Top

ಬುದ್ಧಿವಂತೆ, ಸುಸಂಸ್ಕೃತ ಕುಸುಮಾಗೆ ಮತ ಹಾಕಿ - ಮಾಜಿ ಸಿಎಂ ಸಿದ್ದರಾಮಯ್ಯ

ಆರ್​ಆರ್​ ನಗರ ಮತ್ತು ಶಿರಾದಲ್ಲಿ ಮತದಾರರು ಇವರಿಗೆ ಬುದ್ಧಿ ಕಳಿಸುತ್ತಾರೆ

ಬುದ್ಧಿವಂತೆ, ಸುಸಂಸ್ಕೃತ ಕುಸುಮಾಗೆ ಮತ ಹಾಕಿ - ಮಾಜಿ ಸಿಎಂ ಸಿದ್ದರಾಮಯ್ಯ
X

ಬೆಂಗಳೂರು: ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದ ಮುನಿರತ್ನ, ಅವರು ಕೇವಲ ಪಕ್ಷಕ್ಕೆ ಮಾತ್ರ ಚೂರಿ ಹಾಕಿಲ್ಲ, ಮತ ಹಾಕಿದ ನಿಮಗೂ ಚೂರಿ ಹಾಕಿದ್ದಾನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ಆರ್​ಆರ್​ ನಗರ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್​ ಅಭ್ಯರ್ಥಿ ಹೆಚ್​ ಕುಸುಮಾ ಪರ ಪ್ರಚಾರ ಮಾಡುವ ವೇಳೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಇರ್ತಾನೆ ಅನ್ನೋದಕ್ಕೆ ಏನು ಗ್ಯಾರಂಟಿ. ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿ ಆತ. ಗೂಂಡಾಗಿರಿ, ಮಹಿಳೆಯರ ಮೇಲೆ ದೌರ್ಜನ್ಯ ಚಟುವಟಿಕೆಗಳನ್ನು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಮುನಿರತ್ನ ಹಿನ್ನೆಲೆ ನೋಡಿ ಎಲ್ಲಿಂದ ಬಂದಿದ್ದಾರೆ. ಸಾರ್ವಜನಿಕ ಜೀವನದಲ್ಲಿರಲೂ ಆತ ಯೋಗ್ಯನಲ್ಲ, ಬುದ್ಧಿವಂತೆ, ಸುಸಂಸ್ಕೃತ ಕುಸುಮಾಗೆ ಮತ ಹಾಕಿ ಎಂದು ಹೇಳಿದರು.

ರೈತ ಮುಖಂಡ ಮಾರುತಿ ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಕಾರಣ ಎಂದ ಸದಾನಂದ ಗೌಡರ ಹೇಳಿಕೆ ವಿಚಾರಕ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದೊಂದು ಬಾಲಿಶ ಹೇಳಿಕೆ. ಕಾನೂನು ತಂದವರು ನಾವಾ(?) ಯಡಿಯೂರಪ್ಪ, ಸದಾನಂದಗೌಡ, ಮೋದಿ ಕಾರಣ. ಎಪಿಎಂಸಿ ಮತ್ತು ಭೂ ಸುಧಾರಣಾ ತಂದು ಮುಖಂಡರು ಬೀದಿಗೆ ಇಳಿಯುವಂತೆ ಆಯಿತು. ಅವರ ಸಾವಿಗೆ ನೇರ ಕಾರಣ ಬಿಜೆಪಿ ಕೇಂದ್ರ ಸರ್ಕಾರ. ಕಾಂಗ್ರೆಸ್ ನಾಯಕರು ಕಾರಣ ಅನ್ನೋದು ಒಂದು ಬಾಲಿಶಾ ಹೇಳಿಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.

ಶಿರಾದಲ್ಲಿ ಬಿಜೆಪಿ ಹಣ ಹಂಚಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಕೆಆರ್ ಪೇಟೆಯಲ್ಲೂ ದುಡ್ಡು ಹಂಚಿ ಗೆದ್ರು. ಆದರೆ, ಆರ್​ಆರ್​ ನಗರ ಮತ್ತು ಶಿರಾದಲ್ಲಿ ಮತದಾರರು ಇವರಿಗೆ ಬುದ್ಧಿ ಕಳಿಸುತ್ತಾರೆ. ಹಣದ ಆಮಿಷಕ್ಕೆ ಒಳಗಾಗುವುದಿಲ್ಲ ಎಂದರು

Next Story

RELATED STORIES