Top

ಟೀಂ ಇಂಡಿಯಾ ಕ್ರಿಕೆಟಿಗ ಉಮೇಶ್​ ಯಾದವ್​ ದಂಪತಿಗೆ ಹೆಣ್ಣು ಮಗು ಜನನ

'ನನ್ನ ಮನೆಗೆ ರಾಜಕುಮಾರಿ ಬಂದಿದ್ದಾಳೆ' ಎಂದು ಬರೆದುಕೊಂಡು ಮಗುವಿನ ಪೋಸ್ಟರ್ ಹಾಕಿದ್ದಾರೆ

ಟೀಂ ಇಂಡಿಯಾ ಕ್ರಿಕೆಟಿಗ ಉಮೇಶ್​ ಯಾದವ್​ ದಂಪತಿಗೆ ಹೆಣ್ಣು ಮಗು ಜನನ
X

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟ್ ತಂಡದ ವೇಗಿ ಉಮೇಶ್​ ಯಾದವ್ ಅವರ ಪತ್ನಿ ತಾನ್ಯಾ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ಈ ಸಂಬಂಧವಾಗಿ ಶುಕ್ರವಾರ ಉಮೇಶ್ ಯಾದವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದು, 'ನನ್ನ ಮನೆಗೆ ರಾಜಕುಮಾರಿ ಬಂದಿದ್ದಾಳೆ' ಎಂದು ಬರೆದುಕೊಂಡು ಮಗುವಿನ ಪೋಸ್ಟರ್ ಹಾಕಿದ್ದಾರೆ.

ಅದುವಲ್ಲದೇ ಉಮೇಶ್ ಯಾದವ್ ಅವರನ್ನು ಬಿಸಿಸಿಐ ತಮ್ಮ ಟ್ವಿಟರ್​ ಖಾತೆಯಲ್ಲಿ ಅಭಿನಂದಿಸಿದ್ದಾರೆ. ಆಸ್ಟ್ರೇಲಿಯಾದ ಎದುರಿನ ಎರಡನೇ ಟೆಸ್ಟ್‌ನಲ್ಲಿ ಗಾಯಗೊಂಡಿದ್ದ ಅವರು ಮೂರು ಮತ್ತು ನಾಲ್ಕನೇ ಟೆಸ್ಟ್‌ನಲ್ಲಿ ಆಡುವುದಿಲ್ಲ.

Next Story

RELATED STORIES