Top

ಮಾಜಿ ಸಚಿವ ವಿನಯ್​ ಕುಲಕರ್ಣಿ ಬಂಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ

ಆ ಭಾಗದ ಬಿಜೆಪಿ ನಾಯಕರು ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಪ್ರಭಾವಿ ಎಂದು ಮಟ್ಟ ಹಾಕೋಕೆ ಹೊರಟಿದ್ದಾರೆ

ಮಾಜಿ ಸಚಿವ ವಿನಯ್​ ಕುಲಕರ್ಣಿ ಬಂಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ
X

ಬೆಂಗಳೂರು: ನಾನು ಇದನ್ನ ಗಮನಿಸಿದ್ದೇನೆ ಹಿಂದೆ ವಿನಯ್ ಕುಲಕರ್ಣಿ ಬಳಿ ಎಲ್ಲವನ್ನೂ ವಿಚಾರಿಸಿದ್ದೇನೆ ಈಗಾಗಲೇ ಅವರ ಕೇಸ್ ತನಿಖೆ ಮಾಡಲಾಗಿದೆ. ಪೊಲೀಸರು ರಿಪೋರ್ಟ್ ಮಾಡಿದ್ದಾರೆ. ಆ ಭಾಗದ ಬಿಜೆಪಿ ನಾಯಕರು ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಪ್ರಭಾವಿ ಎಂದು ಮಟ್ಟ ಹಾಕೋಕೆ ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ವಿನಯ್​ ಕುಲಕರ್ಣಿ ಸಿಬಿಐ ವಶಕ್ಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸದಾಶಿವನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸಿಬಿಐನವರು ಅವರ ಜೊತೆಗಿದ್ದವರನ್ನ ವಿಚಾರಾಸಿದ್ದಾರೆ. ನನ್ನ ಮೇಲೆ ಯಡಿಯೂಪ್ಪ ಕೇಸ್ ಹಾಕಿದ್ದಾರೆ. ಸಿಬಿಐನವರು ಕಾನೂನು ಬದ್ಧವಾಗಿಯೇ ಹೋಗುತ್ತಿದೆ. ಕಾನೂನು ಬಿಟ್ಟು ಅವರು ಏನನ್ನೂ ಮಾಡಲ್ಲ. ಸಿಬಿಐನವರು ರಾಜಕೀಯಕ್ಕೆ ತಲೆಬಾಗಬಾರದು. ಜಾರ್ಜ್ ಅವರಿಗೆ ಎಷ್ಟು ಅರಾಸ್ಮೆಂಟ್ ಆಯ್ತು. ಅವರಿಗೆ ಎಷ್ಟು ಕಿರುಕುಳ ಕೊಟ್ಟಿದ್ರು ಎಲ್ಲ ಗೊತ್ತಿದೆ ಎಂದರು.

ಇನ್ನು ರಾಜಕಾರಣದಲ್ಲಿ ಚಕ್ರ ತಿರುಗುರ್ತಿರುತ್ತದೆ. ಸಿಬಿಐನವರು ರಾಜಕೀಯ ವೆಪನ್ ಆಗಬಾರದು. ಕೆಲವು ಬಿಜೆಪಿಯವರು ಖುಷಿ ಪಡುತ್ತಿರಬಹುದು. ದೇಶದ ಕಾನೂನಿ ಬಗ್ಗೆ ನಮಗೆ ನಂಬಿಕೆ ಇದೆ. ನಮ್ಮವರು ಯಾರೂ ತಪ್ಪು ಮಾಡಿಲ್ಲ. ನಮ ಲೀಡರ್ಸ್ ಮುಗಿಸೋಕೆ ಇದನ್ನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಹೆಚ್ಚು ಮಾತನಾಡಲ್ಲ. ಒಬ್ಬ ಮಿನಿಸ್ಟರ್ ವಿನಯ್ ಕರೆದು ಅವರನ್ನ ಬಿಜೆಪಿಗೆ ಬನ್ನಿ ಎಂದಿದ್ದರು. ಚಾಕ್​ಲೆಟ್ ಕೊಟ್ಟು ಕರೆದಿದ್ದರು. ಪ್ರೈ ಮಿನಿಸ್ಟರ್ ಮಾತನಾಡಿಲ್ವಾ(?) ಪ್ರಧಾನಿಯವರೂ ಮಾತನಾಡಿಲ್ವಾ(?) ಬಿಜೆಪಿ ನಾಯಕರೇ ಇದರ ಬಗ್ಗೆ ಮಾತನಾಡಲಿ ಎಂದು ಅವರು ಪ್ರಶ್ನೆ ಮಾಡಿದರು.

Next Story

RELATED STORIES