Top

ನಿಗಮ ಮಂಡಳಿ ಬೇಡ ಅನಿಸಿತು ಅದಕ್ಕೆ ಬೇಡ ಅಂದೆ - ಶಾಸಕ ಎಂ.ಪಿ ಕುಮಾರಸ್ವಾಮಿ

ಸಿಎಂ ನಮ್ಮ ನಾಯಕರು, ಅವರ ಮೇಲೆ ನಮಗೆ ಯಾವುದೇ ಬೇಸರ ಇಲ್ಲ. ಅವರು ಕೋವಿಡ್, ಪ್ರವಾಹ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.

ನಿಗಮ ಮಂಡಳಿ ಬೇಡ ಅನಿಸಿತು ಅದಕ್ಕೆ ಬೇಡ ಅಂದೆ - ಶಾಸಕ ಎಂ.ಪಿ ಕುಮಾರಸ್ವಾಮಿ
X

ಬೆಂಗಳೂರು: ನಿಗಮ ಮಂಡಳಿ ಬೇಡ ಅನಿಸಿತು, ಅದಕ್ಕೆ ಬೇಡ ಅಂದೆನಿಗಮ ಮಂಡಳಿ ಬೇಡ ಅನಿಸಿತು, ಅದಕ್ಕೆ ಬೇಡ ಅಂದೆ ಎಂದು ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಶುಕ್ರವಾರ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೊಡಿ ಎಂದು ಯಾವತ್ತೂ ಒತ್ತಡ ಹಾಕಿಲ್ಲ, ನನಗೆ ನಿಗಮ ಮಂಡಳಿ ಬೇಡ ಅನ್ನೋದು ಸ್ವಂತ ತೀರ್ಮಾನ. ಅನ್ಯತಾ ಭಾವಿಸೋದು ಇದರಲ್ಲಿ ಮತ್ತೇನಿಲ್ಲ, ನಾನು ನಿಗಮ ಮಂಡಳಿ ತಗೊಳಲ್ಲ ಎಂದು ಅವರು ತಿಳಿಸಿದರು.

ಇನ್ನು ಸಿಎಂ ನಮ್ಮ ನಾಯಕರು. ಮೂರು ವರ್ಷದಲ್ಲಿ ಒಳ್ಳೆ ಆಡಳಿತ ನೀಡಲಿ. ಅವರ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ, ಅವರ ನಾಯಕತ್ವವೇ ನಮಗೆ ಮುಖ್ಯ. ಇನ್ನೂ ಮೂರು ವರ್ಷ ಅವಧಿ ಇದೆ. ಸಚಿವ ಸ್ಥಾನ ಕೊಟ್ಟರೆ ಕೊಡಿ ಅನ್ನೋದು ನಮ್ಮ ಆಶಯ ಎಂದರು.

ನಿಗಮ ಮಂಡಳಿ ಕೇಳಿರಲಿಲ್ಲ, ವಿಶ್ವಾಸವಿಟ್ಟು ಕೊಟ್ಟಿದ್ದಾರೆ. ಆದರೆ, ನಂಗೆ ಬೇಡ ಅನ್ನಿಸ್ತು ಅದಕ್ಕೆ ಸಿಎಂಗೆ ಪತ್ರ ಬರೆದು ತಿಳಿಸ್ತೀನಿ. ಯಾವುದೇ ಕಾರಣಕ್ಕೂ ನಿಗಮ ಮಂಡಳಿ ತೆಗೆದುಕೊಳ್ಳೋದಿಲ್ಲ, ಸಿಎಂ ನಮ್ಮ ನಾಯಕರು, ಅವರ ಮೇಲೆ ನಮಗೆ ಯಾವುದೇ ಬೇಸರ ಇಲ್ಲ. ಅವರು ಕೋವಿಡ್, ಪ್ರವಾಹ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇನ್ನೂ ಮೂರು ವರ್ಷ ಒಳ್ಳೇ ಕೆಲಸ ಮಾಡ್ತಾರೆ. ಬಿಜೆಪಿಯ ಮೂವರು ಶಾಸಕರು ಆಯ್ಕೆ ಆಗಿದ್ದಾರೆ. ಯಾರಿಗಾದರೂ ಕೊಡಿ ಅಂತಾ ಕೇಳಿದ್ದೇನೆ. ನಂಗೆ ಕೊಡಿ ಅಂತಾ ಕೇಳಿಲ್ಲ ಎಂದು ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Next Story

RELATED STORIES