Top

'ಸರ್ಕಾರದ ಕೈಯಲ್ಲಿ ಆಗದಿದ್ದರೆ ರಾಜೀನಾಮೆ ಕೊಡಲಿ' - ಮಾಜಿ ಸಿಎಂ ಸಿದ್ದರಾಮಯ್ಯ

ನವೀನನ್ನ ಅರೆಸ್ಟ್ ಮಾಡಿದ್ದರೆ ಗಲಭೆ ಆಗುತ್ತಿತ್ತಾ(?)

ಸರ್ಕಾರದ ಕೈಯಲ್ಲಿ ಆಗದಿದ್ದರೆ ರಾಜೀನಾಮೆ ಕೊಡಲಿ - ಮಾಜಿ ಸಿಎಂ ಸಿದ್ದರಾಮಯ್ಯ
X

ಬೆಂಗಳೂರು: ನಾನು ಅಧ್ಯಕ್ಷರ ಜೊತೆ ಮಾತನಡುತ್ತೇನೆ, ಯಾವುದೇ ಪ್ರೂಪ್ ಇಲ್ಲದೇ ನಾನು ಮಾತನಾಡಲ್ಲ, ಡಿ.ಕೆ.ಶಿವಕುಮಾರ್ ಏನೂ ‌ಹೇಳಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ ಮನೆ ಮೇಲೆ ದಾಳಿ ಬಗ್ಗೆ ಮಾತನಾಡಿದ ಅವರು, ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂದಿದ್ದಾರೆ. ಶಿಸ್ತುಕ್ರಮ ತೆಗೆದುಕೊಳ್ಳೋದು ಪಕ್ಷ ಎಂದಿದ್ದಾರೆ. ಅದಕ್ಕೆ ನಾನು ಅಧ್ಯಕ್ಷರ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ.

ಸದ್ಯ ಬಿಜೆಪಿಯವರ ತಪ್ಪಿನಿಂದಲೇ ಇದು ಆಗಿರೋದು. ಅಸೆಂಬ್ಲಿಯಲ್ಲೂ ಇದನ್ನೇ ನಾನು ಹೇಳಿದ್ದೆ. ಈಗಲೂ ನಾನು ಹೇಳಿದ್ದಕ್ಕೆ ಬದ್ಧ. ಪೊಲೀಸರ ಯಡವಟ್ಟಿನಿಂದಲೇ ಇದು ಆಗಿದ್ದು, ನವೀನನ್ನ ಅರೆಸ್ಟ್ ಮಾಡಿದ್ದರೆ ಗಲಭೆ ಆಗುತ್ತಿತ್ತಾ(?) ಅವನು ಮನೆಯಲ್ಲೇ ಇದ್ರೂ ಯಾಕೆ ಮಾಡಲಿಲ್ಲ, ಇದು ಪೊಲೀಸರ ವಿಫಲತೆಯಲ್ವೇ(?) ಚಾರ್ಜ್ ಶೀಟ್​ನಲ್ಲಿ ಕಾಂಗ್ರೆಸ್​ನವರ ಮೇಲೆ ಹೇಳಿರಬಹುದು. ಅವತ್ತು ಬೊಮ್ಮಾಯಿ, ಅಶೋಕ್ ಏನು ಹೇಳಿದರು. ಎಸ್​ಡಿಪಿಐನವರು ಹೇಳಿದ್ದು ಅಂತ ಹೇಳಿದ್ರಲ್ಲಾ(?) ಎಂದು ಪ್ರಶ್ನೆ ಮಾಡಿದರು.

ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿರಬಹುದು, ಅವರು ಹೇಳಿದ್ದು ಅಡ್ಮಿಟ್ ಮಾಡಿಕೊಳ್ತಾರೆ. ಆದರೆ, ಸಂಪೂರ್ಣ ತನಿಖೆ ನಡೆಯಬೇಕಲ್ವಾ(?) ಚಾರ್ಜ್​ಶೀಟ್ ನಾನಿನ್ನೂ ನೋಡಿಲ್ಲ, ಚಾರ್ಜ್​ಶೀಟ್ ನೋಡಿದ ಮೇಲೆ ಮಾತನಾಡುತ್ತೇನೆ. ನಾನು ಅಖಂಡ ಜೊತೆ ಮಾತನಾಡುತ್ತೇನೆ. ಹಿಂದೆ ಅಖಂಡ ಶ್ರೀನಿವಾಸ್ ಉಚ್ಛಾಟನೆ ಬಗ್ಗೆ ಹೇಳಿಲ್ಲ, ನನ್ನನ್ನ ಭೇಟಿ ಮಾಡಿದಾಗ ಎಂದೂ ಹೇಳಿಲ್ಲ, ಈ ಗಲಭೆ ಬಗ್ಗೆ 80 ಪ್ರಕರಣ ಹಾಕಿದ್ದಾರೆ. ಈಗ ಅವರು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಚಾರ್ಜ್​ಶೀಟೇ ಅಂತಿಮವಲ್ಲ, ಶ್ರೀನಿವಾಸ್ ಮೂರ್ತಿ ಜೊತೆ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.

ಇದೇ ವೇಳೆ ಇಂದಿರಾ ಕ್ಯಾಂಟೀನ್ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಕಾರ್ಮಿಕರು, ಬಡವರ ಕಾಳಜಿಯಿಂದ ತೆಗೆದಿದ್ದು. ಬಡವರು, ಕಾರ್ಮಿಕರ ಬಗ್ಗೆ ಇವರಿಗೆ ಕಾಳಜಿ ಇದ್ಯಾ(?) ಇದ್ದರೆ ಇಂದಿರಾ ಕ್ಯಾಂಟೀನ್ ಉಳಿಸಬೇಕು. 18 ಕೋಟಿಗಾಗಿ ಕ್ಯಾಂಟೀನ್ ಮುಚ್ಚುತ್ತಾರಾ(?) ಇವರ ಕೈಯಲ್ಲಿ ಆಗದಿದ್ದರೆ ರಾಜೀನಾಮೆ ಕೊಡಲಿ. ಸರ್ಕಾರ ಇರೋದೇ ಜನರ ಕಷ್ಟಕ್ಕೆ ಸ್ಪಂದಿಸೋಕೆ. ಸ್ಪಂದಿಸೋಕೆ ಆಗದಿದ್ದರೆ ಯಾಕಿರಬೇಕು ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

Next Story

RELATED STORIES