Top

ಇದೇನಾ ನಿಮ್ಮ ಪ್ರಧಾನಿಯವರ ಅಚ್ಚೇ ದಿನ್-ಸಿದ್ದರಾಮಯ್ಯ ವಾಗ್ದಾಳಿ

ಸೋಂಕಿತರಿಗೆ ಆಕ್ಸಿಜನ್ ಕೊಡಿ ಅಂತ ಪ್ರಧಾನಿಗೆ ಭಿಕ್ಷೆ ಬೇಡಬೇಕಾ..?

ಇದೇನಾ ನಿಮ್ಮ ಪ್ರಧಾನಿಯವರ ಅಚ್ಚೇ ದಿನ್-ಸಿದ್ದರಾಮಯ್ಯ ವಾಗ್ದಾಳಿ
X

ಬೆಂಗಳೂರು: ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಭಾಗ್ಯದ ಬಾಗಿಲು ತೆರೆಯುತ್ತೆ ಎಂದು ಜನರನ್ನ ಯಾಮಾರಿಸಿತು. ಈಗ ರಾಜ್ಯದಲ್ಲಿ ದೌರ್ಭಾಗ್ಯದ ಬಾಗಿಲು ತೆರೆದಿದೆ. ಸ್ಮಶಾನದಲ್ಲಿ ಹೆಣಗಳ ಸಾಲು ಬೆಳೆಯುತ್ತಿದೆ. ಇದೇನಾ ನಿಮ್ಮ ಪ್ರಧಾನಿಯವರ ಅಚ್ಚೇದಿನ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದ್ದಾರೆ.

ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿರುವ ಸಿದ್ದರಾಮಯ್ಯ, ಪಿಎಂ ಕೇರ್​ ಫಂಡ್​ಗೆ ಎಷ್ಟು ಹಣ ಸಂದಾಯವಾಗಿದೆ. ರಾಜ್ಯಕ್ಕೆ ಎಷ್ಟು ನೆರವು ಹರಿದು ಬಂದಿದೆ. ರಾಜ್ಯಕ್ಕೆ ವೆಂಟಿಲೇಟರ್ ಹಾಗೂ ಐಸಿಯು ಎಷ್ಟು ಸಿಕ್ಕಿದೆ. ಆಕ್ಸಿಜನ್ ಎಷ್ಟು ರಾಜ್ಯಕ್ಕೆ ಬಂದಿದೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ರಾಜ್ಯದ ಕೊರೊನಾ ರೋಗಿಗಳಿಗೆ ಬೆಡ್ ಕೊಡಿ,ಆಕ್ಸಿಜನ್ ಕೊಡಿ ಅಂತ ಪ್ರಧಾನಿಗೆ ಭಿಕ್ಷೆ ಬೇಡಬೇಕಾ..? ರಾಜ್ಯದ ಬಿಜೆಪಿ ಸಂಸದರು ಯಾವ ಬಿಲ ಸೇರಿದ್ದೀರಿ..? ಇಲ್ಲಿ ಹುಲಿಯಂತೆ ಕಿರುಚಾಡುತ್ತೀರ.. ?ಪ್ರಧಾನಿ ಮುಂದೆ ಇಲಿಗಳಾಗಿ ಬಿಲ ಸೇರುವುದು ಯಾಕೆ..? ಪ್ರಧಾನಿ ಕಂಡರೆ ನಿಮಗೆ ಭಯವೇ ಎಂದು ವ್ಯಂಗ್ಯವಾಡಿದ್ದಾರೆ.

Next Story

RELATED STORIES