Top

ಯಡಿಯೂರಪ್ಪರನ್ನ ತೆಗೆಯೋದ್ರಿಂದ ಲಾಭ ಇಲ್ಲ-ಸಿದ್ದರಾಮಯ್ಯ

ನನಗೆ ಯಡಿಯೂರಪ್ಪ ಅವರನ್ನು ಇಳಿಸುವ ಬಗ್ಗೆ ಖಚಿತ ಮಾಹಿತಿ ಇತ್ತು

ಯಡಿಯೂರಪ್ಪರನ್ನ ತೆಗೆಯೋದ್ರಿಂದ ಲಾಭ ಇಲ್ಲ-ಸಿದ್ದರಾಮಯ್ಯ
X

ಬೆಂಗಳೂರು: ನಾನು ಆರೇಳು ತಿಂಗಳಿಂದ ಹೇಳ್ತಾನೇ ಇದ್ದೆ. ನನಗೆ ಯಡಿಯೂರಪ್ಪ ಅವರನ್ನು ಇಳಿಸುವ ಬಗ್ಗೆ ಖಚಿತ ಮಾಹಿತಿ ಇತ್ತು. ಅವರನ್ನು ಸಿಎಂ ಸ್ಥಾನದಿಂದ ತೆಗೆಯೋದ್ರಿಂದ ಲಾಭವೇನಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಭ್ರಷ್ಟರು. ಅವರ ಜೊತೆ ಬಿಜೆಪಿಯಲ್ಲಿರುವ ಹಲವರು ಭ್ರಷ್ಟಚಾರಿಗಳು. ಯಾವಾಗಲೂ ಭ್ರಷ್ಟರು ಉಳಿಯೋದಿಲ್ಲ ಅನ್ನೋದು ತಿಳಿಯಬೇಕು ಎಂದರು.

ಇನ್ನು ದೇಶದಲ್ಲಿ 50ಲಕ್ಷ ಜನ ಎರಡನೇ ಅಲೆಯಲ್ಲಿ ಸತ್ತಿದ್ದಾರೆ. ನಮ್ಮಲ್ಲಿ ಸರ್ಕಾರ ಕೊಟ್ಟಿರುವ ಅಂಕಿಗಿಂತ 10ಪಟ್ಟು ಹೆಚ್ಚು ಜನ ಸತ್ತಿದ್ದಾರೆ. ಇವರ ದುರಾಡಳಿತದಿಂದ ಜನ ಸತ್ತಿದ್ದಾರೆ. ಸತ್ತವರಿಗೆ ಯಾವ ಪರಿಹಾರ ಕೊಡಲಿಲ್ಲ. ಇವರು ಅಧಿಕಾರ ಬಿಟ್ಟು ತೊಲಗಲಿ. ಚುನಾವಣೆ ಬಂದರೆ ಎದುರಿಸೋಕೆ ನಾವು ರೆಡಿ ಎಂದು ಬಿಜೆಪಿಗೆ ಸವಾಲ್​ ಹಾಕಿದ್ದಾರೆ.

Next Story

RELATED STORIES