Top

ಟೆಸ್ಟ್​ ಕ್ರಿಕೆಟ್​ನಲ್ಲಿ ಆರು ಸಾವಿರ ರನ್​ಗಳ ಗಡಿದಾಟಿದ ಚೇತೇಶ್ವರ ಪೂಜಾರ

ಈ ಸಾಧನೆ ಮಾಡಿದ 11ನೇ ಭಾರತೀಯ ಆಟಗಾರನಾಗಿ ಅವರು ಗುರುತಿಸಿಕೊಂಡಿದ್ದಾರೆ

ಟೆಸ್ಟ್​ ಕ್ರಿಕೆಟ್​ನಲ್ಲಿ ಆರು ಸಾವಿರ ರನ್​ಗಳ ಗಡಿದಾಟಿದ ಚೇತೇಶ್ವರ ಪೂಜಾರ
X

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ ಇಂದು (ಸೋಮವಾರ) ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದ ಆಟದಲ್ಲಿ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಸುದ್ದಿಯಾದ್ರೆ. ಮತ್ತೊಂದೆಡೆ ಪಂತ್​ಗೆ ಉತ್ತಮ ಜತೆಯಾಟ ನೀಡಿರುವ ಟೀಮ್ ಇಂಡಿಯಾದ ಭರವಸೆಯ ಆಟಗಾರ ಚೇತೇಶ್ವರ ಪೂಜಾರ ಕೂಡ ಹೊಸ ಸಾಧನೆ ಮಾಡಿದ್ದಾರೆ.

ಪ್ರಸ್ತುತ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಐದನೇ ದಿನದ ಆಟದಲ್ಲಿ ಚೇತೇಶ್ವರ ಪೂಜಾರ ಅವರು, ರಿಷಬ್ ಪಂತ್ ಅವರಿಗೆ ಉತ್ತಮ ಜತೆಯಾಟದ ಆರಂಭಿಸಿದರು. ಇದರೊಟ್ಟಿಗೆ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ 6000 ರನ್ ಗಡಿದಾಟಿದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ 11ನೇ ಭಾರತೀಯ ಆಟಗಾರನಾಗಿ ಅವರು ಗುರುತಿಸಿಕೊಂಡಿದ್ದಾರೆ

ಇನ್ನು ಚೇತೇಶ್ವರ ಪೂಜಾರ ಅವರು, ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ 77 ರನ್ ಗಳಿಸಿ ಆಟ ಮುಂದುವರೆಸಿದ್ದು, ಟೀಮ್ ಇಂಡಿಯಾ ಗೆಲುವಿಗೆ ಭರವಸೆ ಮೂಡಿಸಿದ್ದಾರೆ. ರಿಷಬ್ ಪಂತ್ ಉತ್ತಮ ಆರಂಭ ದೊರಕಿಸಿಕೊಟ್ಟು ಬಳಿಕ ನಿರ್ಗಮಿಸಿದ್ದು, ಪೂಜಾರ ಅವರು ಆಟ ಮುಂದುವರಿಸಿದ್ದಾರೆ. ಪೂಜಾರ ಅವರ ಈ ಸಾಧನೆಗೆ ಕ್ರಿಕೆಟ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಸಾಕಷ್ಟು ಕ್ರಿಕೆಟ್​ ಪ್ರೇಮಿಗಳು ಟ್ವಿಟರ್ ಮೂಲಕ ಶುಭಕೋರಿದ್ದಾರೆ.

Next Story

RELATED STORIES