Top

ಎದೆ ಝಲ್​ ಎನಿಸುವ ರೌಡಿಶೀಟರ್​ ಬಾಬ್ಲಿ ಕೊಲೆಯ ದೃಶ್ಯ

ಹಾಡಗಲೇ ಬ್ಯಾಂಕ್​​ನೊಳಗೆ ನುಗ್ಗಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಎದೆ ಝಲ್​ ಎನಿಸುವ ರೌಡಿಶೀಟರ್​ ಬಾಬ್ಲಿ ಕೊಲೆಯ  ದೃಶ್ಯ
X

ಬೆಂಗಳೂರು: ಆಡುಗೋಡಿ ರೌಡಿಶೀಟರ್​ ಬಾಬ್ಲಿ ಕೊಲೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜುಲೈ 19ರಂದು ಕೊಲೆಯಾದ ರೌಡಿಶೀಟರ್​ ಬಾಬ್ಲಿ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಕೋರಮಂಗಲ ಬ್ಯಾಂಕ್​ಗೆ ಬಂದಿದ್ದ. ಈ ವೇಳೆ ಏಕಾಏಕಿ ದಾಳಿ ನಡೆಸಿದ ಖದೀಮರು ಬಾಬ್ಲಿಯನ್ನು ಅಟ್ಟಾಡಿಸಿ ಕೊನೆಗೆ ಬ್ಯಾಂಕ್​ನೊಳಗೆ ನುಗ್ಗಿ ಹತ್ಯೆ ಗೈದಿದ್ದರು.

ಕೊಲೆಯ ಬಳಿಕ ಆರೋಪಿಗಳ ಗ್ಯಾಂಗ್​ ಮಚ್ಚು ಹಿಡಿದು ಬೈಕ್​ನಲ್ಲಿ ಸಂಭ್ರಮಿಸಿದ್ದಾರೆ. ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನು ಪ್ರಕರಣದ ಆರೋಪಿಗಳಾದ ರವಿ ಹಾಗೂ ಪ್ರದೀಪ್​ನನ್ನು ನಿನ್ನೆ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದು, ತನಿಖೆ ಮುಂದುವರಿದಿದೆ.

Next Story

RELATED STORIES