Top

ಸರಿಯಾಗಿದ್ದಾಗ ಹೇಳಿದ್ದಾರೋ, ಮತ್ತಲ್ಲಿ ಹೇಳಿದ್ದಾರೋ ತಿಳಿಯಬೇಕು - ಹೆಚ್ಡಿಕೆಗೆ ಸಚಿವ ಸಿಟಿ ರವಿ ತಿರುಗೇಟು

ಸರಿಯಾಗಿದ್ದಾಗ ಹೇಳಿದ್ದಾರೋ, ಮತ್ತಲ್ಲಿ ಹೇಳಿದ್ದಾರೋ ತಿಳಿಯಬೇಕು - ಹೆಚ್ಡಿಕೆಗೆ ಸಚಿವ ಸಿಟಿ ರವಿ ತಿರುಗೇಟು
X

ಬೆಂಗಳೂರು: ಡ್ರಗ್ ಮಾಫಿಯಾದಿಂದ ಸಮ್ಮಿಶ್ರ ಸರ್ಕಾರ ಬಿತ್ತು ಎಂಬ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಹೇಳಿದ್ದರೆ ಹೆಚ್ಡಿಕೆಯನ್ನ ಒಮ್ಮೆ ಪರೀಕ್ಷೆಗೊಳಪಡಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಅವರು ಸರಿಯಾಗಿದ್ದಾಗ ಹೇಳಿದ್ದಾರೋ, ಮತ್ತಲ್ಲಿ ಹೇಳಿದ್ದಾರೋ ತಿಳಿಯಬೇಕು. ಸರ್ಕಾರ ಯಾಕೆ ಬಿತ್ತು ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದರು.

ಇನ್ನು ಸ್ವತಃ ಅವರ ಪಕ್ಷದ ಅಧ್ಯಕ್ಷರೇ ಪಾರ್ಟಿ ಬಿಟ್ಟು ಬಂದರು. ರೋಷನ್ ಬೇಗ್ ರಾಜೀನಾಮೆ ನೀಡಿದರು. ಅದಕ್ಕೆಲ್ಲಾ ಕಾರಣ ನೀಡಿದ್ದಾರೆ. ಸರ್ಕಾರ ಏಕಾಏಕಿ ಅಧಿಕಾರಕ್ಕೆ ಬಂದಿದ್ದಲ್ಲ, ಅದಕ್ಕೆ ಒಂದು ವರ್ಷದ ಆಂತರಿಕ ಕಿತ್ತಾಟ ನಡೆದಿತ್ತು. ಸರ್ಕಾರ ನಂಬರ್ ಮೇಲೆ ಬಂದಿದೆ ಎಂದಿದ್ದಾರೆ.

ಅಲ್ಲದೇ, ಡ್ರಗ್ಸ್ ಆರೋಪ ಮಾಡುತ್ತಿದ್ದೀರಲ್ಲ, ನೀವು ಅಂದು ಮುಖ್ಯಮಂತ್ರಿ ಆಗಿದ್ದವರು. ನಿಮ್ಮ ಬಳಿ ಅಧಿಕಾರ ಇತ್ತು ಇಂಟೆಲಿಜೆನ್ಸಿ ಇತ್ತು. ಹಾಗಾದರೆ ನೀವು ಅಷ್ಟು ದುರ್ಬಲರಾಗಿದ್ರಾ(?) ನಿಮಗೆ ಡ್ರಗ್ ಮಾಫಿಯಾದವರ ಒತ್ತಡವೇನಾದ್ರೂ ಇತ್ತಾ(?) ಮಾಫಿಯಾದವರ ಜೊತೆ ಆಂತರಿಕ ಬಾಂಧವ್ಯ ಇತ್ತಾ(?) ನೀವು ಸಿಎಂ ಆಗಿದ್ದವರು ಈ ರೀತಿ ಹೇಳಬೇಡಿ. ನಮಗೆ ಜೆಡಿಎಸ್ ಪಕ್ಷದ ಮೇಲೆ ಗೌರವ ಇದೆ ಎಂದು ಸಚಿವ ಸಿ.ಟಿ ರವಿ ಅವರು ಹೆಚ್ಡಿಕೆಗೆ ಟಾಂಗ್​ ನೀಡಿದ್ದಾರೆ.

Next Story

RELATED STORIES