Top

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿಗೆ ಎದೆನೋವು; ಆಸ್ಪತ್ರೆಗೆ ದಾಖಲು

ಕೋಲ್ಕತ್ತದ ವುಡ್‌ಲ್ಯಾಂಡ್‌ ಆಸ್ಪತ್ರೆಗೆ ದಾಖಲು

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿಗೆ ಎದೆನೋವು; ಆಸ್ಪತ್ರೆಗೆ ದಾಖಲು
X

ಕೋಲ್ಕತ್ತ: ಟೀಂ ಇಂಡಿಯಾದ ಮಾಜಿ ನಾಯಕ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಎದೆ ನೋವು ಕಾಣಿಸಿಕೊಂಡ ಪರಿಣಾಮ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿ ಆಗಿದೆ.

ಸದ್ಯ ಗಂಗೂಲಿ ಅವರನ್ನು ಕೋಲ್ಕತ್ತದ ವುಡ್‌ಲ್ಯಾಂಡ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷೆ ಮಾಡಲಾಗುತ್ತಿದೆ.

ಭಾರತ ತಂಡದ ಪರ ಎಡಗೈ ಬ್ಯಾಟ್ಸ್‌ಮನ್‌ ಸೌರವ್ ಗಂಗೂಲಿ ಅವರು 113 ಟೆಸ್ಟ್ ಪಂದ್ಯಗಳಲ್ಲಿ 42.18ರ ಸರಾಸರಿಯಲ್ಲಿ 7212 ರನ್, 311 ಏಕದಿನ ಪಂದ್ಯಗಳಲ್ಲಿ 40.73ರ ಸರಾಸರಿಯಂತೆ 11363 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 59 ಪಂದ್ಯಗಳಲ್ಲಿ 1349 ರನ್ ಬಾರಿಸಿದದ್ದಾರೆ. ಟೆಸ್ಟ್‌ನಲ್ಲಿ 16, ಏಕದಿನದಲ್ಲಿ 22 ಶತಕಗಳನ್ನು ಬಾರಿಸಿದ್ದಾರೆ.


Next Story

RELATED STORIES