ಸಚಿವ ಸಂಪುಟ ವಿಸ್ತರಣೆ: ಏಳು ಮಂದಿ ಹೆಸರು ಬಹಿರಂಗಪಡಿಸಿದ ಸಿಎಂ ಬಿಎಸ್ವೈ
ಮುನಿರತ್ನಗೆ ಸಚಿವ ಸ್ಥಾನ ಮಿಸ್ ಆಗಿದೆ.

X
Admin 213 Jan 2021 6:11 AM GMT
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಚಿವ ಸಂಪುಟಕ್ಕೆ ಏಳು ಜನರು ಹೆಸರು ಬಹಿರಂಗವಾಗಿ ಘೋಷಣೆಯಾಗಿದ್ದು, ಆ ಪಟ್ಟಿಯನ್ನು ರಾಜ್ಯಪಾಲರಿಗೆ ಕಳಿಸಿಕೊಡಲಾಗಿದೆ.
ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಗೊಳ್ಳುತ್ತಿರುವ ಏಳು ಮಂದಿ ಹೆಸರನ್ನು ಸಿಎಂ ಬಿಎಸ್ವೈ ಅವರು ಘೋಷಿಸಿದ್ದು, ಎಂಟಿಬಿ ನಾಗರಾಜ್, ಆರ್.ಶಂಕರ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅರವಿಂದ್ ಲಿಂಬಾವಳಿ, ಸಿ.ಪಿ ಯೋಗೇಶ್ವರ್ ಹಾಗೂ ಅಂಗಾರ ಅವರಿಗೆ ಮಂತ್ರಿ ಸ್ಥಾನ ಖಚಿತವಾಗಿದೆ.
ಇನ್ನು ಉಳಿದ ಒಂದು ಸ್ಥಾನ ಖಾಲಿ ಇಡ್ತೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಸದ್ಯ ಮುನಿರತ್ನಗೆ ಸಚಿವ ಸ್ಥಾನ ಮಿಸ್ ಆಗಿದ್ದು, ಆರ್ಆರ್ ನಗರ ಚುನಾವಣೆ ಪ್ರಚಾರದ ವೇಳೆ ಮಂತ್ರಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದರು.
Next Story