Top

ರಾಜ್ಯದ 25 ಸಂಸದರಿಗೆ ಧಮ್​ ಇಲ್ಲ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಚೀಫ್ ಮಿನಿಸ್ಟರ್​ಗೂ ಧೈರ್ಯವಿಲ್ಲ, ರಾಜ್ಯದ ಸಂಸದರಿಗೂ ಧೈರ್ಯವಿಲ್ಲ

ರಾಜ್ಯದ 25 ಸಂಸದರಿಗೆ ಧಮ್​ ಇಲ್ಲ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
X

ಬೆಂಗಳೂರು: ಹತ್ತು ದಿನಗಳಿಂದ ಮಳೆ ಪ್ರಾರಂಭವಾಗಿದೆ, ಸುಮಾರು 12 ಜಿಲ್ಲೆಗಳಲ್ಲಿ ಮಳೆಯಾಗಿದೆ. ರೆವಿನ್ಯೂ ಮಿನಿಸ್ಟರ್ ಕಾಟಾಚಾರಕ್ಕೆ ಹೋಗಿದ್ದಾರೆ. ಆಗಸ್ಟ್​ನಲ್ಲೇ ಬಂದಿರೋದಕ್ಕೆ ಪರಿಹಾರ ಬಂದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.

ಉತ್ತರ ಕರ್ನಾಟಕದಲ್ಲಿ ನೆರೆ ಹಿನ್ನೆಲೆ ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಂ ಇನ್ನೂ ಅಲ್ಲಿಗೆ ಹೋಗೆ ಇಲ್ಲ, ಸಚಿವರು ಅಲ್ಲೇ ಇದ್ದು ಪರಿಸ್ಥಿತಿ ನೋಡಿಕೊಳ್ಳಬೇಕು. ಜನ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಕೇಂದ್ರ ಸರ್ಕಾರವೂ ಏನೂ ಪರಿಹಾರ ನೀಡಿಲ್ಲ ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದರು.

ನಾನು ಕೇಂದ್ರದ ಪರಿಹಾರಕ್ಕೆ ಒತ್ತಾಯಿಸಿದ್ದೆ. ಮಂತ್ರಿಗಳಿಗೆ ಕೊರೊನಾ ಬಂದಿದೆ. ಕೆಲವರು ಇಲ್ಲಿ ಎಲೆಕ್ಷನ್ ಮಾಡುತ್ತಿದ್ದಾರೆ. ಕಾರಜೋಳ ವಿಜಯಪುರದಲ್ಲಿ ಮಳೆ ಬಂದಿದೆ. ಇಲ್ಲಿ ಎಲೆಕ್ಷನ್ ಮೆರವಣಿಗೆ ಮಾಡಿಕೊಂಡಿದ್ದಾರೆ. ಜಿಲ್ಲಾ ಮಂತ್ರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸರ್ಕಾರದ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಡಿಸಿದ್ದಾರೆ.

ಮೋದಿ ಮೊದಲಿನಿಂದಲೂ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಆಗ ಮಳೆ ಬಂದಾಗ ಬಿಹಾರಕ್ಕೆ ಹೋಗಿದರು. ಆದರೆ, ಕರ್ನಾಟಕಕ್ಕೆ ಏನಾದ್ರೂ ಬಂದಿದ್ರಾ(?) ನಿನ್ನೆ ಒಂದು ಟ್ವಿಟ್​​​ ಮಾಡಿದ್ದಾರೆ. ಸುಮಾರು 10 ಸಾವಿರ ಕೋಟಿ ಈ ಭಾರೀ ನಷ್ಟವಾಗಿದೆ. ಕಾರಜೋಳರಿಗೆ ಸರಿಯಾಗಿ ಲೆಕ್ಕ ಗೊತ್ತಿಲ್ಲ, 200 ಕೋಟಿ ನಷ್ಟ ಅಂದ್ರೆ ಮಾಹಿತಿ ಇಲ್ಲ ಅಂತ ಅರ್ಥ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ನಾನು ಸಿಎಂ ಹಲವು ಪತ್ರ ಬರೆದಿದ್ದೆ. ಪತ್ರಕ್ಕೆ ಏನಾದರೂ ಸರಿಯಾದ ಉತ್ತರ ಕೊಟ್ರಾ(?) ಪರಿಹಾರದ ಬಗ್ಗೆ ಕೇಳಿದ್ದ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ, ಸುಮಾರು 10 ರಿಂದ 15 ಸಾವಿರ ಕೋಟಿ ನಷ್ಟವಾಗಿದೆ. ಈ ಬಾರಿಯ ಪ್ರವಾಹದಿಂದ ನಷ್ಟವಾಗಿದೆ. ಎಷ್ಟು ಪತ್ರ ಬರೆದ್ರೂ ಉತ್ತರ ಕೊಡಲ್ಲ, ದಪ್ಪ ಚರ್ಮದ ಸರ್ಕಾರವಾಗಿದೆ. ದುಡ್ಡು ಮಾಡೋದ್ರಲ್ಲೇ ಅವರು ಬ್ಯುಸಿಯಾಗಿದ್ದಾರೆ. ಅವರಿಗೆ ಎಲೆಕ್ಷನ್ ಮುಖ್ಯವಾಗಿದೆ ಅವರಿಗೆ ಪ್ರವಾಹ ಸಂತ್ರಸ್ಥರ ಸಮಸ್ಯೆ ಬೇಕಿಲ್ಲ ಎಂದು ರಾಜ್ಯ ಸರ್ಕಾರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸದ್ಯ ಜನರಿಗೆ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಜನರೇ ಅವರಿಗೆ ಪಾಠ ಕಲಿಸ್ತಾರೆ. ನಾನು ಅನೇಕ ಬಾರಿ ಹೇಳಿದ್ದೇನೆ. ರಾಜ್ಯದ 25 ಸಂಸದರಿಗೆ ಧಮ್​ ಇಲ್ಲ, ಅವರು ಯಾವತ್ತು ಪ್ರಧಾನಿ ಮುಂದೆ ಬೇಡಿಕೆ ಇಟ್ಟಿದ್ದಾರೆ. 15ನೇ ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಯ್ತು. ಜಿಎಸ್​ಟಿ ಪರಿಹಾರವನ್ನೂ ಕೇಳಲಿಲ್ಲ. ನೆರೆ ಪರಿಹಾರವನ್ನೂ ಅವರು ಕೇಳುತ್ತಿಲ್ಲ. ಚೀಫ್ ಮಿನಿಸ್ಟರ್​ಗೂ ಧೈರ್ಯವಿಲ್ಲ, ರಾಜ್ಯದ ಸಂಸದರಿಗೂ ಧೈರ್ಯವಿಲ್ಲ. ಪ್ರಧಾನಿ ಕನ್ನಡದಲ್ಲಿ ಟ್ವಿಟ್​​ ಮಾಡಿ ಬಿಟ್ರೆ ಆಯ್ತಾ(?) ಕನ್ನಡಿಗರಿಗೆ ನ್ಯಾಯ ಸಿಕ್ಕಿಬಿಡುತ್ತಾ(?) ನಾನು ಬೇರೆ ಭಾಷೆಯಲ್ಲಿ ಟ್ವಿಟ್​ ಮಾಡ್ತೇನಪ್ಪ. ಮೊದಲು ನೆರೆ ಪರಿಹಾರ ಕೊಡೋಕೆ ಹೇಳಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Next Story

RELATED STORIES