ್ ಗೆಲುವಿನ ಗುರಿ ಬೆನ್ನಟ್ಟಿದ ಆಸೀಸ್, ಯಜುವೇಂದ್ರ ಚಹಲ್ ಹಾಗೂ ಟಿ. ನಟರಾಜನ್ ಮಾರಕ ದಾಳಿಗೆ ಕುಸಿದು 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 11 ರನ್ ಅಂತರದ ಗೆಲುವು ದಾಖಲಿಸಿದೆ. ಚಹಲ್ ಹಾಗೂ ನಟರಾಜನ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.

ರವೀಂದ್ರ ಜಡೇಜ ಬದಲಿಗೆ ಯಜುವೇಂದ್ರ ಚಹಲ್

ಟೀಂ ಇಂಡಿಯಾ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು ರವೀಂದ್ರ ಜಡೇಜ ತಲೆಯ ಹೆಲ್ಮೆಟ್‌ಗೆ ಬಡಿದ ಪರಿಣಾಮ ಕನ್ಕಶನ್​ ಸಬ್​ ನಿಯಮದ ಅನ್ವಯ ರವೀಂದ್ರ ಜಡೇಜ ಬದಲಿಗೆ ಯಜುವೇಂದ್ರ ಚಹಲ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು. ಇದು ಆಸೀಸ್ ತಂಡದವರ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.

Next Story

RELATED STORIES