Top

ಮತದಾರನ ಆಶೀರ್ವಾದದ ಎದುರು ಯಾರು ಇಲ್ಲ ಎಂಬುದು ಸ್ಪಷ್ಟ - ನಳಿನ್​ ಕುಮಾರ್​ ಕಟೀಲ್​

ಜನರ ಎದುರು ಯಾವ ಟ್ರಬಲ್ ಶೂಟರ್, ಬಂಡೆಯೂ ಇಲ್ಲ. ಯಾರು ಬಂಡೆ, ಯಾರು ಟ್ರಬಲ್ ಶೂಟರ್ ಎಂದು ಇವತ್ತು ಗೊತ್ತಾಗಿದೆ.

ಮತದಾರನ ಆಶೀರ್ವಾದದ ಎದುರು ಯಾರು ಇಲ್ಲ ಎಂಬುದು ಸ್ಪಷ್ಟ - ನಳಿನ್​ ಕುಮಾರ್​ ಕಟೀಲ್​
X

ದಕ್ಷಿಣಕನ್ನಡ: ಕಾಂಗ್ರೆಸ್​ನ ಭದ್ರಕೋಟೆ ಶಿರಾದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ, ಭದ್ರಕೋಟೆಯನ್ನು ಒಡೆಯುವ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ಅವರು ಮಂಗಳವಾರ ಹೇಳಿದ್ದಾರೆ.

ಉಪಚುನಾವಣೆ ಬಿಜೆಪಿ ಗೆಲುವು ಹಿನ್ನೆಲೆ ಮಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲರ ಒಮ್ಮತದ ಕಾರ್ಯದಿಂದ ಎರಡು ಕ್ಷೇತ್ರದಲ್ಲಿ ಗೆಲುವಾಗಿದೆ. ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯವನ್ನು ಜನ ಒಪ್ಪಿದ್ದಾರೆ. ಕಾಂಗ್ರೆಸ್​ಅನ್ನು ತಿರಸ್ಕಾರ ಮಾಡಿದ್ದಾರೆ ಎಂಬುದಕ್ಕೆ ಉತ್ತರ ಇದು ಎಂದರು.

ಇನ್ನು ಕಾಂಗ್ರೆಸ್​ ಎರಡು ಟ್ರಂಪ್ ಕಾರ್ಡ್ ಬಳಕೆ ಮಾಡಿದರು. ಜಾತಿ ರಾಜಕಾರಣ ಎತ್ತಿಕಟ್ಟುವ ಕೆಲಸ ಮಾಡಿದರು. ಗೂಂಡಾಗಿರಿ ರಾಜಕಾರಣ ಪ್ರಯೋಗ ಮಾಡಿದರು. ಸೋಲುತ್ತೇವೆ ಎಂದಾಗ ಕಾಂಗ್ರೆಸ್ ಇಂತಹ ಪ್ರಯೋಗ ಮಾಡಿತು. ಆದರೆ, ಅಭಿವೃದ್ಧಿಯ ಮುಂದೆ ಯಾವುದೇ ಜಾತಿ ಇಲ್ಲ ಎಂದು ಗೊತ್ತಾಗಿದೆ. ಚುನಾವಣೆ ರಣಾಂಗಣದಲ್ಲಿ ಕಾಂಗ್ರೆಸ್ ಹತ್ತಾರು ಟೀಕೆ ಮಾಡಿತು. ಮುಖ್ಯಮಂತ್ರಿಗಳ ಬಗ್ಗೆ ಅಗೌರವವಾಗಿ ನಡೆದುಕೊಂಡರು. ದುರಂಹಕಾರದಿಂದ ನಾನೇ ಬಂಡೆ ಎಂಬ ಶಬ್ದ ಬಳಸಿದರು. ಅವರ ನಾಮಗಳನ್ನು ಅವರೇ ಇಟ್ಟುಕೊಂಡರು. ಇವತ್ತು ಹುಲಿಯೂ ಇಲ್ಲ, ಬಂಡೆಯು ಇಲ್ಲ ಎಂಬಂತಾಯಿತು. ಮತದಾರನ ಆಶೀರ್ವಾದದ ಎದುರು ಯಾರು ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್​ ನೀಡಿದ್ದಾರೆ.

ಜನತಾ ಜನಾರ್ಧನನ ಎದುರು ಅಹಂಕಾರ ನಡೆಯೋದಿಲ್ಲ. ಕಾಂಗ್ರೆಸ್ ಅಧ್ಯಕ್ಷರು ನಾವೇ ದೊಡ್ಡ ಲೀಡರ್ ಎಂದು ಪ್ರಚಾರ ಮಾಡಿದರು. ಬಂಡೆ, ಕಲ್ಲು, ಟ್ರಬಲ್ ಶೂಟರ್ ಎಂದು ತೋರಿಸುತ್ತಿದ್ದರು. ಜನರ ಎದುರು ಯಾವ ಟ್ರಬಲ್ ಶೂಟರ್, ಬಂಡೆಯೂ ಇಲ್ಲ. ಯಾರು ಬಂಡೆ, ಯಾರು ಟ್ರಬಲ್ ಶೂಟರ್ ಎಂದು ಇವತ್ತು ಗೊತ್ತಾಗಿದೆ. ಶಿರಾ, ಆರ್.ಆರ್ ನಗರದ ಜನ ಇದನ್ನು ತೋರಿಸಿದ್ದಾರೆ ಎಂದಿದ್ದಾರೆ.

ಮುಂದಿನ ಎರಡು ವಿಧಾನಸಭೆ, ಒಂದು ಲೋಕಸಭೆಯ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತೆ. ದೇಶದ ಎಲ್ಲಾ ಕಡೆಯೂ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರಕ್ಕೆ ಜನ ಆಶೀರ್ವಾದ ಮಾಡಿದ್ದಾರೆ ಎಂದು ಮಂಗಳೂರಿನಲ್ಲಿ ನಳಿನ್ ಕುಮಾರ್​ ಕಟೀಲ್ ಅವರು ಹೇಳಿದ್ದಾರೆ.

Next Story

RELATED STORIES