Top

ಭಾನುವಾರ ಬಿಜೆಪಿ ಡಿನ್ನರ್​ ಪಾರ್ಟಿ: ಪಕ್ಷದ ನಾಯಕರಿಗೆ BSY ಆಮಂತ್ರಣ

ಬಿಜೆಪಿಯ ಎಲ್ಲಾ ಶಾಸಕರು, ಎಂಎಲ್​ಸಿ ಹಾಗೂ ಸಂಸದರಿಗೆ ಔತಣ ಕೂಟ ಆಯೋಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಭಾನುವಾರ ಬಿಜೆಪಿ ಡಿನ್ನರ್​ ಪಾರ್ಟಿ: ಪಕ್ಷದ ನಾಯಕರಿಗೆ BSY ಆಮಂತ್ರಣ
X

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ಎಲ್ಲಾ ನಾಯಕರಿಗೂ ಔತಣಕೂಟ ಆಯೋಸಿದ್ದಾರೆ.

ಇದೇ ಭಾನುವಾರ ಸಂಜೆ ೭ಗಂಟೆಗೆ ನಗರದ ಶಾಂಘ್ರಿಲಾ ಹೊಟೇಲ್​​ನಲ್ಲಿ ನಡೆಯುವ ಡಿನ್ನರ್​ ಪಾರ್ಟಿಗೆ ಬಿಜೆಪಿಯ ಎಲ್ಲಾ ಶಾಸಕರು, ಎಂಎಲ್​ಸಿ ಹಾಗೂ ಸಂಸದರಿಗೆ ಆಹ್ವಾನ ನೀಡಲಾಗಿದೆ.ತಪ್ಪದೇ ಭಾಗವಹಿಸುವಂತೆ ಆಮಂತ್ರಣ ನೀಡಲಾಗಿದ್ದು, ಈವರೆಗೂ ತಮ್ಮನ್ನು ಬೆಂಬಲಿಸಿದ್ದಾಕ್ಕಾಗಿ ಸಿಎಂ ಬಿಎಸ್​ವೈ ಎಲ್ಲರಿಗೂ ಧನ್ಯವಾದ ತಿಳಿಸಲಿದ್ದಾರೆ ಎನ್ನಲಾಗಿದೆ.

ಇನ್ನು ಸೋಮವಾರ ಸರ್ಕಾರಕ್ಕೆ ಎರಡು ವರ್ಷ ಪೂರ್ಣ ಹಿನ್ನೆಲೆಯಲ್ಲಿ ಬ್ಯಾಂಕ್ವೆಟ್ ಹಾಲ್​ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದೇ ವೇಳೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡುವ ಸಾಧ್ಯತೆಯಿದೆ.

Next Story

RELATED STORIES