Top

ವಿಜಯಾನಂದ ಕಾಶಪ್ಪನವರ್​ ವಿರುದ್ಧ ಸಚಿವ ಮುರುಗೇಶ್ ನಿರಾಣಿ ವಾಗ್ದಾಳಿ

ಹುನಗುಂದದಲ್ಲಿ ಎಫ್​ಐಆರ್​ ಆಗಿದೆ. ಹಿಂದೆ ಬೆಂಗಳೂರಿನಲ್ಲೂ ದೂರು ದಾಖಲಾಗಿತ್ತು. ಎಫ್​ಐಆರ್​ ಇರೋರು ಅಧ್ಯಕ್ಷರಾಗಿದ್ದೀರ

ವಿಜಯಾನಂದ ಕಾಶಪ್ಪನವರ್​ ವಿರುದ್ಧ ಸಚಿವ ಮುರುಗೇಶ್ ನಿರಾಣಿ ವಾಗ್ದಾಳಿ
X

ಬೆಂಗಳೂರು: ಬಸನಗೌಡ ಪಾಟೀಲ್​ ಯತ್ನಾಳ್ ಹಿರಿಯರ ಮೇಲೆ ವಾಗ್ದಾಳಿಯನ್ನು ಕಳೆದ 25 ವರ್ಷಗಳಿಂದ ಮಾಡುತ್ತಲೇ ಬಂದಿದ್ದಾರೆ. ಶೆಟ್ಟರ್​, ಯಡಿಯೂರಪ್ಪ, ಶೋಭಾ, ಸೋಮಣ್ಣ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ. ನನ್ನ ಮೇಲೂ ವಾಗ್ದಾಳಿ ಮಾಡುತ್ತಿದ್ದಾರೆ ಎಂದು ಖನಿಜ ಸಂಪನ್ಮೂಲ ಸಚಿವ ಮುರುಗೇಶ್ ನಿರಾಣಿ ಅವರು ಸೋಮವಾರ ಹೇಳಿದರು.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯತ್ನಾಳ್ ಕಾಂಗ್ರೆಸ್ ಬಿ ಟೀಂ ಆಗಿ ಕೆಲಸ ಮಾಡುತ್ತಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ ಅಂದಿದ್ದಾರೆ. ಶಾಸಕರಾಗಿದ್ದು ನಮ್ಮ ಕ್ಷೇತ್ರದ ಜನರಿಂದ ಸಚಿವ ಸ್ಥಾನ ಕೊಟ್ಟಿದ್ದು ನಮ್ಮ ಹೈಕಮಾಂಡ್, ರಾಜೀನಾಮೆ ಅವರು ಕೇಳಬೇಕು. ಯತ್ನಾಳ್ ಕೇಳೋದಕ್ಕೆ ಅರ್ಹತೆ ಇಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್​ಗೆ ನಿರಾಣಿ ಟಾಂಗ್ ಕೊಟ್ಟಿದ್ದಾರೆ.

ಪಂಚಮಸಾಲಿಯಷ್ಟೇ 2ಎಗೆ ಸೇರಿಸುವುದಲ್ಲ, ಸಮಸ್ತ ವೀರಶೈವ ಲಿಂಗಾಯತರನ್ನ ಸೇರಿಸಬೇಕಿದೆ. ನಮ್ಮದು ರೈತಾಪಿ ಸಮುದಾಯ. ರಾಜಕೀಯ ಮೀಸಲಾತಿಯನ್ನ ಕೇಳುತ್ತಿಲ್ಲ, ಕೇವಲ ಶೈಕ್ಷಣಿಕ, ಔದ್ಯೋಗಿಕ‌ ಮೀಸಲಾತಿ ಕೇಳುತ್ತಿದ್ದೇವೆ. ಶ್ರೀಗಳು ಯತ್ನಾಳ್, ಕಾಶಪ್ಪ ಮಾತಿನಂತೆ ನಡೆಯಬಾರದು. ನೀವು 80 ಲಕ್ಷ ಸಮುದಾಯದ ಶ್ರೀಗಳು ಎಂದಿದ್ದಾರೆ.

ಹಿಂದೆ ನಿಮ್ಮ ತಂದೆಯೇ ಶಾಸಕರಾಗಿದ್ದರು. ನಿಮ್ಮ ತಾಯಿ, ನೀನು ಶಾಸಕನಾಗಿದ್ದೆ. ಅಂದು ನೀನ್ಯಾಕೆ ಇದರ ಬಗ್ಗೆ ಒತ್ತಡ ತರಲಿಲ್ಲ, ಬಾರುಕೋಲ್ ಹಿಂಡ್ಕೊಂಡು ಹೋಗಲಿಲ್ಲ ಎಂದು ನಿರಾಣಿ ಅವರು ವಿಜಯಾನಂದ ಕಾಶಪ್ಪನವರ್​ಗೆ ತಿರುಗೇಟು ನೀಡಿದ್ದಾರೆ.

ಬೃಹತ್ ಸಮಾವೇಶಕ್ಕೆ ಹಣ ಎಲ್ಲಿಂದ ಬಂತು ಇದರ ಬಗ್ಗೆ ಗೊತ್ತಾಗಬೇಕು. ನೀವು ರಾಷ್ಟ್ರೀಯ ಅಧ್ಯಕ್ಷ ಅಂತ ಘೋಷಣೆ ಮಾಡಿಕೊಂಡ್ರಿ, ಪಂಚಮಸಾಲಿ ಸಮಾಜದ ಅಧ್ಯಕ್ಷರಾದ್ರಿ, ನಾವು 15 ಮಂದಿ ಶಾಸಕರಿದ್ದೇವೆ. ನಮ್ಮನ್ನ ಎಲ್ಲದರೂ ಕೇಳಿದ್ದೀರ(?) ಮೊನ್ನೆ ನಿಮ್ಮ ಮೇಲೆ ಎಫ್​ಐಆರ್​ ಆಗಿದೆ. ಹುನಗುಂದದಲ್ಲಿ ಎಫ್​ಐಆರ್​ ಆಗಿದೆ. ಹಿಂದೆ ಬೆಂಗಳೂರಿನಲ್ಲೂ ದೂರು ದಾಖಲಾಗಿತ್ತು. ಎಫ್​ಐಆರ್​ ಇರೋರು ಅಧ್ಯಕ್ಷರಾಗಿದ್ದೀರ ಎಂದು ಕಾಶಪ್ಪನವರ್​ ವಿರುದ್ಧ ಮುರುಗೇಶ್ ನಿರಾಣಿ ವಾಗ್ದಾಳಿ ನಡೆಸಿದ್ದಾರೆ.

Next Story

RELATED STORIES