Top

ಇಂದು ಆರ್​ಸಿಬಿ ವಸರ್ಸ್​ ಮುಂಬೈ ಇಂಡಿಯನ್ಸ್​​ ತಂಡಗಳ ನಡುವೆ ಸೆಣಸಾಟ

ಇಂದು ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು(ಆರ್​ಸಿಬಿ) ಮತ್ತು ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​ ತಂಡಗಳು ಮುಖಾಮುಖಿ.

ಇಂದು ಆರ್​ಸಿಬಿ ವಸರ್ಸ್​ ಮುಂಬೈ ಇಂಡಿಯನ್ಸ್​​ ತಂಡಗಳ ನಡುವೆ ಸೆಣಸಾಟ
X

ದುಬೈ: ಇಂಡಿಯನ್ ಪ್ರಿಮೀಯರ್​ ಲೀಗ್​(ಐಪಿಎಲ್​)2020, ಇಂದು ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು(ಆರ್​ಸಿಬಿ) ಮತ್ತು ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​ ತಂಡಗಳು ಮುಖಾಮುಖಿ ಆಗುತ್ತಿವೆ.

ಆರ್‌ಸಿಬಿ ತಂಡವು ಕೆ.ಎಲ್.ರಾಹುಲ್ ನಾಯಕತ್ವದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಎದುರು 97 ರನ್‌ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿತ್ತು. ಆ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಕೈ ಚೆಲ್ಲಿದ ಎರಡು ಕ್ಯಾಚ್‌ಗಳ ಪರಿಣಾಮ ರಾಹುಲ್ ಅಬ್ಬರದ ಶತಕ ಸಿಡಿಸಿದ್ದರು.

ಬೆಂಗಳೂರು ತಂಡದ ಬೌಲಿಂಗ್ ವಿಭಾಗದ ವೈಫಲ್ಯ ಮತ್ತು ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯವೂ ಸೋಲಿಗೆ ಕಾರಣವಾಗಿತ್ತು. ಅನುಭವಿ ಬೌಲರ್‌ಗಳಾದ ಡೇಲ್ ಸ್ಟೇಯ್ನ್‌ ಮತ್ತು ಉಮೇಶ್ ಯಾದವ್ ಒಟ್ಟು ಏಳು ಓವರ್‌ಗಳಲ್ಲಿ 92 ರನ್‌ಗಳನ್ನು ಕೊಟ್ಟಿದ್ದರು.

ಮಧ್ಯಮ ವೇಗಿಗಳಾದ ನವದೀಪ್ ಸೈನಿ ಕೂಡ ದುಬಾರಿಯಾಗಿದ್ದರು. ಆದರೆ, ದುಬೆ ಎರಡು ವಿಕೆಟ್‌ ಕೂಡ ಪಡೆದಿದ್ದರು. ಸ್ಪಿನ್ನರ್ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಅವರು ತಕ್ಕಮಟ್ಟಿಗೆ ಉತ್ತಮವಾಗಿ ಬೌಲಿಂಗ್ ದಾಳಿ ನಡೆಸಿದ್ದರು.

206 ರನ್‌ಗಳ ಗುರಿ ತಲುಪುವ ದಾರಿಯಲ್ಲಿ ವಿರಾಟ್ ಮತ್ತು ಉಳಿದ ಬ್ಯಾಟ್ಸ್‌ಮನ್‌ಗಳು ತಕ್ಕ ಪ್ರದರ್ಶನ ನೀಡದಿರುವುದು ಸೋಲಿಗೆ ಕಾರಣವಾಗಿತ್ತು. ಆಡಿದ ಎರಡು ಪಂದ್ಯಗಳಲ್ಲಿ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳು ಬಂದಿಲ್ಲ. ದೇವದತ್​ ಪಡಿಕ್ಕಲ್​​ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿ ತಮ್ಮ ಪದಾರ್ಪಣೆ ಪಂದ್ಯವನ್ನು ಸ್ಮರಣೀಯಗೊಳಿಸಿಕೊಂಡಿದ್ದರು. ಆದರೆ, ಕಿಂಗ್ಸ್‌ ಎದುರು ಅವರೂ ವೈಫಲ್ಯ ಅನುಭವಿಸಿದ್ದರು. ಎಬಿ ಡಿವಿಲಿಯರ್ಸ್ 28 ರನ್‌ ಗಳಿಸಿದ್ದರು. ಫಿಂಚ್, ಸುಂದರ್ ಮತ್ತು ದುಬೆ ತಕ್ಕಮಟ್ಟಿಗೆ ಹೋರಾಟ ನಡೆಸಿದ್ದರು.

ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್​ಗೆ ಆಡಿರುವ ಎರಡೂ ಪಂದ್ಯಗಳಲ್ಲಿ ಮೈದಾನಕ್ಕೆ ಇಳಿಯಲು ಅವಕಾಶ ಸಿಕ್ಕಿಲ್ಲ. ಈ ಪಂದ್ಯದಲ್ಲಿ ಅವರಿಗೆ ಸ್ಥಾನ ಸಿಕ್ಕರೆ ಬ್ಯಾಟಿಂಗ್ ಬಲ ಬಲಿಷ್ಠವಾಗಬಹುದು. ಪಾರ್ಥಿವ್​ ಅವರು ಇವತ್ತಿನ ಪಂದ್ಯವಾಡಿದರೆ, ಜೋಶ್ ಫಿಲಿಪ್ ಜಾಗ ಖಾಲಿ ಮಾಡಬೇಕಾಗಬಹುದು. ಇನ್ನು ಆಲ್‌ರೌಂಡರ್‌ಗಳಾದ ಪವನ್ ದೇಶಪಾಂಡೆ, ಗುರುಕೀರತ್ ಸಿಂಗ್ ಕೂಡ ಅವಕಾಶದ ನೀರಿಕ್ಷೆಯಲ್ಲಿದ್ದಾರೆ.

ಸದ್ಯ ಮುಂಬೈ ತಂಡದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಎದುರು ಸೋತಿದ್ದ, ಮುಂಬೈ ಎರಡನೇ ಪಂದ್ಯದಲ್ಲಿ ಗೆಲುವಿನ ಓಟಕ್ಕೆ ಬಂದಿದ್ದಾರೆ. ಅದಕ್ಕೆ ಕಾರಣ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಅಬ್ಬರ. ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಸೌರಭ್ ತಿವಾರಿ ಮತ್ತು ಕೃಣಾಲ್ ಪಾಂಡ್ಯ ಕೂಡ ರನ್‌ಗಳನ್ನು ಗಳಿಸಬಲ್ಲರು. ಜಸ್‌ಪ್ರೀತ್ ಬೂಮ್ರಾ, ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್‌ ಲಯಕ್ಕೆ ಮರಳಿರುವುದು ಮುಂಬೈ ತಂಡದ ಬಲ ಹೆಚ್ಚಿಸಿದೆ. ಅದರಿಂದಾಗಿ ಆರ್‌ಸಿಬಿ ಬ್ಯಾಟಿಂಗ್‌ ಪಡೆಯು ಎಚ್ಚರಿಕೆಯಿಂದ ಆಡಬೇಕಾದ ಸವಾಲು ಇದೆ.

Next Story

RELATED STORIES