ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಜೈಲಿಗೆ ಹೋಗಿ ಬಂದಿದ್ದೀನಿ - ಎಂ.ಪಿ ರೇಣುಕಾಚಾರ್ಯ
ನಾವು ಫ್ರಿಡ್ಜು, ಟಿವಿ ಇಡಬಹುದು, ಬಡವರು ಟಿವಿ ಫ್ರಿಡ್ಜು ಇಡಬಾರದಾ(?)

ಬೆಂಗಳೂರು: ಈ ಹೇಳಿಕೆ ಅವರದೋ(?) ಅಥವಾ ಯಾವ ಐಎಎಸ್ ಅಧಿಕಾರಿ ಲಾಭಿಯೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರು ಮಂಗಳವಾರ ಹೇಳಿದ್ದಾರೆ.
ಸಚಿವ ಉಮೇಶ್ ಕತ್ತಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮದ ಮಾತನಾಡಿದ ಅವರು, ನಮ್ಮದು ಎಲ್ಲ ವರ್ಗದ ಸರ್ಕಾರ. ಈ ಬಗ್ಗೆ ಜಾರಿ ಆದೇಶವೇ ಆಗಿಲ್ಲ, ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತೆ. ದ್ವಂದ್ವ ಹೇಳಿಕೆ ನೀಡಬಾರದು ಎಂದಿದ್ದಾರೆ.
ಇನ್ನು ನಕಲಿ ಕಾರ್ಡ್ಗಳ ಬಗ್ಗೆ ತನಿಖೆ ಮಾಡಿ ರದ್ದು ಮಾಡಲಿ. ಬಡವರು ಮನರಂಜನೆಗೋಸ್ಕರ ಟಿವಿ ಇಡ್ತಾರೆ. ಮಹಿಳೆಯರಿಗೆ ಒತ್ತಡ ಇರುತ್ತೆ ಟಿವಿ ನೋಡ್ತಾರೆ. ಕೆಲವರು ಖಾಸಗಿ ಬ್ಯಾಂಕ್ಗಳು ಡಿಪಾಸಿಟ್ ಇಲ್ಲದೆ ಬೈಕ್ ಕೊಡ್ತಾರೆ. ನಾವು ಫ್ರಿಡ್ಜು, ಟಿವಿ ಇಡಬಹುದು, ಬಡವರು ಟಿವಿ ಫ್ರಿಡ್ಜು ಇಡಬಾರದಾ(?) ಎಂದು ಉಮೇಶ್ ಕತ್ತಿ ಹೇಳಿಕೆಗೆ ಕಿಡಿಕಾರಿದ್ದಾರೆ.
2003ರಲ್ಲಿ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಜೈಲಿಗೆ ಹೋಗಿ ಬಂದಿದ್ದೀನಿ, ಹೋರಾಟ ಮಾಡಿದ್ದೀನಿ. ಇದು ಸರ್ಕಾರದ ಹೇಳಿಕೆ ಅಲ್ಲ, ಮಂತ್ರಿಗೆ ಯಾರೋ ಅಧಿಕಾರಿ ಹೇಳಿರಬಹುದು ಇದಕ್ಕೆ ನಮ್ಮ ವಿರೋಧ ಇದೆ ಅಂತ ಈಗಾಗಲೇ ಹೇಳಿದ್ದೇನೆ ಎಂದು ಹೊನ್ನಾಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಮಾತನಾಡಿದ್ದಾರೆ.