ನನಗೆ 12 ವರ್ಷದಲ್ಲೆ 60 ವರ್ಷಗಳ ರಾಜಕೀಯ ಅನುಭವ ಆಗಿದೆ - ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ
- ಸರ್ಕಾರ ಪತನವಾಗಲು ಅಕ್ರಮ ಮಾಫಿಯಾ ಹಣ ಕಾರಣ.
- ನಾನು ಯಾವ ಬಿಜೆಪಿ ಮುಖಂಡನ ಹೆಸರು ಹೇಳಿಲ್ಲ.
- ಯಾವುದೇ ಆರೋಪ ಮಾಡುವಾಗ ದಾಖಲೆ ಸಮೇತ ಇಡಬೇಕು.
ರಾಮನಗರ: ರಾಜ್ಯದಲ್ಲಿ ನಡೆದ ಕೊರೋನಾ ಗೋಲ್ ಮಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ಆರೋಪ ಸಾಬೀತುಪಡಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಯಾವುದೇ ಆರೋಪ ಮಾಡಿದ್ರೆ ಅದಕ್ಕೆ ದಾಖಲೆ ಇಡಬೇಕು ಎಂದು ಕಾಂಗ್ರೆಸ್ ಆರೋಕ್ಕೆ ತಿರುಗೇಟು ನೀಡಿದ್ದಾರೆ.
ಚನ್ನಪಟ್ಟಣದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸರಿಯಾದ ದಾಖಲೆ ತೋರಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಮಾಡಿದ್ದು ನಾನು. ಹೆಸರು ಮಾಡಿಕೊಂಡಿದ್ದು ಮಾತ್ರ ಕಾಂಗ್ರೆಸ್. ಅಧಿಕೃತ ವಿರೋಧ ಪಾರ್ಟಿ ಕಾಂಗ್ರೆಸ್, ಸರ್ಕಾರ ವೈಫಲ್ಯ ತೋರಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ.
ಇನ್ನು ವರ್ಗಾವಣೆ ದಂಧೆ ನಡೆಯುತ್ತಿದೆ. ಪಿಡಿಓ ವರ್ಗಾವಣೆ ದಂಧೆ ಮಾಡಲು ಹೊರಟಿದ್ದಾರೆ. ಅಧಿಕಾರಿಗಳಿಂದ ಮಂತ್ಲಿ ವಸೂಲಿ ಮಾಡುತ್ತಿದ್ದಾರೆ. ಒಳ್ಳೆ ಕೆಲಸ ಮಾಡೋ ಅಧಿಕಾರಿಗಳಿಗೆ ನನ್ನ ಸಾಥ್ ಇದೆ ಎಂದು ಪರೋಕ್ಷವಾಗಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಅವರಿಗೆ ಟಾಂಗ್ ನೀಡಿದ್ದಾರೆ.
ನನ್ನ ಸರ್ಕಾರ ಪತನವಾಗಲು ಅಕ್ರಮ ಮಾಫಿಯಾ ಹಣ ಕಾರಣ. ನಾನು ಯಾವ ಬಿಜೆಪಿ ಮುಖಂಡನ ಹೆಸರು ಹೇಳಿಲ್ಲ ಎಂದಿದ್ದಾರೆ.
ಸಚಿವ ಸಿ.ಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ನಶೆ ಬರಿಸಲು ಯಾರಿಂದಲೂ ಆಗೋದಿಲ್ಲ. ನನಗೆ ಅಧಿಕಾರಿ ಇದ್ದಾಗಲು ಮತ್ತಿಲ್ಲ, ಬಿಟ್ಟಾಗಲು ನಶೆ ಬರೋದಿಲ್ಲ. ಅಧಿಕಾರ ಬಂದಾಗ ಕೆಲವರಿಗೆ ಅಧಿಕಾರದ ನಶೆ ಇರುತ್ತೆ. ಅಧಿಕಾರಿ ಎಂದೂ ಶಾಶ್ವತ ಅಲ್ಲ, ನಾನು ಅಧಿಕಾರ ಹಿಂದೆ ಅಂಟಿಕೊಂಡು ಕೂತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಮಂಗಳೂರು ಗಲಭೆಯಾಗಿ ವರ್ಷ ಆಯ್ತು. ತನಿಖೆ ನಡೆಯುತ್ತಲೆ ಇದೆ. ಮೊನ್ನೆ ಡಿ.ಜೆ ಹಳ್ಳಿ ಗಲಭೆ ಆಯ್ತು. ಅದರಲ್ಲೂ ತನಿಖೆ ನಡೆಯುತ್ತಲೆ ಇದೆ. ಈಗ ಡ್ರಗ್ಸ್ ದಂಧೆ ನಡೆದಿದೆ. ಅದು ಕೂಡ ತನಿಖೆಯಾಗುತ್ತಿದೆ. ಈ ಎಲ್ಲಾ ಘಟನೆಗಳ ತನಿಖೆ ಮಾಡುತ್ತಲೆ ಇದೆ ಅಷ್ಟೇ. ಈ ಘಟನೆಗಳ ಕಿಂಗ್ಫಿಂಗ್ ಅರೆಸ್ಟ್ ಮಾಡಲು ಸರ್ಕಾರ ದಿಟ್ಟತನ ಬೇಕಲ್ಲ ಎಂದು ಸರ್ಕಾರದ ವಿರುದ್ಧ ನೇರವಾಗಿ ಆರೋಪ ಮಾಡಿದರು.
ದೇಶದಲ್ಲಿ ಆರ್ಥಿಕತೆ ಸಂಪೂರ್ಣ ಕುಸಿದು ಹೋಗಿದೆ. ಆರ್ಥಿಕತೆ ಸರಿ ದೂಗಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ 20 ಲಕ್ಷ ಕೋಟಿ ಪ್ಯಾಕೇಜ್ ಏನಾಯ್ತು. ಕೇಂದ್ರ ಹಣ ನಿಜವಾಗಲೂ ಫಲಾನುಭವಿಗಳಿಗೆ ತಲುಪುತ್ತಿಲ್ಲ, ನನಗೆ 12 ವರ್ಷದಲ್ಲೆ 60 ವರ್ಷಗಳ ರಾಜಕೀಯ ಅನುಭವ ಆಗಿದೆ. ನಾನು ಮಾತೋಡದನ್ನ ಬಿಟ್ಟಿದ್ದೇನೆ. ಮಾತನಾಡ್ರೆ ಸಾಕಷ್ಟು ವಿಷಯಗಳಿವೆ. ಯಾವುದೇ ಆರೋಪ ಮಾಡುವಾಗ ದಾಖಲೆ ಸಮೇತ ಇಡಬೇಕು ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.