Top

ರಾಜ್ಯದ ಹಿತದೃಷ್ಟಿಯಿಂದ BSY ರಾಜೀನಾಮೆ ನೀಡಬೇಕು-ವಾಟಾಳ್​ ನಾಗರಾಜ್​

ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು, ಆಡಳಿತ ನಡೆಸುತ್ತಿರುವುದು ಎಲ್ಲವೂ ಅಪವಿತ್ರ

ರಾಜ್ಯದ ಹಿತದೃಷ್ಟಿಯಿಂದ BSY ರಾಜೀನಾಮೆ ನೀಡಬೇಕು-ವಾಟಾಳ್​ ನಾಗರಾಜ್​
X

ಮೈಸೂರು: ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ 6 ತಿಂಗಳೇ ಆಗಿದೆ. ಈಗಂತೂ ತುತ್ತ ತುದಿಗೆ ಬಂದಿದೆ. ಸಿಎಂ ಬದಲಾವಣೆ ಒಂದು ವರ್ಗ ಒತ್ತಾಯ ಮಾಡುತ್ತಿದೆ. ಇವರು ಸಿಎಂ ಆಗಿ ಉಳಿಬೇಕು ಅಂತ ಮತ್ತೊಂದು ವರ್ಗ ಹೊರಾಟ ಮಾಡ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದೆ. ಹೀಗಾಗಿ ರಾಜ್ಯದ ಹಿತದೃಷ್ಟಿಯಿಂದ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಾಧೀಶರು ಯಡಿಯೂರಪ್ಪ ಪರ ನಿಂತಿರುವ ಬಗ್ಗೆ ಕಿಡಿಕಾರಿದರು. ಮಠಗಳಿಗೆ ಐತಿಹಾಸಿಕ ಪರಂಪರೆ ಇದೆ. ಮಠಾಧಿಪತಿಗಳು ಯಾವತ್ತೂ ಬೀದಿಗೆ ಬಂದಿಲ್ಲ. ಆದರೆ ಯಡಿಯೂರಪ್ಪ ಆಡಳಿತದಲ್ಲಿ ಮಠಗಳನ್ನ ಅಪವಿತ್ರ ಮಾಡಿದ್ದಾರೆ. ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು, ಆಡಳಿತ ನಡೆಸುತ್ತಿರುವುದು ಎಲ್ಲವೂ ಅಪವಿತ್ರ ಎಂದರು.

ಇನ್ನು ಮಠಾಧಿಪತಿಗಳು ದಯಮಾಡಿ ಇದರಲ್ಲಿ ಕೈ ಹಾಕಬೇಡಿ‌. ಕೆಲ ಶ್ರೀಮಂತ ಮಠಗಳು ಮಾತ್ರ ಯಡಿಯೂರಪ್ಪ ಜೊತೆ ಬಂದಿದ್ದಾರೆ. ನಿಮ್ಮ ಶ್ರೀಮಂತ ಮಠಗಳ ಮೆಡಿಕಲ್ ಕಾಲೇಜಿನಲ್ಲಿ ಲಿಂಗಾಯತರಿಗೆ, ಬಡವರಿಗೆ ಉಚಿತ ಮೆಡಿಕಲ್ ಸೀಟ್ ಕೊಟ್ಟಿದ್ದೀರಾ ಬಹಿರಂಗಪಡಿಸಿ ಎಂದು ಆಗ್ರಹಿಸಿದರು.

Next Story

RELATED STORIES