Top

ಸಿದ್ದರಾಮಯ್ಯ, ಡಿಕೆಶಿ ಟೀಕೆ ಮಾಡಲು ಸಹ ವಿಫಲರು-ಈಶ್ವರಪ್ಪ ವ್ಯಂಗ್ಯ

ಪ್ರಪಂಚದಲ್ಲಿ ಆಗದಿರುವಷ್ಟು ಒಳ್ಳೆ ಕೆಲಸವನ್ನು ಮೋದಿ ಮಾಡಿದ್ದಾರೆ

ಸಿದ್ದರಾಮಯ್ಯ, ಡಿಕೆಶಿ ಟೀಕೆ ಮಾಡಲು ಸಹ ವಿಫಲರು-ಈಶ್ವರಪ್ಪ ವ್ಯಂಗ್ಯ
X

ಶಿವಮೊಗ್ಗ: ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಕಾಂಗ್ರೆಸ್ ನವರು ಟೀಕೆ ಮಾಡಲು ಸಹ ವಿಫಲರು. ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿ ಸಹ ವಿಫಲವಾಗಿದ್ದಾರೆ. ಸಿದ್ದರಾಮಯ್ಯರಿಗೆ ಬುದ್ದಿ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪಂಚದಲ್ಲಿ ಆಗದಿರುವಷ್ಟು ಒಳ್ಳೆ ಕೆಲಸವನ್ನು ಮೋದಿ ಮಾಡಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಮಂದಿಗೆ ಲಸಿಕೆ ಕೊಟ್ಟಿರುವ ದೇಶ ಭಾರತ. ಕರ್ನಾಟಕದಲ್ಲೂ ಸಹ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳ ಬೇಡಿ ಎಂದು ಕಾಂಗ್ರೆಸ್ ನಾಯಕರೇ ಹೇಳಿದ್ದರು. ಲಸಿಕೆಯನ್ನು ಮೋದಿ ವ್ಯಾಕ್ಸಿನ್, ಬಿಜೆಪಿ ವ್ಯಾಕ್ಸಿನ್ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಆದರೆ ಈಗ ಅದೇ ಕಾಂಗ್ರೆಸ್​ನವರು ವ್ಯಾಕ್ಸಿನ್​ಗಾಗಿ ಕ್ಯೂ ನಿಂತಿದ್ದಾರೆ. ಜನರ ತಯಾರಿದ್ದರೂ ದಿಕ್ಕು ತಪ್ಪಿಸಿದ್ದು ಕಾಂಗ್ರೆಸ್ನವರು. ಈಗ ನರೇಂದ್ರ ಮೋದಿ, ಬಿಜೆಪಿ ಸರ್ಕಾರದ ವಿರುದ್ಧ ಆಪಾದಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬುದ್ದಿ ಇಲ್ಲ ಅಂತಾ ಅದಕ್ಕೆ ಎಂದು ಕಾಂಗ್ರೆಸ್​ ವಿರುದ್ಧ ಕಿಡಿ ಕಾರಿದ್ದಾರೆ.

ಇನ್ನು ಪ್ರತಿ ವ್ಯಕ್ತಿಗೆ ಉಚಿತ ಲಸಿಕೆ ಕೊಡ್ತೀನಿ ಎಂದು ಹೇಳಿದ ಮೊದಲ ಪ್ರಧಾನಿ ಮೋದಿ. ಒಂದು ಕಡೆ ಉಚಿತ ವ್ಯಾಕ್ಸಿನ್, ಮತ್ತೊಂದೆಡೆ ಉಚಿತ ರೇಷನ್​ ನರೇಂದ್ರ ಮೋದಿ ಅವರು ನಮ್ಮ ಪ್ರಧಾನಿ ಆಗಿರುವುದು ಪುಣ್ಯ. ಸರಿಯಾಗಿ ಟೀಕೆ ಮಾಡುವುದರಲ್ಲೂ ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ನಾಶವಾಗುತ್ತಿದೆ ಎಂದು ಈಶ್ವರಪ್ಪ ಟೀಕಿಸಿದ್ದಾರೆ.

Next Story

RELATED STORIES