Top

ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನ ಹಗರಣ ಬಯಲಿಗೆಳೆಯುತ್ತೇವೆ - ನಳೀನ್​ ಕುಮಾರ್​ ಕಟೀಲ್

ಯಡಿಯೂರಪ್ಪರಂತಹ ನಾಯಕ ಕಾಂಗ್ರೆಸ್​ನಲ್ಲಿಯೂ ಇಲ್ಲ. ಅವರು ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನ ಹಗರಣ ಬಯಲಿಗೆಳೆಯುತ್ತೇವೆ - ನಳೀನ್​ ಕುಮಾರ್​ ಕಟೀಲ್
X

ಕಲಬುರಗಿ: ಟಿಪ್ಪು ಬಗ್ಗೆ ಎಂಎಲ್​ಸಿ ಹೆಚ್​ ವಿಶ್ವನಾಥ್ ಹೇಳಿಕೆ ವಿಚಾರದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಅವರು ಪ್ರತಿಕ್ರಿಯೆ ನೀಡಿದ್ದು, ಅದು ಅವರ ವ್ಯಯಕ್ತಿಕ ವಿಚಾರ ಎಂದು ಅವರು ಗುರುವಾರ ಹೇಳಿದ್ದಾರೆ.

ಕಲಬುರಗಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಬಿಜೆಪಿ ಟಿಪ್ಪು ವಿರುದ್ಧ ಹೋರಾಡುತ್ತಾ ಬಂದಿದೆ. ಟಿಪ್ಪುವಿನ ವಿಚಾರದಲ್ಲಿ ಬಿಜೆಪಿಗೆ ಸ್ಪಷ್ಟ ನಿಲುವಿದೆ. ವಿಶ್ವನಾಥ್ ಅವರ ಹೇಳಿಕೆ ಬಗ್ಗೆ ವಿವರಣೆ ಪಡೆಯುತ್ತೇನೆ ಎಂದು ಅವರು ಹೇಳಿದರು.

ಸಿಎಂ ಪುತ್ರ ವಿಜಯೇಂದ್ರ ಸೂಪರ್ ಸಿಎಂ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪರಂತಹ ನಾಯಕ ಕಾಂಗ್ರೆಸ್​ನಲ್ಲಿಯೂ ಇಲ್ಲ. ಅವರು ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಕಟೀಲ್ ಅವರು ಸಿಎಂ ಬಿಎಸ್​ವೈ ಅವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನ ಹಗರಣಗಳನ್ನು ಬಯಲಿಗೆಳೆಯುತ್ತೇವೆ. ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಗೊಂದಲ ಸೃಷ್ಟಿಸುತ್ತದೆ. ಕಾಂಗ್ರೆಸ್ ನಾಯಕರು ಗೊಂದಲ ಸೃಷ್ಟಿಸಿ ಬೆಂಕಿ ಹಚ್ಚಿ ಸುಖ ಅನುಭವಿಸುತ್ತಾರೆ. ಡಿ.ಜೆ ಹಳ್ಳಿ ಗಲಭೆ, ಕಾಂಗ್ರೆಸ್​ನ ಆಂತರಿಕ ಗೊಂದಲದಿಂದ ಆಗಿದ್ದು, ಕಾಂಗ್ರೆಸ್ ಇಂದು ವೃದ್ದಾಶ್ರಮವಾಗುತ್ತಿದೆ. ಅವರಿಗೆ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಲು ಆಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ ಕಟೀಲ್ ಅವರು ಕಾಂಗ್ರೆಸ್​ಅನ್ನು ಟೀಕಿಸಿದ್ದಾರೆ.

Next Story

RELATED STORIES