Top

ಆರ್​ಆರ್​ ನಗರ ಉಪಚುನಾವಣೆ: ಕೋವಿಡ್​ 19 ಸೋಂಕಿತರಿಗೂ ಮತಹಾಕಲು ಅವಕಾಶ

ಚುನಾವಣೆ ದಿನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಮತದಾನಕ್ಕೆ ಅವಕಾಶ

ಆರ್​ಆರ್​ ನಗರ ಉಪಚುನಾವಣೆ: ಕೋವಿಡ್​ 19 ಸೋಂಕಿತರಿಗೂ ಮತಹಾಕಲು ಅವಕಾಶ
X

ಬೆಂಗಳೂರು: ಆರ್​ಆರ್​ ನಗರದಲ್ಲಿ ಇರೋ ಕೋವಿಡ್-19 ಸೋಂಕಿತರಿಗೆ ಮತಹಾಕಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್​ ಪ್ರಸಾದ್​ ಅವರು ಗುರುವಾರ ಹೇಳಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿನಗರ ಚುನಾವಣೆ ಹಿನ್ನೆಲೆ ಕೋವಿಡ್ ಸೋಂಕಿತರಿಗೆ ಚುನಾವಣೆಗೆ ಅವಕಾಶ ಕೊಡುವ ಕುರಿತಾಗಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ದಿನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಮತದಾನಕ್ಕೆ ಅವಕಾಶ ಎಂದರು.

ಇನ್ನು ಮತದಾನಕ್ಕೆ ತೆರಳುವವರಿಗಾಗಿ ಆ್ಯಂಬುಲೆನ್ಸ್​​ ಸೌಲಭ್ಯವಿದ್ದು, ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕಿದೆ. ಈ ಹಿನ್ನೆಲೆ ಸೋಂಕಿತರಾಗಿ ಹೋಮ್ ಐಸೋಲೇಷನ್​ನಲ್ಲಿರುವವರಿಗೂ ಮತದಾನ ಮಾಡಲು ಅವಕಾಶ ಕೊಡಲಾಗಿದೆ 80 ವರ್ಷ ಮೀರಿದ ಹಿರಿಯ ನಾಗರೀಕರು ಒಟ್ಟು 489 ಮಂದಿಗೆ ಬ್ಯಾಲೆಟ್​ ಪೇಪರ್​ನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸದ್ಯ 678 ಮತಗಟ್ಟೆಗೂ ಒಬ್ಬೊಬ್ಬ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರತಿ ಮತದಾರರಿಗೂ ಸ್ಯಾನಿಟೈಜ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ವೋಟರ್​ ಐಡೆಂಟಿಫಿಕೇಷನ್ ವೇಳೆ ಮಾಸ್ಕ್ ತೆರೆದು ಮುಖ ತೋರಿಸಬೇಕು. ಬಲಗೈಗೆ ಗ್ಲೌಸ್ ಕೊಡಲಾಗುತ್ತೆ. ಎಡಗೈನ ಮಧ್ಯದ ಬೆರಳಿಗೆ ಶಾಹಿ ಹಾಕಲಾಗುತ್ತೆ. ವೋಟ್​ ವೇಳೆ ಸಹಿ ಮಾಡಲು ಅವರೇ ಪೆನ್ ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಸೋಂಕಿತರಿಗೆ ಪ್ರತ್ಯೇಕ ಬೂತ್ ಇಲ್ಲ, ನಾರ್ಮಲ್​ ಬೂತ್​ನಲ್ಲಿ ಸೋಂಕಿತರಿಗೆ ಮತದಾನಕ್ಕೆ ಅವಕಾಶವಿದೆ. ಕೊನೆಯ ಗಂಟೆಯಲ್ಲಿ ಕೋವಿಡ್ ಸೋಂಕಿತರಿಗೆ ಮತದಾನ ಹಾಕಲು ಅವಕಾಶ ಮಾಡಿಕೊಡಲಾಗಿದೆ ಎಂದು ಮಂಜುನಾಥ್​ ಪ್ರಸಾದ್ ಅವರು ಹೇಳಿದ್ದಾರೆ.

ಆರ್​ಆರ್ ನಗರದಲ್ಲಿ 1,177 ಮಂದಿ ಸೋಂಕಿತರಿದ್ದಾರೆ ಹಾಗೂ ಎರಡನೇ ತಾರೀಖಿನೊಳಗೆ ಎಷ್ಟು ಪತ್ತೆಯಾಗ್ತಾರೋ ಎಲ್ಲರಿಗೂ ಮತದಾನಕ್ಕೆ ಅವಕಾಶ. ಒಟ್ಟು ಇದಕ್ಕಾಗೇ 90 ಆ್ಯಂಬುಲೆನ್ಸ್​ಗಳನ್ನು ನಿಯೋಜನೆ ಮಾಡಲಾಗಿದೆ. ಸೋಕಿತರ ಮನೆಗೆ ಮೂರು ಗಂಟೆಗೆ ಆ್ಯಂಬುಲೆನ್ಸ್​ ಕಳುಹಿಸಲಾಗುತ್ತೆ. ಎಲ್ಲಾ ಚುನಾವಣಾ ಸಿಬ್ಬಂದಿಗಳಿಗೂ ಪಿಪಿಇ ಕಿಟ್ ಮಾಸ್ಕ್ ಗ್ಲೌಸ್, ಫೇಸ್ ಶೀಲ್ಡ್ ನೀಡಲಾಗುತ್ತೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್​ ಪ್ರಸಾದ್​ ಅವರು ಹೇಳಿದ್ದಾರೆ.

Next Story

RELATED STORIES