Top

ನಾನೇನು ಅಲ್ಲಿ ಕಣ್ಣೀರು ಹಾಕಿಲ್ಲ - ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

ಶಿರಾದಲ್ಲಿ ಕೆಲಸ ಮಾಡಿದ್ದೇವೆ. ನಮಗೆ ವಿಷ ಕೊಡ್ತಿರೋ, ಹಾಲು ಕೊಡ್ತಿರೋ ಅಂತ ಅಂದಿದ್ದೆ.

ನಾನೇನು ಅಲ್ಲಿ ಕಣ್ಣೀರು ಹಾಕಿಲ್ಲ - ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ
X

ಬೆಂಗಳೂರು: ಸದ್ಯಕ್ಕೆ ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲ್ಲ, ಜನಪ್ರತಿಧಿಗಳು ಪ್ರಾಮಾಣಿಕರಾಗಿ ಕೆಲಸ ಮಾಡಿದಾಗ ಯಾವದಕ್ಕೂ ಅಂಜುವ ಅಗತ್ಯ ಇಲ್ಲ. ಪ್ರಾಮಾಣಿಕರಿದ್ದಾಗ ಯಾವದಕ್ಕೂ ಭಯ ಪಡುವ ಅವಷ್ಯಕತೆ ಇರಲ್ಲ. ಸ್ವತಂತ್ರ ತನಿಖಾ ಸಂಸ್ಥೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನೇಕ ಚರ್ಚೆಗಳು ನಡೆದಿವೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಡಿಕೆಶಿ ನಿವಾಸಗಳ ಮೇಲೆ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್​ನವರು ಮತ್ತೊಬ್ಬರ ಹೆಗಲ ಮೇಲೆ ಅಧಿಕಾರಕ್ಕೆ ಬರೋರು ಎಂದಿದ್ದಾರೆ. ನಾನು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ, ಅಡ್ಡ ಪಲ್ಲಕ್ಕಿ ತಂದೋರೂ ನೀವೇ(!) ಅಡ್ಡ ಪಲ್ಲಕ್ಕಿಯಲ್ಲಿ ನಾನು ಕೂರಲ್ಲ ಅಂದರೂ ನೀವೇ ಕೂರಬೇಕು ಅಂದ್ರಿ. ಆ ಮೇಲೆ ಅಡ್ಡಪಲ್ಲಕ್ಕಿ ನಡುರಸ್ತೆಲಿ ಬಿಟ್ಟು ಹೋದ್ರಿ. ಜೆಡಿಎಸ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಬೇಡಿ. ಹಿಂದೆ ಜೆಡಿಎಸ್​ನಲ್ಲಿದ್ದಾಗ ದೇವೆಗೌಡರು ವ್ಯಕ್ತಿಯಲ್ಲ, ಶಕ್ತಿ ಅಂತ ಹೇಳಿದವರು ಯಾರು(?) ಯಾವ ಪಕ್ಷ ಅವರನ್ನು ಬೆಳೆಸಿತು(?) ಅವರ ಕಾಂಗ್ರೆಸ್ ಪಕ್ಷ ಏನಾಗಿದೆ ದೇಶದಲ್ಲಿ ಅಂತ ನೋಡಿಕೊಳ್ಳಲಿ. ಯಾರ್ಯಾರ ಹೆಗಲ ಮೇಲೆ ಕೂತು ಅಧಿಕಾರ ಹಿಡಿದಿದ್ದಾರೆ(?) ಎಂದು ಹೆಚ್ಡಿಕೆ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ನಾವು ಎರಡೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ಕುಮಾರಸ್ವಾಮಿ ಶಿರಾದಲ್ಲಿ ಅಳ್ತಿದ್ದ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ನಾನೇನು ಅಲ್ಲಿ ಕಣ್ಣೀರು ಹಾಕಿಲ್ಲ. ಶಿರಾದಲ್ಲಿ ಕೆಲಸ ಮಾಡಿದ್ದೇವೆ. ನಮಗೆ ವಿಷ ಕೊಡ್ತಿರೋ, ಹಾಲು ಕೊಡ್ತಿರೋ ಅಂತ ಅಂದಿದ್ದೆ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ಸ್ಪಷ್ಟನೆ ನೀಡಿದರು.

ಬಿಜೆಪಿ-ಜೆಡಿಎಸ್ ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಹಿಂದೆ ಚುನಾವಣೆಯ ಸಂದರ್ಭದಲ್ಲಿಯೂ ಮುಸ್ಲಿಂ ಬಾಂಧವರಿಗೆ ಜೆಡಿಎಸ್​ಗೆ ಮತ ಹಾಕಬೇಡಿ ಅಂದಿದರು. ಜೆಡಿಎಸ್​ಗೆ ಮತ ಹಾಕಿದರೆ ಬಿಜೆಪಿಗೆ ಓಟ್ ಮಾಡಿದಂಗೇನೇ. ಜೆಡಿಎಸ್, ಬಿಜೆಪಿಯ ಬಿ ಟೀಂ ಅಂತ ಸಿದ್ದರಾಮಯ್ಯ ಹೇಳಿದರು. ಈಗ ಮತ್ತೆ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.

ಇನ್ನು ಡಾ.ರಾಜೇಶ್ ಗೌಡ ಬಿಜೆಪಿ ಸೇರಿದ್ದಾನೆ. ಅವರು ಹಾಗೂ ನಿಮ್ಮ ಪುತ್ರ ಯತೀಂದ್ರ ನಡುವಿನ ಸಂಬಂಧ ಏನು(?) ಅವರು ಹಾಗೂ ಯತೀಂದ್ರ ಕ್ಲೋಸ್ ಫ್ರೆಂಡ್ಸ್ ಅಲ್ವಾ(?) ಇಬ್ಬರೂ ಬ್ಯುಸಿನೆಸ್ ಪಾರ್ಟನರ್ಸ್ ಅಲ್ವಾ(?) ಅವರು ಯಾರ ಚಿತಾವಣೆ ಮೇಲೆ ಹೋಗಿದ್ದಾನೆ ಬಿಜೆಪಿಗೆ(?) ಅವರು ನಿಮ್ ಚಿತಾವಣೆಯಿಂದಲೇ ಬಿಜೆಪಿಗೆ ಹೋಗಿರಬೇಕು ಎಂದು ಹೆಚ್ಡಿಕೆ ಅವರು ಹೊಸ ಬಾಂಬ್ ಸಿಡಿಸಿದರು.

Next Story

RELATED STORIES