Top

ಭಾರತೀಯ ವಾಯುಪಡೆ ಸೇರಿದ ರಫೇಲ್​ ಜೆಟ್​ಗೆ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್​ ಧೋನಿ ಫಿದಾ

ಭಾರತೀಯ ವಾಯುಪಡೆಗೆ ಪೈಲಟ್‌ಗಳಿಗೆ ಸಿಕ್ಕಿರುವ ಅಮೋಘವಾದ ಆಯುಧಗಳಾಗಿವೆ.

ಭಾರತೀಯ ವಾಯುಪಡೆ ಸೇರಿದ ರಫೇಲ್​ ಜೆಟ್​ಗೆ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್​ ಧೋನಿ ಫಿದಾ
X

ದುಬೈ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಭಾರತದ ವಾಯುಪಡೆಗೆ ಇತ್ತಿಚೀಗೆ ಸೇರ್ಪಡೆಯಾದ ರಫೇಲ್ ಜೆಟ್‌ ವಿಮಾನಗಳಿಗೆ ಸಂಬಂಧಿಸಿದಂತೆ ಟ್ವಿಟರ್​ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಈ ಲೋಹದ ಹಕ್ಕಿಗಳು ಬಹಳ ಉತ್ಕೃಷ್ಠವಾಗಿವೆ. ಭಾರತೀಯ ವಾಯುಪಡೆಗೆ ಪೈಲಟ್‌ಗಳಿಗೆ ಸಿಕ್ಕಿರುವ ಅಮೋಘವಾದ ಆಯುಧಗಳಾಗಿವೆ ಎಂದು ಚೆನ್ನೈ ಸೂಪರ್ ಕಿಂಗ್ಸ್‌(ಸಿಎಸ್​ಕೆ) ತಂಡದ ನಾಯಕ ಎಂ.ಎಸ್​ ಧೋನಿ ಅವರು ಟ್ವಿಟ್​ನಲ್ಲಿ ಹೇಳಿದ್ದಾರೆ.

ಅದುವಲ್ಲದೇ, ಭಾರತೀಯ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಕೂಡ ಆಗಿರುವ ಧೋನಿ ಅವರು, ರಫೇಲ್ ಫೈಟರ್‌ ಜೆಟ್‌ಗಳು ವಿಶ್ವದ ಅತ್ಯುತ್ತಮ ವಿಮಾನಗಳಾಗಿವೆ. ಈ ಮೊದಲು ವಾಯುಪಡೆಯಲ್ಲಿರುವ ಬೇರೆ ಬೇರೆ ವಿಮಾನಗಳು ಮತ್ತು ಅಸ್ತ್ರಗಳೊಂದಿಗೆ ರಫೇಲ್ ಸೇರಿರುವುದು ಸೇನೆಯ ಬಲ ದುಪಟ್ಟಾಗಿದೆ ಎಂದಿದ್ದಾರೆ.

ರಫೇಲ್‌ಗಳನ್ನು ಸೇರ್ಪಡೆ ಮಾಡಿಕೊಂಡ 17 ಸ್ಕ್ವಾಡ್ರನ್ (ಗೋಲ್ಡನ್ ಆ್ಯರೋಸ್) ದಳಕ್ಕೆ ಅಭಿನಂದನೆಗಳು. ಇನ್ನು ಮುಂದೆ ಈ ಸೈನ್ಯದ ದಿಟ್ಟತನ ಮತ್ತಷ್ಟು ಪ್ರಜ್ವಲಿಸಲಿದೆ. ಎದುರಾಳಿಗಳಿಗೆ ಇವರು ಸಿಂಹಸ್ವಪ್ನರಾಗಲಿದ್ದಾರೆ ಎಂದು ಬರೆದಿದುಕೊಂಡಿದ್ದಾರೆ.

ಸೆಷ್ಟೆಂಬರ್​ 10ರಂದು (ಗುರುವಾರ) ಅಂಬಾಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫ್ರಾನ್ಸ್‌ ನಿರ್ಮಿತ ಯುದ್ಧ ವಿಮಾನಗಳಾದ ರಫೇಲ್​ ಜೆಟ್​​ಅನ್ನು ಭಾರತೀಯ ವಾಯುಪಡೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು.

ಸೆಪ್ಟೆಂಬರ್​ 19ರಂದು ನಡೆಯಲಿರುವ ಐಪಿಎಲ್​ 2020 13ನೇ ಆವೃತ್ತಿಯಲ್ಲಿ ಸಿಎಸ್​ಕೆ ತಂಡ ನಾಯಕರಾಗಿ ಎಂಎಸ್​ ಧೋನಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಸದ್ಯ ಅವರು ದುಬೈನಲ್ಲಿ ಭರ್ಜರಿ ತಾಲೀಮು ನಡೆಸುತ್ತಿದ್ದು, ಈ ಬಾರಿ ಐಪಿಎಲ್​ನಲ್ಲಿ ಸಿಎಸ್​ಕೆ ವಸರ್ಸ್​ ಮುಂಬೈ ಇಂಡಿಯನ್ಸ್​ ತಂಡಗಳು ಮೊದಲ ಪಂದ್ಯದಲ್ಲೇ ಮುಖಾಮುಖಿ ಆಗಲಿವೆ.

Next Story

RELATED STORIES