Top

ಮುನಿರತ್ನ ನನ್ನ ವೈರಿಯಲ್ಲ, ಭಾರತೀಯ ಜನತಾ ಪಕ್ಷ ನಮ್ಮ ವೈರಿ - ಸಂಸದ ಡಿ.ಕೆ ಸುರೇಶ್​

ಸಮರ್ಥವಾಗಿ ಕೆಲಸ ಮಾಡುವವರನ್ನ ಕಣಕ್ಕಿಳಿಸುತ್ತೇವೆ. ಜೆಡಿಎಸ್​ನವರು ನನ್ನ ಜೊತೆ ಚೆನ್ನಾಗಿದ್ದಾರೆ.

ಮುನಿರತ್ನ ನನ್ನ ವೈರಿಯಲ್ಲ, ಭಾರತೀಯ ಜನತಾ ಪಕ್ಷ ನಮ್ಮ ವೈರಿ - ಸಂಸದ ಡಿ.ಕೆ ಸುರೇಶ್​
X

ಬೆಂಗಳೂರು: ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ, ಪಕ್ಷದ ನಾಯಕರು ಸಭೆ ನಡೆಸುತ್ತಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಅವರು ಬುಧವಾರ ಹೇಳಿದರು.

ಬೆಂಗಳೂರಿನಲ್ಲಿಂದು ಆರ್​ಆರ್​ ನಗರ ಉಪಚುನಾವಣೆ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಚರ್ಚಿಸಿ ಪಕ್ಷದ ವರಿಷ್ಠರಿಗೆ ಅದನ್ನ ಕಲಿಸುತ್ತೇವೆ. ಸಮರ್ಥವಾಗಿ ಕೆಲಸ ಮಾಡುವವರನ್ನ ಕಣಕ್ಕಿಳಿಸುತ್ತೇವೆ. ಜೆಡಿಎಸ್​ನವರು ನನ್ನ ಜೊತೆ ಚೆನ್ನಾಗಿದ್ದಾರೆ ಎಂದು ಅವರು ತಿಳಿಸಿದರು.

ಮಾಗಡಿ ಬಾಲಕೃಷ್ಣ ಸ್ಪರ್ಧಿಸುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಲವರ ಹೆಸರು ಚರ್ಚೆಯಾಗುತ್ತಿದೆ. ಹೇಳೋದಕ್ಕೆ ಆಗಲ್ಲ, ಯಾರಾದರೂ ಆಗಬಹುದು ಎಂದರು.

ಸದ್ಯ ಯುದ್ಧ ಪ್ರಾರಂಭವಾಗಿದೆ. ಸೈನಿಕರನ್ನ ಕರೆದುಕೊಂಡು ಹೋಗಿದ್ದಾರೆ. ಮತದಾರರು ಎಲ್ಲಿಯೂ ಹೋಗಿಲ್ಲ. ಮತದಾರರು ಪಕ್ಷದ ಪರವಾಗಿಯೇ ಇದ್ದಾರೆ. ಉಂಡು ಹೋದ ಕೊಂಡು ಹೋದ ಅನ್ನುವಂತಾಗಿದೆ. ಮುನಿರತ್ನ ನನ್ನ ವೈರಿಯಲ್ಲ. ಭಾರತೀಯ ಜನತಾ ಪಕ್ಷ ನಮ್ಮ ವೈರಿ ಎಂದಿದ್ದಾರೆ.

ಬೆಂಗಳೂರು ಉಗ್ರರ ಹಬ್ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿ. ಇಲ್ಲಿ ಎಲ್ಲರೂ ಇದ್ದಾರೆ, ಅವಕಾಶವಿದೆ. ಉಗ್ರರ ಹಬ್ ಅನ್ನುವ ಮಾತನ್ನ ವಾಪಸ್ ಪಡೆಯಬೇಕು. ಮಾತಿನಿಂದಲೇ ಪಬ್ಲಿಸಿಟಿಗಾಗಿ ಮಾತನಾಡೋದು ಸರಿಯಲ್ಲ. ಇಲ್ಲವಾದರೆ ಜನರೇ ಬುದ್ಧಿ ಕಲಿಸ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಡ್ರಗ್ಸ್ ವಿಷಯದ ಕುರಿತು ಮಾತನಾಡಿದ ಅವರು, ಇದನ್ನ ಚುನಾವಣಾ ಗಿಮಿಕ್​ಗೆ ಬಳಸಿಕೊಳ್ಳುವ ಕೆಲಸ ನಡೆಯುತ್ತಿದೆ. ಇಲ್ಲಿಯವರೆಗೆ ಸಿನಿಮಾರಂಗ ತೋರಿಸುತ್ತಿದರು. ಈಗ ರಾಜಕೀಯಕ್ಕೂ ಬಳಸಿಕೊಳ್ಳುತ್ತಿದ್ದಾರೆ. ಪೊಲೀಸರು ಇದನ್ನು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಉಪಚುನಾವಣೆಗೆ ಇದನ್ನ ಬಳಸಿಕೊಳ್ಳುದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ಅವರು ಹೇಳಿದರು.

Next Story

RELATED STORIES