Top

ಹೆಚ್ಡಿಕೆಗೆ ಧಮ್ಕಿ ಹಾಕುವಂತಹವರು ರಾಜ್ಯದಲ್ಲಿ ಯಾರಾದರೂ ಇದ್ದಾರಾ? - ಸಚಿವ ಆರ್​ ಅಶೋಕ್​

ಕುಮಾರಸ್ವಾಮಿ, ಕಾಂಗ್ರೆಸ್ ಅವರಿಗೆ ಇದೊಂದು ಚಾಳಿ.

ಹೆಚ್ಡಿಕೆಗೆ ಧಮ್ಕಿ ಹಾಕುವಂತಹವರು ರಾಜ್ಯದಲ್ಲಿ ಯಾರಾದರೂ ಇದ್ದಾರಾ? - ಸಚಿವ ಆರ್​ ಅಶೋಕ್​
X

ಬೆಂಗಳೂರು: ಸಿದ್ದರಾಮಯ್ಯ ಒಬ್ಬರು ಲಾಯರ್, ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟವಾಗಿ ತೀರ್ಪು ಕೊಟ್ಟಿದೆ. ಕಾನೂನಿನ ಬಗ್ಗೆ ಗೌರವ ಇದ್ದರೆ ಇಂತಹ ಮಾತುಗಳು ಆಡಬಾರದು ಎಂದು ಕಂದಾಯ ಸಚಿವ ಆರ್​. ಅಶೋಕ್​ ಅವರು ಗುರುವಾರ ಹೇಳಿದ್ದಾರೆ.

ರಾಮಮಂದಿರ ನಿರ್ಮಾಣದ ದೇಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ದೇಣಿಗೆ ಕೊಡಲು ಇಷ್ಟ ಇದ್ರೆ ಕೊಡಲಿ, ಇಲ್ಲವಾದರೆ ಬಿಡಲಿ. ಅವರ ಊರಿನಲ್ಲಿ ಬೇಕಾದರೆ ಮಂದಿರ ಮಸೀದಿ, ಚರ್ಚ್ ಏನು ಬೇಕಾದರೂ ನಿರ್ಮಾಣ ಮಾಡಿಕೊಳ್ಳಲಿ. ಸುಮ್ಮನೆ ಈ ರೀತಿಯ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇನ್ನು ಹೆಚ್​.ಡಿ ಕುಮಾರಸ್ವಾಮಿ ಅವರೂ ಸಹಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಲೆಕ್ಕ ಕೊಡಿ ಎಂದಿದ್ದಾರೆ. ಅವರ ಮನೆಗೆ ಹೋಗಿ ಕೆಲವರು ಧಮಕಿ ಹಾಕಿ ವಸೂಲಿ ಮಾಡಲು ಯತ್ನಿಸಿದ್ದಾರೆ ಎಂದಿದ್ದಾರೆ. ಕುಮಾರಸ್ವಾಮಿ ಅವರಿಗೆ ಧಮ್ಕಿ ಹಾಕುವಂತಹವರು ರಾಜ್ಯದಲ್ಲಿ ಯಾರಾದರೂ ಇದ್ದಾರಾ(?) ಅವರೇ ಎಂಎಲ್​ಎಗಳಿಗೆ ಧಮಕಿ ಹಾಕುವವರು ಎಂದರು.

ಯಾರೂ ಕೂಡಾ ಬಲವಂತವಾಗಿ ವಸೂಲಿ ಮಾಡುತ್ತಿಲ್ಲ. ಕುಮಾರಸ್ವಾಮಿ, ಕಾಂಗ್ರೆಸ್ ಅವರಿಗೆ ಇದೊಂದು ಚಾಳಿ. ಹಣ ಕೊಟ್ಟವರಿಗೆ ಲೆಕ್ಕ ಕೇಳುವ ಅಧಿಕಾರ ಇದೆ. ಆದರೆ ಅವರೇ ಸುಮ್ಮನಿದ್ದಾರೆ. ಇವರು ಒಂದು ಪೈಸೆ ಕೂಡಾ ಕೊಡದೇ ಲೆಕ್ಕ ಕೊಡಿ ಅಂತಿದಾರೆ. ಇವರು ಯಾರೀ ಲೆಕ್ಕ ಕೇಳೋಕೆ ಎಂದು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ವಿರುದ್ದ ಕಂದಾಯ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ.

ಯಾವುದೇ ಜಾತಿ, ಸಮುದಾಯಗಳಿಗೆ ಅನ್ಯಾಯ ಆಗಬಾರದು. ಒಬ್ಬರಿಗೆ ಮೀಸಲಾತಿ ನೀಡುವುದರಿಂದ ಇತರೆ ಸಣ್ಣಸಣ್ಣ ಸಮುದಾಯಗಳಿಗೆ ಅನ್ಯಾಯ ಆಗಬಾರದು. ಒಕ್ಕಲಿಗ ಸಮುದಾಯದವರು ಮೀಸಲಾತಿಗೆ ಬೇಡಿಕೆ ಇಟ್ಟಿದ್ದಾರೆ. ನಿರ್ಮಲಾನಂದನಾಥ ಸ್ವಾಮಿಜಿಗಳ ಜೊತೆ ನಾನು ಮಾತನಾಡುತ್ತೇನೆ. ಸಣ್ಣಸಣ್ಣ, ತೀರಾ ಹಿಂದುಳಿದ ಸಮುದಾಯಗಳಿಗಾಗಿ ಅಂಬೇಡ್ಕರ್ ಮೀಸಲಾತಿ ತಂದಿದರು, ಅವರ ಮೂಲ ಆಶಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಸಿಎಂ ತೀರ್ಮಾನ ಮಾಡ್ತಾರೆ ಎಂದು ಸಚಿವ ಅಶೋಕ್ ಅವರು ಮಾತನಾಡಿದ್ದಾರೆ.

Next Story

RELATED STORIES