Top

ಕಟ್ಟುಕತೆ ಕಟ್ಟಲು ಸಿದ್ದರಾಮಯ್ಯ ಎಕ್ಸ್ಪಾರ್ಟ್ ಅವರಿಗೆ ಜ್ಙಾನಪೀಠ ಪ್ರಶಸ್ತಿ ಕೊಡ್ಬೇಕು

ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲೇ ಅವರು ಕೆಲಸ ಮಾಡಿಲ್ಲ, ರಮೇಶ್ ಕುಮಾರ್ ಅವರೇ ಇದನ್ನ ಹೇಳಿದ್ದರು

ಕಟ್ಟುಕತೆ ಕಟ್ಟಲು ಸಿದ್ದರಾಮಯ್ಯ ಎಕ್ಸ್ಪಾರ್ಟ್  ಅವರಿಗೆ ಜ್ಙಾನಪೀಠ ಪ್ರಶಸ್ತಿ ಕೊಡ್ಬೇಕು
X

ಬೆಂಗಳೂರು: ಸಿದ್ದರಾಮಯ್ಯ ನಮ್ಮ ಮೇಲೆ ಆರೋಪ ಮಾಡಿದ್ದರು. ನನ್ನ ರಾಜೀನಾಮೆಗೆ ಆಗ್ರಹಿಸಿದ್ದರು. ಆದರೆ, ನಮ್ಮ ಇಲಾಖೆ ಸಾಧನೆ ಸಿದ್ದರಾಮಯ್ಯ ಗಮನಕ್ಕೆ ಬಂದಿಲ್ಲ ಎಂದು ಕೆ.ಎಸ್​ ಈಶ್ವರಪ್ಪ ಅವರು ಬುಧವಾರ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲೇ ಅವರು ಕೆಲಸ ಮಾಡಿಲ್ಲ, ರಮೇಶ್ ಕುಮಾರ್ ಅವರೇ ಇದನ್ನ ಹೇಳಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇನ್ನು ಕಟ್ಟು ಕತೆ ಕಟ್ಟಲು ಸಿದ್ದರಾಮಯ್ಯ ಎಕ್ಸ್​ಫರ್ಟ್. ಅವರಿಗೆ ಜ್ಙಾನಪೀಠ ಪ್ರಶಸ್ತಿ ಕೊಡಬೇಕು. ಪಕ್ಷದಲ್ಲಿ ಸಿಎಂ ಬದಲಾವಣೆಯಿಲ್ಲ, ಸಿದ್ದರಾಮಯ್ಯ ಕಟ್ಟುಕತೆ ಕಟ್ಟುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈಶ್ವರಪ್ಪ ಶಿಸ್ತು ಉಲ್ಲಂಘಿಸಿದ್ದಾರೆಂಬ ಸ್ವಪಕ್ಷೀಯರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅನುದಾನ ಹಂಚಿಕೆಯಲ್ಲಿ ಸಿಎಂ ನೇರವಾಗಿ ಕೈಹಾಕಲು ಬರಲ್ಲ, ಬ್ಯುಸಿನೆಸ್ ರೂಲ್ ಪ್ರಕಾರ ಸಿಎಂ ಅನುದಾನ ಕೊಡಬೇಕು. ಇಲಾಖೆಯಿಂದಲೇ ಅನುದಾನ ಹಂಚಿಕೆಯಾಗಬೇಕು. ಇದನ್ನ ಕ್ಲಾರಿಫೈ ಮಾಡಿಕೊಳ್ಳಲು ರಾಜಭವನಕ್ಕೆ ಹೋಗಿದ್ದೆ. ರಾಜ್ಯಪಾಲರಿಂದ ನಾನು ತಿಳಿದುಕೊಂಡು ಬಂದಿದ್ದೇನೆ. ಸಿಎಂ ವಿರುದ್ಧ ನಾನು ಅವರಿಗೆ ದೂರು ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸದ್ಯ ಸಿ.ಟಿ.ರವಿ ನಮ್ಮ ನಾಯಕರು ಅದಕ್ಕೆ ಅವರಿಗೆ ನಾನು ಪತ್ರ ಬರೆದಿದ್ದೆ. ಕಟೀಲ್, ರವಿ, ಅರುಣ್ ಸಿಂಗ್ ಎಲ್ಲರೂ ಕುಟುಂಬದವರೇ. ಅವರಿಗೆ ಕೊಟ್ಟ ದೂರಿನಲ್ಲೂ ನಾನು ಸಿಎಂ ವಿರುದ್ಧ ಹೇಳಿಲ್ಲ ಎಂದು ಸಿ.ಟಿ.ರವಿಗೆ ಪತ್ರ ಬರೆದ ಬಗ್ಗೆ ಈಶ್ವರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ.

ಇನ್ನು ಅವರರವರ ಭಾವಕ್ಕೆ ಏನು ಬೇಕಾದರೂ ತಿಳಿದುಕೊಳ್ಳಬಹುದು. ನಾನು ಎಲ್ಲೂ ಸ್ಫೋಟವಾಗಲ್ಲ. ನನಗೆ ಸಮಾಧಾನವಾಗದಿದ್ದರೆ ಸ್ಫೋಟಿಸುವವನೇ. ನಾನು ಪಕ್ಷಕ್ಕೆ ತೊಂದರೆ ಬಂದರೆ ಸುಮ್ಮನಿರಲ್ಲ. ಶನಿವಾರ ಅರುಣ್ ಸಿಂಗ್ ಅವರು ಬರ್ತಾರೆ. ಅವರು ಬಂದಾಗ ನಾವು ಚರ್ಚಿಸಿ ಬಗೆಹರಿಸಿಕೊಳ್ತೇವೆ ಎಂದು ಸಚಿವ ಕೆ.ಎಸ್​ ಈಶ್ವರಪ್ಪ ಅವರು ಮಾತನಾಡಿದ್ದಾರೆ.

Next Story

RELATED STORIES