Top

ಜಿಲ್ಲಾಧಿಕಾರಿ ನಿನ್ನೆಯೂ ನನಗೆ ಆಕ್ಸಿಜನ್​ ಕೊರತೆ ಬಗ್ಗೆ ಹೇಳಿಲ್ಲ-ಸಂಸದ ಶ್ರೀನಿವಾಸ್ ಪ್ರಸಾದ್‌

DC ಮೈಸೂರು ಸಂಸದರ ಜೊತೆ ಮಾತನಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ

ಜಿಲ್ಲಾಧಿಕಾರಿ ನಿನ್ನೆಯೂ ನನಗೆ ಆಕ್ಸಿಜನ್​ ಕೊರತೆ ಬಗ್ಗೆ ಹೇಳಿಲ್ಲ-ಸಂಸದ ಶ್ರೀನಿವಾಸ್ ಪ್ರಸಾದ್‌
X

ಚಾಮರಾಜನಗರ: ಜಿಲ್ಲಾಧಿಕಾರಿ ಜೊತೆ ನಿನ್ನೆ ರಾತ್ರಿ ಮಾತನಾಡಿದ್ದೆ, ಅವರು ನಿನ್ನೆ‌ ಆಕ್ಸಿಜನ್ ಕೊರತೆ ಬಗ್ಗೆ ನನಗೆ ಮಾಹಿತಿ ನೀಡಿಲ್ಲ. ಜಿಲ್ಲೆಯಲ್ಲಿ ಯಾವುದೇ ತೊಂದರೆ ಇಲ್ಲ ಅಂತಾನೇ ಹೇಳಿದ್ರು ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್‌ ಹೇಳಿದ್ದಾರೆ.

24 ಕೋವಿಡ್​ ಸೋಂಕಿತರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಮೈಸೂರು ಸಂಸದರ ಜೊತೆ ಮಾತನಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಕೋವಿಡ್ ಕಾರಣದಿಂದ ಚಾಮರಾಜನಗರ ಹೋಗುತ್ತಿಲ್ಲ. ಆದರೆ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ ಎಂದರು.

ಇನ್ನು ಜಿಲ್ಲೆಗೆ ಮೈಸೂರಿನಿಂದ ಆಕ್ಸಿಜನ್ ಸಪ್ಲೈ ಆಗಿಲ್ಲ ಅಂತ ಅಷ್ಟೇ ಸದ್ಯಕ್ಕೆ ಗೊತ್ತಾಗಿದೆ. ಮೊದಲನೇ ಅಲೆಯ ಸಂಧರ್ಭದಲ್ಲಿ ಕೇಂದ್ರ ಸರ್ಕಾರವೇ ಚಾಮರಾಜನಗರ ಕೋವಿಡ್ ನಿರ್ವಹಣೆ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿತ್ತು. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರೇ ಜಿಲ್ಲಾಧಿಕಾರಿ ಜೊತೆ ಪೋನ್​​ನಲ್ಲಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸದ್ಯ ಈಗ ನಡೆದಿರು ಘಟನೆ ದುರದೃಷ್ಟಕರ. ಸಾವನಪ್ಪಿದ್ದವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಹೆಚ್ಚಿನ ಪರಿಹಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದರು.

Next Story

RELATED STORIES