Top

ರಾಜಕಾರಣದಲ್ಲಿ ಧರ್ಮ ಇರಬೇಕು ಆದರೆ ಧರ್ಮದಲ್ಲಿ ರಾಜಕಾರಣ ಇರಬಾರದು - ಡಿ.ಕೆ ಶಿವಕುಮಾರ್

ಅಖಂಡ ಅವರು ನನ್ನ ಜೊತೆ ಏನೂ ಮಾತನಾಡಿಲ್ಲ. ತನಿಖೆ ನಡೆಯುತ್ತಿದೆ, ಎಲ್ಲವೂ ಮುಗಿಯಲಿ. ವೈಯುಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ

ರಾಜಕಾರಣದಲ್ಲಿ ಧರ್ಮ ಇರಬೇಕು ಆದರೆ ಧರ್ಮದಲ್ಲಿ ರಾಜಕಾರಣ ಇರಬಾರದು - ಡಿ.ಕೆ ಶಿವಕುಮಾರ್
X

ಬೆಂಗಳೂರು: ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು, ಕಾನೂನು ದುರುಪಯೋಗ ಮಾಡುತ್ತಿರೋದು ಗೊತ್ತಿದೆ, ಅಖಂಡ ಅವರು ನನ್ನ ಜೊತೆ ಏನೂ ಮಾತನಾಡಿಲ್ಲ. ತನಿಖೆ ನಡೆಯುತ್ತಿದೆ, ಎಲ್ಲವೂ ಮುಗಿಯಲಿ. ವೈಯುಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದರು.

ಮಾಜಿ ಮೇಯರ್​ ಸಂಪತ್​ ರಾಜ್​ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಸದಾಶಿವನಗರದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು, ಕಾಂಗ್ರೆಸ್​ನವರನ್ನ ಟಾರ್ಗೆಟ್ ಮಾಡಬೇಕು ಅಂತ ಮಾಡುತ್ತಿದ್ದಾರೆ. ಏನಾದರೂ ಮಾಡಿ ತೊಂದರೆ ಮಾಡೋಕೆ ಮಾಡುತ್ತಿದ್ದಾರೆ. ಬಿಜೆಪಿಯವರು ಕಾಂಗ್ರೆಸ್​ಗೆ ಕೆಟ್ಟ ಹೆಸರು ತರುವ ಪ್ರಯತ್ನ ಇದನ್ನು ಯಾರು ಮುಚ್ಚುವಂತದ್ದೇನಿಲ್ಲ, ಅವರು ಕೂಡ ಕಾಂಗ್ರೆಸ್, ನಾನೂ ಕಾಂಗ್ರೆಸ್. ನಾನು ಚಾರ್ಜ್​ಶೀಟ್ ನೋಡಿದ್ದೇನೆ. ಕೋರ್ಟ್ ವಿಚಾರ ಇರೋದ್ರಿಂದ ಈಗ ಮಾತನಾಡಲ್ಲ ಎಂದಿದ್ದಾರೆ.

ಇನ್ನು ಸಂಪತ್ ಓಡೋಗಿದ್ದಾರೆ ಅಂತ ಹೇಗೆ ಹೇಳ್ತೀರ. ಪಕ್ಷದ ಚೌಕಟ್ಟಿನಲ್ಲಿ ಯಾರು ಇರ್ತಾರೆ ಅವರ ಜೊತೆ ನಾವು ಇರ್ತವೆ. ಅಖಂಡ ಪರವಾಗಿ ಇಲ್ಲ ಅಂತ ಹೇಗೆ ಹೇಳ್ತೀರ. ಘಟನೆ ನಡೆಯುತ್ತಲೇ ನಾವು ಅಲ್ಲಿಗೆ ಭೇಟಿ ಕೊಟ್ಟಿದ್ದೇವೆ. ಎಲ್ಲವನ್ನೂ ಪರಿಶೀಲಿಸಿದ್ದೇವೆ. ವ್ಯಕ್ತಿಯ ಬಗ್ಗೆ ವೈಯಕ್ತಿಕವಾಗಿ ನಾನು ಹೇಳಲ್ಲ. ನೀವು ಕೇಳ್ತಿರ ಅಂತ ಹೇಳುತ್ತಿದ್ದೇನೆ. ಪಕ್ಷದ ಚೌಕಟ್ಟಿನಲ್ಲಿ ಏನು ಮಾಡಬೇಕೋ ಮಾಡುತ್ತೇವೆ. ನಾವು ಅಖಂಡ ಅವರ ಪರವಾಗಿಯೇ ಇದ್ದೇವೆ. ನಮ್ಮ ಕಾಂಗ್ರೆಸ್​ನವರನ್ನ ಸಿಕ್ಕಿಸೋ ಪ್ರಯತ್ನ. ಬಿಜೆಪಿಯವರು ಏನೋ ಬೇಕೋ ಅದನ್ನ ಮಾಡುತ್ತಿದ್ದಾರೆ. ಕಾಲ ಬರಲಿ ಎಲ್ಲದಕ್ಕೂ ಉತ್ತರ ಕೊಡುತ್ತೇವೆ. ಈ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ ಎಂದರು.

ಇಂದಿನಿಂದ ಕಾಲೇಜು ಪ್ರಾರಂಭ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ವಿಮರ್ಶಿಸಿ ಇದನ್ನ ಮಾಡುತ್ತಿದೆ. ಅವರು ಏನು ಮಾಡ್ತಾರೋ ಮಾಡಲಿ. ಪೋಷಕರು, ವಿದ್ಯಾರ್ಥಿಗಳಿಗೆ ರಕ್ಷಣೆ ಸಿಗಬೇಕು. ಕೋವಿಡ್​ನಿಂದ ರಕ್ಷಣೆ ಸಿಗಬೇಕು. ಎಲ್ಲಾ ಮಾರ್ಗಸೂಚಿಗಳನ್ನ ಅನುಸರಿಸಬೇಕು ಎಂದು ಹೇಳಿದರು.

ಇದೇ ವೇಳೆ ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಧರ್ಮವನ್ನ ಸ್ವಲ್ಪ ದೂರವಿಡೋಣ. ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ, ಧರ್ಮದಲ್ಲಿ ರಾಜಕಾರಣ ಇರಬಾರದು. ಅವರು ಎಲ್ಲವನ್ನೂ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲಾ ಸಮುದಾಯಗಳನ್ನ ಬೇರೆ ಬೇರೆ ಮಾಡುತ್ತಿದ್ದಾರೆ ಇದರ ಬಗ್ಗೆ ನಾನು ಈಗ ಮಾತನಾಡಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ನಂತರ ಇದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಈಗ ಧರ್ಮದ ವಿಚಾರದಲ್ಲಿ ಮಾತನಾಡೋದು ಬೇಡ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದರು.

Next Story

RELATED STORIES