Top

ಏಕದಿನ ಕ್ರಿಕೆಟ್​​ನಲ್ಲಿ ಸಚಿನ್​ ದಾಖಲೆ ಬ್ರೇಕ್​ ಮಾಡಿ ಅತೀ ವೇಗವಾಗಿ 12000 ರನ್​ ಪೂರೈಸಿದ ಕೊಹ್ಲಿ

ಕೊಹ್ಲಿ 222 ಇನ್ನಿಂಗ್ಸ್‌ಗಳಲ್ಲಿ 11,000 ರನ್ ಗಳಿಸಿದ್ದಾರೆ. ತಮ್ಮ 205ನೇ ಇನ್ನಿಂಗ್‌ನಲ್ಲಿ 10000 ರನ್‌ಗಳ ಗಡಿದಾಟಿ ವೇಗದ ಬ್ಯಾಟ್ಸ್​ಮನ್​ ಆಗಿದ್ದಾರೆ.

ಏಕದಿನ ಕ್ರಿಕೆಟ್​​ನಲ್ಲಿ ಸಚಿನ್​ ದಾಖಲೆ ಬ್ರೇಕ್​ ಮಾಡಿ ಅತೀ ವೇಗವಾಗಿ 12000 ರನ್​ ಪೂರೈಸಿದ ಕೊಹ್ಲಿ
X

ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಬುಧವಾರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 12,000 ರನ್​ ಗಳಿಸಿದ್ದು, ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಅವರು ಈ ಸಾಧನೆ ಮಾಡಿದ್ದಾರೆ.

32ರ ಹರೆಯದ ವಿರಾಟ್​ ಕೊಹ್ಲಿ ಅವರು ಈ ಪಂದ್ಯಕ್ಕೂ ಮೊದಲು 11,977 ರನ್ ಗಳಿಸಿದ್ದರು. ಇವತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿಲು ಮುಂದಾದ ಬಳಿಕ ಕ್ರೀಸ್‌ಗೆ ಬಂದ ಕೂಡಲೇ ಈ ಮೈಲುಗಲ್ಲು ಸಾಧಿಸಿದ್ದಾರೆ.

ವಿರಾಟ್​ ಕೊಹ್ಲಿ ತಮ್ಮ 242ನೇ ಇನ್ನಿಂಗ್‌ನಲ್ಲಿ ಈ ಮೈಲಿಗಲ್ಲು ಸಾಧಿಸಿದ್ದು, ಇದರಿಂದಾಗಿ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಅವರು ನಿರ್ಮಿಸಿದ ಹಿಂದಿನ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ ಸಚಿನ್​ ಅವರು ತಮ್ಮ 300ನೇ ಇನ್ನಿಂಗ್‌ನಲ್ಲಿ 12,000ನೇ ರನ್ ದಾಖಲಿಸಿದ್ದರು.

ಭಾರತದ ಕ್ರಿಕೆಟ್​ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್​ ಅವರು ಒಟ್ಟು 463 ಏಕದಿನ ಪಂದ್ಯಗಳನ್ನು ಆಡಿ 18,426 ರನ್​ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ವಿರಾಟ್​ ಕೊಹ್ಲಿ ಅವರು ಇದ್ದಾರೆ.

ಭಾರತದ ನಾಯಕ ಅತೀ ವೇಗದ ಬ್ಯಾಟ್ಸ್‌ಮನ್​ (ಇನ್ನಿಂಗ್ಸ್‌ನ ದೃಷ್ಟಿಯಿಂದ) 10,000ರನ್ ಮತ್ತು 11,000 ರನ್‌ಗಳ ದಾಖಲೆಯನ್ನು ಹೊಂದಿದ್ದಾರೆ. ಕೊಹ್ಲಿ 222 ಇನ್ನಿಂಗ್ಸ್‌ಗಳಲ್ಲಿ 11,000 ರನ್ ಗಳಿಸಿದ್ದಾರೆ. ತಮ್ಮ 205ನೇ ಇನ್ನಿಂಗ್‌ನಲ್ಲಿ 10000 ರನ್‌ಗಳ ಗಡಿದಾಟಿ ವೇಗದ ಬ್ಯಾಟ್ಸ್​ಮನ್​ ಆಗಿದ್ದಾರೆ.

Next Story

RELATED STORIES