Top

ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡಬೇಡಿ-ಹೆಚ್​.ವಿಶ್ವನಾಥ್

ಬದಲಾವಣೆಗೆ ಎಲ್ಲರೂ ಬೆಂಬಲ ನೀಡಿದ್ರು. ಆದರೆ ಪಕ್ಷ ಸೇರಿದ ಮೇಲೆ ವಿಜಯೇಂದ್ರ ರೀತಿ ಕೊಡಿ‌ ಕೊಡಿ ಅನ್ನೋದಕ್ಕೆ ಶುರು ಮಾಡಿದ್ರು

ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡಬೇಡಿ-ಹೆಚ್​.ವಿಶ್ವನಾಥ್
X

ಮೈಸೂರು: ಮುಂದೆ ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡಬೇಡಿ ಎಂದು ಎಂಎಲ್​ಸಿ ಹೆಚ್​.ವಿಶ್ವನಾಥ್​ ತಮ್ಮ ಜೊತೆಗೆ ಬಿಜೆಪಿಗೆ ಬಂದ ಇತರ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬದಲಾವಣೆಗಾಗಿ ಎಲ್ಲರೂ ಬೆಂಬಲವನ್ನು ನೀಡಿದ್ದರು. ಆದರೆ ಅಧಿಕಾರ ಸಿಕ್ಕ ಮೇಲೆ ಎಲ್ಲರು ಬದಲಾದರು. ಎಲ್ಲರೂ ಯಡಿಯೂರಪ್ಪ ಪುತ್ರ ವಿಜಯೇಂದ್ರ ರೀತಿ ಕೊಡಿ‌ ಕೊಡಿ ಅನ್ನೋದಕ್ಕೆ ಶುರು ಮಾಡಿದರು ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನು ಬಾಂಬೆ ಟೀಂನ ನನ್ನ ಸ್ನೇಹಿತರಿಗೆಲ್ಲಾ ಯಡಿಯೂರಪ್ಪ ಸಿಎಂ ಆಗಿರಲಿಲ್ಲ. ಅವರಿಗೆಲ್ಲಾ ವಿಜಯೇಂದ್ರ ಸಿಎಂ ಆಗಿದ್ದರು. ಮುಂದೆ ಆ 17 ಜನಕ್ಕೆ ಅಧಿಕಾರ ನೀಡದಿದ್ದರು ಪರವಾಗಿಲ್ಲ. ಅವರು ಎಲ್ಲಿಗೂ ಹೋಗುವುದಿಲ್ಲ. ಒಂದು ವೇಳೆ ಹೋದರೆ ಹೋಗಲಿ. ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯಲಿ ಎಂದರು.

Next Story

RELATED STORIES