ಮುಂಬೈ ಇಂಡಿಯನ್ಸ್ಗೆ ಗೆಲುವಿನ ತವಕ, ಕೆಕೆಆರ್ಗೆ ಮೊದಲ ಪಂದ್ಯದ ಪುಳಕ
ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಇಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಜೊತೆ ಮುಖಾಮುಖಿ.

ದಿನೇಶ್ ಕಾರ್ತಿಕ್ (ಕೆಕೆಆರ್) ಮತ್ತು ರೋಹಿತ್ ಶರ್ಮಾ (ಎಂಐ)
ದುಬೈ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಇಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಜೊತೆ ಮುಖಾಮುಖಿ ಆಗಲಿದೆ.
ಆಶ್ಚರ್ಯವಾದರು ಸತ್ಯ, 2013 ಐಪಿಎಲ್ ಆವೃತಿಯಿಂದ ಇಲ್ಲಿಯತನಕ ಮುಂಬೈ ಇಂಡಿಯನ್ಸ್ ತಂಡವು ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದಿಲ್ಲ. ಸದ್ಯ ಸೋಲನ್ನು ಭೇದಿಸಿ, ಇಂದಿನ ಪಂದ್ಯದಲ್ಲಿ ಪುಟಿದೇಳುವ ಉತ್ಸಾಹದಲ್ಲಿ ರೋಹಿತ್ ಬಳಗವಿದೆ. ಕೆಕೆಆರ್ ಮತ್ತು ಮುಂಬೈ ನಡುವಿನ ಪಂದ್ಯ ರನ್ ಹೊಳೆಯನ್ನೇ ಹರಿಸುವ ಸ್ಪೋಟಕ ಶೈಲಿಯ ಬ್ಯಾಟ್ಸ್ಮನ್ಗಳ ಇದ್ದು ಕ್ರಿಕೆಟ್ ಪ್ರೇಮಿಗಳಿಗೆ ಹೆಚ್ಚು ಮನರಂಜನೆ ಸಿಗುವ ಸಾಧ್ಯತೆಗಳಿವೆ.

ಕೆಕೆಆರ್ನಲ್ಲಿರುವ ಯುವ ಬ್ಯಾಟ್ಸ್ಮನ್ ಶುಭಮನ್ ಗಿಲ್, ವಿಂಡೀಸ್ನ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಕಳೆದ ವರ್ಷ ನೀಡಿದ್ದ ಪ್ರದರ್ಶನವನ್ನು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿದೆಯೇ(?) ಸದ್ಯ ಈ ವರ್ಷವೂ ಅವರಿಂದ ಅದೇ ಆಟ ಹೊರಹೊಮ್ಮುವ ನಿರೀಕ್ಷೆ ಇದೆ. ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಕೂಡ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶನ ಮಾಡಲು ಸಜ್ಜಾಗಿದ್ದಾರೆ. ಅಂತೆಯೇ, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ ಆಟಗಾರರು ಸಹ ಮುಂಬೈ ಇಂಡಿಯನ್ಸ್ ತಂಡಕ್ಕೆ ಸವಾಲ್ ಹಾಕುವ ತವಕದಲ್ಲಿದ್ದಾರೆ. ಆಲ್ರೌಂಡರ್ ಸುನೀಲ್ ನಾರಾಯಣ್, ಮಧ್ಯಮವೇಗಿ ಕನ್ನಡಿಗ ಪ್ರಸಿದ್ಧ ಕೃಷ್ಣ, ಪ್ಯಾಟ್ ಕಮಿನ್ಸ್ ಎದುರಾಳಿ ಬ್ಯಾಟಿಂಗ್ ಪಡೆಗೆ ಮಣ್ಣುಮುಕ್ಕಿಸಲು ಸಿದ್ಧತೆಯಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಈ ಬಾರಿ ಬ್ಯಾಟಿಂಗ್ನಲ್ಲಿ ಲಯ ಕಂಡುಕೊಂಡರೆ ರನ್ಗಳನ್ನು ಗಳಿಕೆಗೆ ಬರವಿಲ್ಲ. ಇನ್ನು ಉಳಿದಂತೆ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಸೌರಭ್ ತಿವಾರಿ, ಕ್ವಿಂಟನ್ ಡಿ ಕಾಕ್, ಕೀರನ್ ಪೊಲಾರ್ಡ್ ಮತ್ತು ಸೂರ್ಯ ಕುಮಾರ್ ಯಾದವ್ ಬ್ಯಾಟ್ಗಳಿಂದ ರನ್ ಹೊಳೆ ಹರಿಸಬಲ್ಲ ಶಕ್ತಿ ಹೊಂದಿದ್ದಾರೆ. ಇಂಡಿಯನ್ಸ್ ತಂಡ ಬೌಲಿಂಗ್ನಲ್ಲಿ ಹೆಚ್ಚು ಸುಧಾರಣೆ ಆಗಬೇಕಾದ ಅನಿರ್ವಾಯವಿದೆ. ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್, ಸ್ಪಿನ್ನರ್ ಕೃಣಾಲ್ ಪಾಂಡ್ಯ ಅವರು ಪಂದ್ಯದ ಗತಿಯನ್ನು ಬದಲಾಯಿಸುವ ಸಾಮಾರ್ಥ್ಯ ಹೊಂದಿದ್ದಾರೆ.